- Kannada News Photo gallery Hindu Mahaganapati installation in the grand hall of Chitradurga: Here are the photos, Karnataka news in kannada
ಚಿತ್ರದುರ್ಗದ ಭವ್ಯ ಮಂಟಪದಲ್ಲಿ ವಿರಾಜಮಾನನಾದ ಹಿಂದೂ ಮಹಾಗಣಪತಿ: ಇಲ್ಲಿವೆ ಫೋಟೋಸ್
ಪ್ರತಿವರ್ಷದಂತೆ ಈವರ್ಷವೂ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಚಿತ್ರದುರ್ಗದ ಜೈನ ಧಾಮದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದೆ. ಈ ವೇಳೆ ಶಿವಶರಣ ಮಾದಾರ ಚನ್ನಯ್ಯ ಮಠದ ಮಾದಾರ ಚನ್ನಯ್ಯ ಶ್ರೀ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀ ಸೇರಿದಂತೆ ವಿವಿಧ ಮಠಾಧೀಶರ ಆಗಮಿಸಿದ್ದರು. ಸೆ. 28ಕ್ಕೆ ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯಲಿದ್ದು ಪ್ರತಿ ವರ್ಷದಂತೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ.
Updated on: Sep 07, 2024 | 8:00 PM

ಕೋಟೆನಾಡು ಚಿತ್ರದುರ್ಗದ ಗಣೇಶೋತ್ಸವ ನಾಡಿನ ಗಮನ ಸೆಳೆದಿದೆ. ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದೆ. ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಯ ಭವ್ಯ ಮಂಟಪ ಹೇಗಿದೆ ನೋಡೋಣ ಬನ್ನಿ.

ಚಿತ್ರದುರ್ಗದಲ್ಲಿ ಜೈನ ಧಾಮದಲ್ಲಿ 18ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿದ್ದು, ಆಸ್ಥಾನ ಮಂಟಪದಲ್ಲಿ ಗರೂಢಾರೂಢ ಹಿಂದೂ ಮಹಾಗಣಪತಿ ವಿರಾಜಮಾನನಾಗಿದ್ದಾನೆ. ಮಠಾಧೀಶರ ಸಾನಿಧ್ಯದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದೆ.

ಪ್ರತಿವರ್ಷದಂತೆ ಈವರ್ಷವೂ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಹಿಂದೂ ಮಹಾಗಣಪತಿಯನ್ನು ಕುರಿಸಿದ್ದು, ಈ ವೇಳೆ ಶಿವಶರಣ ಮಾದಾರ ಚನ್ನಯ್ಯ ಮಠದ ಮಾದಾರ ಚನ್ನಯ್ಯ ಶ್ರೀ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀ ಸೇರಿದಂತೆ ವಿವಿಧ ಮಠಾಧೀಶರ ಆಗಮಿಸಿದ್ದರು. ಚಿತ್ರದುರ್ಗದ ಬಿಜೆಪಿ ಸಂಸದ ಗೋವಿಂದ ಕಾರಜೋಳ, ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ ಸಿ ವಿರೇಂದ್ರ ಪಪ್ಪಿ ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ದರು.

ಇನ್ನು ಗಣೇಶೋತ್ಸವ ಹಿನ್ನೆಲೆ ಜೈನಧಾಮ ಬಳಿ ರಸ್ತೆ ಉದ್ದಕ್ಕೂ ದೀಪಲಂಕಾರ ಮಾಡಲಾಗಿದೆ. ಅಲ್ಲದೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಿದ ಆಸ್ಥಾನ ಮಂಟಪ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

ಮಂಟಪದಲ್ಲಿ ಶ್ರೀರಾಮ, ಕೃಷ್ಣ, ಆಂಜನೇಯ ಸೇರಿ ವಿವಿಧ ಆಕರ್ಷಕ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಸೆಪ್ಟಂಬರ್ 28ರಂದು ಹಿಂದೂ ಮಹಾಗಣಪತಿ ಶೋಭಾ ಯಾತ್ರೆ ನಡೆಯಲಿದ್ದು ಲಕ್ಷಾಂತರ ಜನ ಸೇರಲಿದ್ದಾರೆ.

ಚಿತ್ರದುರ್ಗ ನಗರದಲ್ಲಿಂದು ಅದ್ಧೂರಿಯಾಗಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಕಾರ್ಯ ನಡೆದಿದೆ. ಭವ್ಯ ಮಂಟಪದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದ್ದು ದರ್ಶನಕ್ಕೆ ಭಕ್ತರು ಸಾಲುಗಟ್ಟಿದ್ದಾರೆ.

21ದಿನಗಳ ಕಾಲವೂ ಭಕ್ತರು ದರ್ಶನಕ್ಕೆ ಬರಲಿದ್ದು ನಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಸೆ. 28ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯಲಿದ್ದು ಪ್ರತಿ ವರ್ಷದಂತೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ.



