HD Revanna Kidnap Case: 3 ದಿನ ಆಪ್ತರು, ಕುಟುಂಬಸ್ಥರಿಗಿಲ್ಲ ರೇವಣ್ಣ ಭೇಟಿಗೆ ಅವಕಾಶ

ಮಹಿಳೆ ಕಿಡ್ನ್ಯಾಪ್ ಕೇಸ್‌ನಲ್ಲಿ ಹೆಚ್.ಡಿ.ರೇವಣ್ಣ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಅವರಿಗೆ ವಿಚಾರಣಾಧೀನ ಕೈದಿ ನಂಬರ್ 4567 ನೀಡಲಾಗಿದೆ. ಜೈಲು ಸೇರಿದ್ದ ಮೊದಲ ದಿನ ರಾತ್ರಿ ಸರಿಯಾಗಿ ನಿದ್ದೆ, ಊಟ ಮಾಡದೆ ತೊಳಲಾಡಿದ್ದ ರೇವಣ್ಣ, ಎರಡನೇ ದಿನವೂ ನೋವಿನಲ್ಲೇ ಸಮಯ ಕಳೆದಿದ್ದಾರೆ. ಇದರ ಮಧ್ಯೆ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಂದಿನಿಂದ ಮೂರು ದಿನ ಸರ್ಕಾರಿ ರಜೆ ಹಿನ್ನೆಲೆ ಆಪ್ತರು, ಕುಟುಂಬಸ್ಥರಿಗೆ ಭೇಟಿಗೆ ಅವಕಾಶವಿಲ್ಲ.

HD Revanna Kidnap Case: 3 ದಿನ ಆಪ್ತರು, ಕುಟುಂಬಸ್ಥರಿಗಿಲ್ಲ ರೇವಣ್ಣ ಭೇಟಿಗೆ ಅವಕಾಶ
3 ದಿನ ಆಪ್ತರು, ಕುಟುಂಬಸ್ಥರಿಗಿಲ್ಲ ರೇವಣ್ಣ ಭೇಟಿಗೆ ಅವಕಾಶ
Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on: May 10, 2024 | 3:39 PM

ಬೆಂಗಳೂರು, ಮೇ 10: ಕಿಡ್ನ್ಯಾಪ್ ಕೇಸ್​ನಲ್ಲಿ ಜೈಲು ಪಾಲಾಗಿರುವ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ (HD Revanna) ವಿಲ ವಿಲ ಅಂತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇವಣ್ಣ ಚಡಪಡಿಸುತ್ತಿದ್ದಾರೆ. ರಾತ್ರಿ ನಿದ್ರೆ ಇಲ್ಲದೆಯೇ ಹೈರಾಣಾಗಿದ್ದಾರೆ. ಇದರ ಮಧ್ಯೆ ರೇವಣ್ಣಗೆ ಮತ್ತೊಂದು ಶಾಕ್ ಎದುರಾಗಿದೆ. ಇಂದಿನಿಂದ ಮೂರು ದಿನ ಸರ್ಕಾರಿ ರಜೆ ಹಿನ್ನೆಲೆ ಆಪ್ತರು, ಕುಟುಂಬಸ್ಥರಿಗೆ ರೇವಣ್ಣ ಭೇಟಿಗೆ ಅವಕಾಶವಿಲ್ಲ. ಆಪ್ತರ ಭೇಟಿಯಿಂದ ತನ್ನ ದುಗುಡ ಹೇಳಿಕೊಳ್ಳುತ್ತಿದ್ದರು. ಆ ಮೂಲಕ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಅದಕ್ಕೂ ಸರ್ಕಾರಿ ರಜೆ ಅಡ್ಡಿಯಾಗಿದೆ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಹೆಚ್​​.ಡಿ.ರೇವಣ್ಣ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎಸ್​ಐಟಿ ಅಧಿಕಾರಿಗಳಿಂದ ಪಂಚನಾಮೆ ಸಾಧ್ಯತೆ ಹಿನ್ನೆಲೆ ಅಗತ್ಯವಿರುವ ಪರಿಕರಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಭದ್ರತೆ ನೀಡಲಾಗಿದೆ.

ಜಾಮೀನು ಸಿಗದ್ದಕ್ಕೆ ಜೈಲಿನಲ್ಲಿ ರೇವಣ್ಣ ಕಂಗಾಲು

ಜಾಮೀನು ನಿರೀಕ್ಷೆಯಲ್ಲಿದ್ದ ಹೆಚ್.ಡಿ.ರೇವಣ್ಣಗೆ ರಿಲೀಫ್ ಸಿಕ್ಕಿಲ್ಲ. ಜಾಮೀನು ಅರ್ಜಿ ವಿಚಾರಣೆಯನ್ನ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ. ಇದರಿಂದಾಗಿ ಕಂಗಾಲಾಗಿರುವ ಹೆಚ್.ಡಿ.ರೇವಣ್ಣ ಮತ್ತಷ್ಟು ಟೆನ್ಷನ್​ಗೆ ಒಳಗಾಗಿದ್ದಾರೆ. ಬೇಲ್ ಸಿಗದ್ದಕ್ಕೆ ರೇವಣ್ಣ ಮತ್ತಷ್ಟು ಮಂಕಾಗಿದ್ದಾರೆ ಎನ್ನಲಾಗಿದೆ.

ಹೊಟ್ಟೆ ನೋವಿನ ಬಳಿಕ ರೇವಣ್ಣಗೆ ಬೆನ್ನು ನೋವಿನ ಸಮಸ್ಯೆ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹೆಚ್.ಡಿ.ರೇವಣ್ಣ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಈಗ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಡಾ.ಹರ್ಷವರ್ಧನ್ ರೇವಣ್ಣಗೆ ಚಿಕಿತ್ಸೆಯನ್ನ ನೀಡಿದ್ದಾರೆ. ರೇವಣ್ಣ ಆರೋಗ್ಯದ ಮೇಲೆ ಜೈಲಿನ ಸಿಬ್ಬಂದಿ ನಿಗಾ ಇಟ್ಟಿದ್ದಾರೆ.

ಇದನ್ನೂ ಓದಿ: ಎಚ್‌.ಡಿ ರೇವಣ್ಣಗೆ ಮತ್ತೆ ಬಿಗ್‌ಶಾಕ್‌.. ಇನ್ನಷ್ಟು ದಿನ ಜೈಲುವಾಸ ಮುಂದುವರಿಕೆ!

ರೇವಣ್ಣಗೆ ಜೈಲಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಲಗಲು ದಿವಾನ್ ಕಾಟ್ ನೀಡಲಾಗಿದೆ. ಜೈಲಿನ ಕ್ವಾರಂಟೈನ್ ರೂಮ್​ನಲ್ಲಿ ಇದ್ದಾರೆ. ಈ ಹಿಂದೆ ಪಿಎಸ್​ಐ ನೇಮಕಾತಿಯ ಅಕ್ರಮ ಕೇಸ್​​ನಲ್ಲಿ ಅಮೃತ್ ಪಾಲ್ ಇದ್ದ ಕೊಠಡಿಯಲ್ಲಿಯೇ ರೇವಣ್ಣ ಇದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣಕ್ಕೆ ಸ್ಫೋಟಕ ತಿರುವು: ಸಂತ್ರಸ್ತೆಗೆ ಬೆದರಿಕೆ, ಮಹಿಳಾ ಆಯೋಗದಿಂದ ಬಹಿರಂಗ

ಹೆಚ್.ಡಿ.ರೇವಣ್ಣಗೆ ಧೈರ್ಯ ತುಂಬಲು ನಿನ್ನೆ ದಳ ಶಾಸಕರು ಭೇಟಿ ನೀಡಿದ್ದರು. ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ಅರಕಲಗೂಡು ಶಾಸಕ ಎ.ಮಂಜು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ರೇವಣ್ಣಗೆ ಮಾನಸಿಕ ಸ್ಥೈರ್ಯ ತುಂಬಿದ್ದರು. ಶಾಸಕರ ಭೇಟಿ ವೇಳೆ ನ್ಯಾಯಾಲಯ ಇದೆ, ಧರ್ಮ ಇದೆ ಅಂತಾ ಹೇಳಿರುವ ರೇವಣ್ಣ. ಸೋಮವಾರ ಏನಾಗುತ್ತೆ ನೋಡೋಣ ಅಂತಾ ತಿಳಿಸಿದ್ರಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ