ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ: 30ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವ್ಯತ್ಯಯ

ಬೆಂಗಳೂರಿನಲ್ಲಿ ಇಂದು ಎಲ್ಲೆಡೆ ಧಾರಾಕಾರ ಮಳೆ ಆಗಿದೆ. ದೆಹಲಿ, ಕೊಲ್ಕತ್ತಾ, ಮುಂಬೈ ಸೇರಿದಂತೆ ದೇಶದ ವಿವಿಧೆಡೆಗೆ ವಿಮಾನಗಳು ತೆರಳಬೇಕಿತ್ತು. ಆದರೆ ಮಳೆ ಸುರಿಯುತ್ತಿರುವುದರಿಂದ ಟೇಕಾಫ್, ಲ್ಯಾಂಡಿಂಗ್​ನಲ್ಲಿ ವ್ಯತ್ಯಯವಾಗಿದೆ. ಸಂಜೆಯಿಂದ ದೇವನಹಳ್ಳಿ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ. 

ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ: 30ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವ್ಯತ್ಯಯ
ದೇವನಹಳ್ಳಿ ಸುತ್ತಮುತ್ತ ಭಾರಿ ಮಳೆ: 30ಕ್ಕೂ ಹೆಚ್ಚು ವಿಮಾನ ಹಾರಾಟದಲ್ಲಿ ವ್ಯತ್ಯಯ
Edited By:

Updated on: Oct 19, 2024 | 9:53 PM

ಬೆಂಗಳೂರು ಗ್ರಾಮಾಂತರ, ಅಕ್ಟೋಬರ್​ 19: ಮೂರು ದಿನದ ಹಿಂದೆ ಬೆಂಗಳೂರಿನಲ್ಲಿ ಮಳೆ (rain) ಅಬ್ಬರಿಸಿ ಬೊಬ್ಬಿರಿದಿತ್ತು. ಮಳೆ ಆರ್ಭಟಕ್ಕೆ ಬೆಂಗಳೂರಿನಲ್ಲೇ ಫಾಲ್ಸ್‌ಗಳು ಸೃಷ್ಟಿಯಾಗಿದ್ದವು. ಆ ಮಟ್ಟಿಗೆ ಅಬ್ಬರಿಸಿ ಎರಡು ದಿನ ವಿರಾಮ ನೀಡಿದ್ದ ಮಳೆ ಇಂದು ಮಧ್ನಾಹ್ನ ಮತ್ತೆ ಕಾಲಿಟ್ಟಿತ್ತು. ದೇವನಹಳ್ಳಿ ಸುತ್ತಮುತ್ತ ಸುರಿದ ಧಾರಾಕಾರ ಮಳೆಗೆ ಅರ್ಧ ಗಂಟೆಗೂ ಹೆಚ್ಚು 30ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ನಗರದಲ್ಲಿ ಇಂದು ಎಲ್ಲೆಡೆ ಧಾರಾಕಾರ ಮಳೆ ಆಗಿದೆ. ಮಳೆ ಬರ್ತಿದ್ದಂತೆ ರಸ್ತೆಗಳು ಜಲಾವೃತಗೊಂಡಿವೆ. ಜೊತೆಗೆ ಟ್ರಾಫಿಕ್‌ ಜಾಮ್‌ ಕೂಡಾ ಉಂಟಾಗಿತ್ತು. ಈ ಮಧ್ಯೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಟೇಕ್ ಆಪ್​ನಲ್ಲಿ ವಿಳಂಬ ಉಂಟಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಚೆಕ್​ ಇನ್, ಚೆಕ್​ ಔಟ್​ಗೆ ಪ್ರಯಾಣಿಕರ ಪರದಾಟ

ದೆಹಲಿ, ಕೊಲ್ಕತ್ತಾ, ಮುಂಬೈ ಸೇರಿದಂತೆ ದೇಶದ ವಿವಿಧೆಡೆಗೆ ವಿಮಾನಗಳು ತೆರಳಬೇಕಿತ್ತು. ಮಳೆ ಸುರಿಯುತ್ತಿರುವುದರಿಂದ ಟೇಕಾಫ್, ಲ್ಯಾಂಡಿಂಗ್​ನಲ್ಲಿ ವ್ಯತ್ಯಯವಾಗಿದೆ. ಸಂಜೆಯಿಂದ ದೇವನಹಳ್ಳಿ ಸುತ್ತಮುತ್ತ ಧಾರಾಕಾರ ಮಳೆ ಸುರಿದಿದೆ.

ತಾಂತ್ರಿಕ ದೋಷದಿಂದ ವಾರಣಾಸಿ-ಬೆಂಗಳೂರು ವಿಮಾನ ರದ್ದು: ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಅತಂತ್ರ

ಮೈಸೂರು: ತಾಂತ್ರಿಕ ಕಾರಣದಿಂದ ವಾರಣಾಸಿ-ಬೆಂಗಳೂರು ವಿಮಾನ ರದ್ದು ಆಗಿದೆ. ಪರಿಣಾಮ ಉತ್ತರ ಪ್ರದೇಶದ ವಾರಣಾಸಿ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಅತಂತ್ರಕ್ಕೆ ಸಿಲುಕಿಕೊಂಡಿರುವಂತಹ ಘಟನೆ ನಡೆದಿದೆ.

ಅಕ್ಟೋಬರ್ 12ರಂದು ಉತ್ತರ ಭಾರತ ಪ್ರವಾಸಕ್ಕೆ ಮೈಸೂರು, ಬೆಂಗಳೂರು ಸೇರಿ ಹಲವೆಡೆಯಿಂದ ಕನ್ನಡಿಗರು ತೆರಳಿದ್ದರು. ಸಂಜೆ 6.05ಕ್ಕೆ ವಾರಣಾಸಿಯಿಂದ ಹೊರಡಬೇಕಿದ್ದ ವಿಮಾನ ಕೊನೆ ಕ್ಷಣದಲ್ಲಿ ತಾಂತ್ರಿಕ ಕಾರಣದಿಂದ ಪ್ರಯಾಣ ರದ್ದು ಮಾಡಲಾಗಿದೆ. ವಾರಣಾಸಿಯಲ್ಲಿ ಮೈಸೂರಿನ 20ಕ್ಕೂ ಹೆಚ್ಚು ಪ್ರಯಾಣಿಕರು ಅತಂತ್ರರಾಗಿದ್ದಾರೆ.

ಇದನ್ನೂ ಓದಿ: ಮಾವು ರಫ್ತಿನಲ್ಲಿ ಹೊಸ ದಾಖಲೆ ಬರೆದ ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್​​

ವಿಮಾನ ರದ್ದಾಗಿದ್ದು, ವಾರಣಾಸಿ ವಿಮಾನ ನಿಲ್ದಾಣದಲ್ಲಿ ಇರಲು ಸಿಬ್ಬಂದಿ ಅವಕಾಶ ನೀಡಿಲ್ಲ.
ವಾರಣಾಸಿಯಲ್ಲಿ ನಾಳೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಏರ್​ಪೋರ್ಟ್​ನಲ್ಲಿರಲು ಸಿಬ್ಬಂದಿ ಅವಕಾಶ ನೀಡಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us