ತಮ್ಮ ಮೇಲಿನ ಮುಡಾ ನಿವೇಶನ ಆರೋಪಕ್ಕೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ

ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ಭಾರೀ ಸದ್ದು ಮಾಡುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜುಲೈ 26) ಮುಡಾ ಸೈಟ್ ಪಡೆದುಕೊಂಡ ಬಿಜೆಪಿ ಮತ್ತು ಜೆಡಿಎಸ್​ ನಾಯಕರ ಪಟ್ಟಿ ಬಿಡುಗಡೆ ಮಾಡಿದರು. ಅದರಲ್ಲೂ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಸೈಟ್​ ಪಡೆದಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇನ್ನು ಇದೀಗ ಇದಕ್ಕೆ ಸ್ವತಃ ಎಚ್​ಡಿಕೆ ನವದೆಹಲಿಯಿಂದ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಮೇಲಿನ ಮುಡಾ ನಿವೇಶನ ಆರೋಪಕ್ಕೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ
ಮುಡಾ ಹಗರಣ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 26, 2024 | 6:04 PM

ನವದೆಹಲಿ, (ಜುಲೈ 26): ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ತೇಲಿಬಂದಿದೆ. ಹೀಗಾಗಿ ಈ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ವಿಪಕ್ಷಗಳು ಸಿಎಂ ರಾಜೀನಾಮೆಗೆ ಆಗ್ರಹಿಸಿವೆ. ಇನ್ನು ತಮ್ಮ ಮೇಲಿನ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ ಹಗರಣದ ಬಗ್ಗೆ ಮಾಹಿತಿ ನೀಡಿದರು. ಇನ್ನು ಮುಡಾ ಸೈಟ್ ಪಡೆದುಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರ ಹೆಸರು ಸಹ ಇದೆ. ಹೀಗಾಗಿ ಕುಮಾರಸ್ವಾಮಿ ಅವರು ನವದೆಹಲಿಯಿಂದಲೇ ಸ್ಪಷ್ಟನೆ ನೀಡಿದ್ದು, ಬೆಂಗಳೂರಿನಲ್ಲಿ ಏನೆಲ್ಲ ನಡೆದಿದೆ. ತೆಗೆದರೆ ಬ್ರಹ್ಮಾಂಡ ಇದೆ. 2017 ರಲ್ಲಿ ಮತ್ತೊಂದು ಪತ್ರ ಬರೆದಿದ್ದೆ. ಸಾರಾ ಮಹೇಶ ನ್ಯಾಯವಾದ ಸೈಟ್ ಪಡೆದುಕೊಳ್ಳಿ ಎಂದು ಮನವಿ ಮಾಡಿದರು, ಅದಕ್ಕಾಗಿ ಪತ್ರ ಬರೆದೆ. 40 ವರ್ಷ ಆದರೂ ನನಗೆ ಬದಲಿ ನಿವೇಶನ ನೀಡಿಲ್ಲ. ದುಡ್ಡು ಕೊಟ್ಟರೂ ನನಗೆ ಈವರೆಗೂ ನಿವೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಏನೆಲ್ಲ ನಡೆದಿದೆ. ತೆಗೆದರೆ ಬ್ರಹ್ಮಾಂಡ ಇದೆ. 2017 ರಲ್ಲಿ ಮತ್ತೊಂದು ಪತ್ರ ಬರೆದಿದ್ದೆ. ಸಾರಾ ಮಹೇಶ ನ್ಯಾಯವಾದ ಸೈಟ್ ಪಡೆದುಕೊಳ್ಳಿ ಎಂದು ಮನವಿ ಮಾಡಿದರು, ಅದಕ್ಕಾಗಿ ಪತ್ರ ಬರೆದೆ. 40 ವರ್ಷ ಆದರೂ ನನಗೆ ಬದಲಿ ನಿವೇಶನ ನೀಡಿಲ್ಲ. ದುಡ್ಡು ಕೊಟ್ಟರೂ ನನಗೆ ಈವರೆಗೂ ನಿವೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮುಡಾ ಸೈಟ್​ ಪಡೆದ ಬಿಜೆಪಿ-ಜೆಡಿಎಸ್​ ನಾಯಕರ ಪಟ್ಟಿ ಬಿಡುಗಡೆ ಮಾಡಿದ ಸಚಿವ ಬೈರತಿ ಸುರೇಶ್

2017 ರಲ್ಲಿ ಹಂಚಿಕೆಯಾದ ನಿವೇಶನದಲ್ಲಿ 8000 ಚದರಾಡಿ ಕಡಿಮೆಯಾಗಿದೆ ಎಂದು ಮೂಡಾ ಹೇಳಿತ್ತು. ಕುಮಾರಸ್ವಾಮಿ ನಾನು ಸಾಮಾನ್ಯ ಪ್ರಜೆ. ಪ್ರಜೆಯಾಗಿ ಒಂದು ಅರ್ಜಿ ಹಾಕಲು ಅಧಿಕಾರ ಇಲ್ವಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ನನ್ನ ಪರಿಸ್ಥಿತಿ ಹೀಗೆ ಆದರೆ ಬಡವರ ಪರಿಸ್ಥಿತಿ ಏನು? ಯಾವ ತನಿಖೆ ಮಾಡ್ತೀರಿ, ಇದನ್ನು (ಮುಡಾ ಸೈಟ್) ನಿಮ್ಮ‌ (ಸಿದ್ದರಾಮಯ್ಯ) ಮಗ, ಹೆಂಡ್ತಿ ಹೆಸರಿಗೆ ಅಥವಾ ಬೈರತಿ ಸುರೇಶ್ ಹೆಸರಿಗೆ ಬರೆಯುತ್ತೇನೆ ಎಂದು ಹೇಳಿದರು.

ಅಂದಿನಿಂದಲೂ ಈ ಆರೋಪ ನಡೆಯುತ್ತಿದೆ. ಸಿಐಡಿ ಲೋಕಾಯುಕ್ತ ತನಿಖೆ ನಡೆದಿದೆ. ಐದನೂರಕ್ಕೂ ಹೆಚ್ಚಿನ ನಿವೇಶನ ಪಡೆದಿದೆ ಎಚ್‌ಡಿಡಿ ಕುಟುಂಬ ಎಂದು ಆರೋಪ ಮಾಡಿದ್ದರು. ಎಲ್ಲ ತನಿಖೆ ಮಾಡಿದ ಬಳಿಕವೂ ಸಾಬೀತಾಗಿಲ್ಲ. ಹೆಚ್‌ಡಿ ದೇವೇಗೌಡರು ಒಂದು ಸೈಟಿಗೆ ಮನವಿ ಮಾಡಿದ್ದರು. ನಮ್ಮ ಚಿಕ್ಕಮನಿಗೆ ಸೈಟು ಕೊಡಿ ಎಂದು ಮನವಿ ಮಾಡಿದ್ದರು. ಯಡಿಯೂರಪ್ಪ ಕಾಲದಲ್ಲೂ ತನಿಖೆ ಆಯ್ತು, ಏನು ಆಗಲಿಲ್ಲ. 2000 ರಲ್ಲಿ ನಾನು ಒಂದು ಪತ್ರ ಬರೆದಿದ್ದೆ. 70X280 ಸೈಟ್ ನೀಡಿದ ಪತ್ರ ನೀಡಿದ್ದೀರಿ, ಆದರೆ ಹಕ್ಕು ಪತ್ರ ನೀಡಿಲ್ಲ ಎಂದು ಪತ್ರ ಬರೆದಿದ್ದೆ. 2006 ರಲ್ಲಿ ಸಿಎಂ ಆಗಿದ್ದೆ ಮುಖ್ಯಮಂತ್ರಿಯಾಗಿ ಈ ಸೈಟು ತಗೊಳ್ಳಲು ಆಗುತ್ತಿರಲಿಲ್ವಾ ಎಂದು ಪ್ರಶ್ನಿಸಿದರು.

14 ಅಲ್ಲ 24, ಅಲ್ಲ 44 ಸೈಟು ತೆಗೆದುಕೊಳ್ಳಿ. ಕಾನೂನಿನ ವ್ಯಾಪ್ತಿಯಲ್ಲಿದ್ದರೆ ತಗೊಳ್ಳಿ ನನ್ನ ತಕರಾರು ಇಲ್ಲ. 16/2 ಆದ್ಮೇಲೆ ಆ ಜಮೀನು ಸರ್ಕಾರದ್ದು. ಭೂ ಸ್ವಾಧೀನದಿಂದ ಕೈ ಬಿಟ್ಟು ವಶಪಡಿಸಿಕೊಂಡಿದ್ದೀರಿ. ಡಿ ನೋಟೀಪಿಕೇಷನ್ ಗೆ ಅರ್ಜಿ ಕೊಟ್ಟಿದ್ದ ಯಾರು? 1992ರಲ್ಲಿ ಅರ್ಜಿ ಕೊಟ್ಟಿದ್ದಾರೆ. ನಿಂಗ ಯಾವಗ ತೀರಿಕೊಂಡ, ತೀರಿಕೊಂಡವರ ಹೆಸರಿಗೆ ಡಿನೋಟಿಫೈ ಮಾಡಿದ್ದಾರೆ. ಇದರ ಬಗ್ಗೆ ಜನರಿಗೆ ಹೇಳಿ ಸಿದ್ದರಾಮಯ್ಯ ಅವರೇ ಎಂದು ಸವಾಲು ಹಾಕಿದರು.

2001, 2003 ರಲ್ಲಿ ನಿವೇಶನ ಹಂಚಿಯಾಗಿದೆ. ಬಳಿಕ ಕೃಷಿ ಜಮೀನು ಎಂದು ಸಿದ್ದರಾಮಯ್ಯ ಬಾಮೈದ ಖರೀದಿ ಮಾಡಿದ್ದಾರೆ. 2005 ರಲ್ಲಿ ಕೃಷಿಯಿಂದ NA ಗಾಗಿ ಮನವಿ ಮಾಡಿದ್ದಾರೆ. ಬದಲಾವಣೆ ಮಾಡವಾಗ ಅಧಿಕಾರಿಗಳು ಪರಿಶೀಲಿಸಿದ್ರಾ? ಈ ಅವಧಿಯಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಗಳಾಗಿದ್ದರು ಎಂದು ವಾಗ್ದಾಳಿ ನಡೆಸಿದರು.

ತಂಗಿ ಹೆಸರಿಗೆ ದಾನ ಮಾಡುವಾಗಲೂ ಕೃಷಿ ಭೂಮಿ ಅಂತಲೇ ಮಾಡಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಿ ಭೂಮಿ ನಮ್ಮದು ಎಂದು 14 ಸೈಟು ತೆಗೆದುಕೊಂಡಿದ್ದೀರಿ. ಕಾನೂನು ವ್ಯಾಪ್ತಿಯಲ್ಲಿ ಏನಾಗಬೇಕು? ನ್ಯಾಯಂಗ ತನಿಖೆ ಮಾಡಲು ಯಾರು ಹೇಳಿದರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!