ಬೆಂಗಳೂರಿಗೆ ಮತ್ತೆ ಮಳೆ: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಮುನ್ಸೂಚನೆ

ಕಳೆದೆರಡು ದಿನಗಳ ಹಿಂದೆ ಸಿಲಿಕಾನ್ ಸಿಟಿಯನ್ನ ಹಿಂಡಿ ಹಿಪ್ಪೆ ಮಾಡಿದ್ದ ವರುಣ, ಇದೀಗ ಮತ್ತೆ ಅಬ್ಬರಿಸಲು ಸಜ್ಜಾಗಿ ನಿಂತಿದ್ದಾನೆ. ಎರಡು ದಿನ ನಿರಂತರ ಮಳೆಗೆ ಸುಸ್ತಾಗಿದ್ದ ಸಿಟಿಜನರಿಗೆ ಕೊಂಚ ಬಿಡುವು ನೀಡಿದ್ದ ಮಳೆರಾಯ ಇಂದು ಮಧ್ಯಾಹ್ನ ದಿಢೀರ್ ಪ್ರತ್ಯಕ್ಷವಾಗಿ ಸಿಟಿಯಲ್ಲಿ ಫಜೀತಿ ಸೃಷ್ಟಿಸಿದ್ದಾನೆ. ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ ಇದೆ.

ಬೆಂಗಳೂರಿಗೆ ಮತ್ತೆ ಮಳೆ: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಮುನ್ಸೂಚನೆ
ಬೆಂಗಳೂರಿಗೆ ಮತ್ತೆ ಮಳೆ: ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ ಮುನ್ಸೂಚನೆ
Follow us
ಶಾಂತಮೂರ್ತಿ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 19, 2024 | 7:26 PM

ಬೆಂಗಳೂರು, ಅಕ್ಟೋಬರ್​ 19: ಸಿಲಿಕಾನ್ ಸಿಟಿಯಲ್ಲಿ ಒಂದೆರಡು ದಿನ ಅಬ್ಬರಿಸಿದ್ದ ಮಳೆರಾಯ (rain) ಕೊಂಚ ಗ್ಯಾಪ್ ಬಳಿಕ ಮತ್ತೆ ಎಂಟ್ರಿಕೊಡುವುದಕ್ಕೆ ಸಜ್ಜಾಗಿದ್ದಾನೆ. ನಿನ್ನೆ ಒಂದು ದಿನ ಬಿಡುವು ಕೊಟ್ಟಿದ್ದ ವರುಣ ಇವತ್ತು ಮತ್ತೆ ಪ್ರತ್ಯಕ್ಷವಾಗಿದ್ದು, ಸಿಟಿಮಂದಿ ಪರದಾಡುವಂತೆ ಮಾಡಿದರೆ, ಇತ್ತ ಇನ್ನೂ ಎರಡು ದಿನ ರಾಜ್ಯದಲ್ಲಿ ವರುಣ ಅಬ್ಬರಿಸುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕದಲ್ಲಿ ಇನ್ನೆರಡು ದಿನ ಮಳೆ

ಕಳೆದೆರಡು ದಿನಗಳ ಹಿಂದೆ ಸಿಲಿಕಾನ್ ಸಿಟಿಯನ್ನ ಹಿಂಡಿ ಹಿಪ್ಪೆ ಮಾಡಿದ್ದ ವರುಣ, ಇದೀಗ ಮತ್ತೆ ಅಬ್ಬರಿಸಲು ಸಜ್ಜಾಗಿ ನಿಂತಿದ್ದಾನೆ. ಎರಡು ದಿನ ನಿರಂತರ ಮಳೆಗೆ ಸುಸ್ತಾಗಿದ್ದ ಸಿಟಿಜನರಿಗೆ ಕೊಂಚ ಬಿಡುವು ನೀಡಿದ್ದ ಮಳೆರಾಯ ಇಂದು ಮಧ್ಯಾಹ್ನ ದಿಢೀರ್ ಪ್ರತ್ಯಕ್ಷವಾಗಿ ಸಿಟಿಯಲ್ಲಿ ಫಜೀತಿ ಸೃಷ್ಟಿಸಿದ್ದಾನೆ. ಮಧ್ಯಾಹ್ನ 12 ಗಂಟೆಗೆ ಮೋಡ ಕವಿದ ವಾತಾವರಣದೊಂದಿಗೆ ಸಿಲಿಕಾನ್ ಸಿಟಿಯ ಹಲವೆಡೆ ಮಳೆ ಸುರಿದಿದ್ದು ದಿಢೀರ್ ಬಂದ ಮಳೆಗೆ ಸಿಟಿ ಜನರು ಪರದಾಡಿದರು. ವಿಧಾನಸೌಧ, ಟೌನ್ ಹಾಲ್, ಮೆಜೆಸ್ಟಿಕ್, ಶಾಂತಿನಗರ ಸೇರಿ ಹಲವೆಡೆ ಸುರಿದ ಮಳೆಗೆ ವಾಹನ ಸವಾರರು ಹೈರಾಣಾಗಿದ್ರೆ, ಮಳೆರಾಯನ ಎಂಟ್ರಿಯಿಂದ ಟ್ರಾಫಿಕ್ ಜಾಮ್ ಮತ್ತಷ್ಟು ಹೆಚ್ಚಾಗಿತ್ತು.

ಇದನ್ನೂ ಓದಿ: Bangalore Rains: ಬೆಂಗಳೂರಿನಲ್ಲಿ ಮತ್ತೆ ಮಳೆ, ಧರೆಗುರುಳಿದ ಮರಗಳು

ಇನ್ನು ಎರಡೇ ದಿನಕ್ಕೆ ಹತ್ತು ಹಲವು ಅವಾಂತರ ಸೃಷ್ಟಿಸಿದ್ದ ಮಳೆರಾಯ, ಮತ್ತೆ ಎಂಟ್ರಿಕೊಟ್ಟಿದ್ದರಿಂದ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಜನರು ಪರದಾಡಿದ ದೃಶ್ಯಗಳು ಕಂಡುಬಂತು. ಟೌನ್ ಹಾಲ್, ಮೆಜೆಸ್ಟಿಕ್ ಸುತ್ತಮುತ್ತ ಛತ್ರಿ, ರೇನ್ ಕೋಟ್ ಧರಿಸಿ ಜನರು ಓಡಾಡಿದರೆ, ಅತ್ತ ವಿಧಾನಸೌಧ ಸುತ್ತಮುತ್ತ ಮಳೆರಾಯನ ಆಗಮನ ವಿಧಾನಸೌಧದ ಸೌಂದರ್ಯವನ್ನ ಹಿಮ್ಮಡಿಗೊಳಿಸಿತ್ತು. ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೀತಿದ್ದ ಇಂಡಿಯಾ-ನ್ಯೂಜಿಲ್ಯಾಂಡ್ ಟೆಸ್ಟ್ ಮ್ಯಾಚ್​​ಗೂ ಕೆಲಕಾಲ ವರುಣನಿಂದ ಅಡ್ಡಿಯಾಗಿದ್ದು ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ತಂದಿತ್ತು.

ಇನ್ನು ಸಂಜೆಯಾಗ್ತಿದ್ದಂತೆ ರಾಜಧಾನಿಯಲ್ಲಿ ಮತ್ತೊಂದು ಸುತ್ತಿನ ದರ್ಶನ ನೀಡಿದ ವರುಣ, ಸಿಟಿ ಜನರಿಗೆ ನಾನಿನ್ನು ಸೈಲೆಂಟ್ ಆಗಿಲ್ಲ ಅನ್ನೋ ಸಂದೇಶ ಕೊಟ್ಟಿದ್ದ. ಸದ್ಯ ಕರಾವಳಿಯಲ್ಲಿ ಗಾಳಿಯ ವೇಗ ಕೂಡ ಹೆಚ್ಚಾಗಲಿದ್ದು, ಇನ್ನೆರಡು ದಿನಗಳ ಕಾಲ ರಾಜ್ಯದ ಕೆಲ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ನಾಳೆ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ರಾಜಧಾನಿಯಲ್ಲೂ ಮಳೆ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್​ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಳೆ ಎಫೆಕ್ಟ್: ಬೆಂಗಳೂರಿನ ಜನತೆಗೆ ರೋಗ ಭೀತಿ, ಎಚ್ಚರಿಕೆ ನೀಡಿದ ವೈದ್ಯರು!

ರಾಜಧಾನಿಯ ಜನರ ನಿದ್ದೆಗೆಡಿಸಿದ್ದ ಹಿಂಗಾರು ಮಳೆಯ ಕಾಟ ಇನ್ನೂ ಎರಡು ದಿನ ಇರಲಿದ್ದು, ರಾಜಧಾನಿ ಸೇರಿ ಹಲವೆಡೆ ವರುಣನ ಆಟ ಮುಂದುವರಿಯಲಿದೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ ರೌದ್ರಾವತಾರ ತೋರಿಸಿದ್ದ ಮಳೆರಾಯ, ಇದೀಗ ಮತ್ತ್ಯಾವ ಅವಾಂತರ ಸೃಷ್ಟಿಸುತ್ತಾನೆ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ