ಬೆಂಗಳೂರಿನ ತುಮಕೂರು ರಸ್ತೆಯ ಫ್ಲೈಓವರ್‌ಗೆ ಮತ್ತೊಂದು ಕಂಟಕ: ಭಾರಿ ಗಾತ್ರದ ಗಿಡಗಳು ಬೆಳೆದು ಬಿರುಕು

ಇತ್ತೀಚೆಗಷ್ಟೇ ಸಂಚಾರಕ್ಕೆ ಮುಕ್ತವಾಗಿದ್ದ ಬೆಂಗಳೂರಿನ ತುಮಕೂರು ರಸ್ತೆಯ ಫ್ಲೈಓವರ್‌ಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆ. ಗೊರಗುಂಟೆಪಾಳ್ಯ ಹಾಗೂ ನಾಗಸಂದ್ರ ಮಧ್ಯೆ ಇರುವ ಗೇಟ್‌ವೇ ಫ್ಲೈಓವರ್‌ ಮೇಲೆ ಭಾರಿ ಗಾತ್ರದ ಗಿಡಗಳು ಬೆಳೆದು ನಿಂತಿವೆ. ಇದರಿಂದಾಗಿ ಬಿರುಕು ಕಾಣಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ತುಮಕೂರು ರಸ್ತೆಯ ಫ್ಲೈಓವರ್‌ಗೆ ಮತ್ತೊಂದು ಕಂಟಕ: ಭಾರಿ ಗಾತ್ರದ ಗಿಡಗಳು ಬೆಳೆದು ಬಿರುಕು
ಬೆಂಗಳೂರಿನ ತುಮಕೂರು ರಸ್ತೆಯ ಫ್ಲೈಓವರ್‌ಗೆ ಮತ್ತೊಂದು ಕಂಟಕ: ಭಾರಿ ಗಾತ್ರದ ಗಿಡಗಳು ಬೆಳೆದು ಬಿರುಕು
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2024 | 6:55 PM

ಬೆಂಗಳೂರು, ಸೆಪ್ಟೆಂಬರ್​ 23: ಗೊರಗುಂಟೆಪಾಳ್ಯ ಹಾಗೂ ನಾಗಸಂದ್ರ ಮಧ್ಯೆ ಇರುವ ಗೇಟ್‌ವೇ ಫ್ಲೈಓವರ್‌ (flyover) ಮೇಲೆ ಭಾರಿ ಗಾತ್ರದ ಗಿಡಗಳು ಬೆಳೆದುಕೊಂಡಿವೆ. ಗಿಡಗಂಟೆಗಳಿಂದ ಫ್ಲೈಓವರ್‌ನಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಆ ಮೂಲಕ ಬೆಂಗಳೂರಿನ ತುಮಕೂರು ರಸ್ತೆಯ ಫ್ಲೈಓವರ್‌ಗೆ ಮತ್ತೊಂದು ಕಂಟಕ ಎದುರಾಗಿದೆ.

ಹೌದು. ಈ ಹಿಂದೆ ತಾಂತ್ರಿಕ ಸಮಸ್ಯೆಯಿಂದ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಫ್ಲೈಓವರ್‌ ಮೇಲೆ ವಾಹನಗಳ ಸಂಚಾರ ಆರಂಭವಾಗಿತ್ತು. ಆದರೆ ಇದೀದ ಗಿಡಗಂಟೆಗಳು ಬೆಳೆದುಕೊಂಡು ಬಿರುಕು ಕಾಣಿಸಿಕೊಂಡಿದೆ.

ಬಿರುಕು ಕಾಣಿಸಿಕೊಂಡಿದ್ದರಿಂದ ಮಳೆ ಬಂದಾಗ ನೀರು ಸೋರಿಕೆ ಆಗುತ್ತೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ವಹಣೆ ಮಾಡಬೇಕು. ಆದರೆ ಲಕ್ಷಾಂತರ ರೂ. ಖರ್ಚು ಮಾಡಿದರೂ ಸೂಕ್ತ ರೀತಿ ನಿರ್ವಹಣೆ ಮಾಡಿಲ್ಲ. ಹೀಹಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾಗಸಂದ್ರ-ಗೊರಗುಂಟೆಪಾಳ್ಯ ಮೇಲ್ಸೇತುವೆಯಲ್ಲಿ ಲೋಡ್ ಟೆಸ್ಟ್; ಸರ್ವಿಸ್ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ

ಪೀಣ್ಯ ಫ್ಲೈಓವರ್‌ ಲೋಡ್ ಪರೀಕ್ಷೆ ಪೂರ್ಣ ಗೊಂಡು ಇತ್ತೀಚೆಗೆ ಲಘು ಮೋಟಾ‌ರ್ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 11 ಗಂಟೆಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಲೋಡ್ ಟೆಸ್ಟಿಂಗ್ ವರದಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಹೇಳಿತ್ತು.

ಸುಮಾರು ಮೂರು ವರ್ಷದಿಂದ ಪೀಣ್ಯ ಫ್ಲೈಓವರ್‌ ಭಾರಿ ವಾಹನಗಳಿಗೆ ಬಂದ್ ಆಗಿತ್ತು. 25 ಡಿಸೆಂಬರ್ 2021ರಲ್ಲಿ ಪೀಣ್ಯ ಫ್ಲೈಓವರ್‌ನ ಪಿಲ್ಲರ್ 101ಹಾಗೂ 102ರಲ್ಲಿ ತಾಂತ್ರಿಕ ತೊಂದರೆ ಉಂಟಾಗಿತ್ತು. ಎನ್​ಹೆಚ್​ಐ (NHI) ಇಂಜಿನಿಯರ್ ವಾಣಿಶ್ರೀ ಅವರಿಂದ ಬೆಂಗಳೂರಿನ ಹೆಬ್ಬಾಗಿಲಲ್ಲೇ ನಡೆಯಬೇಕಿದ್ದ ಭಾರಿ ದುರಂತ ತಪ್ಪಿತ್ತು. ಇದರಿಂದಾಗಿ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿತ್ತು. ಪೀಣ್ಯ ಫ್ಲೈಓವರ್‌ನ ಗುಣಮಟ್ಟ ಸರಿಯಿಲ್ಲ, ಕಳಪೆ ಕಾಮಾಗಾರಿ, ಇಡೀ ಫ್ಲೈಓವರ್‌ ಅನ್ನು ಕೆಡವಬೇಕು ಎಂಬ ಚರ್ಚೆ ಆರಂಭವಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿರುವ ದಕ್ಷಿಣ ಭಾರತದ ಫಸ್ಟ್ ಡಬಲ್ ಡೆಕ್ಕರ್ ಫ್ಲೈಓವರ್ ಲೋಕಾರ್ಪಣೆ, ಇದರ ವಿಶೇಷತೆಗಳೇನು?

ಕೆಲ ದಿನಗಳ ನಂತರ ಸಣ್ಣಪುಟ್ಟ ಕಾಮಾಗಾರಿ ಮಾಡಿ ಕೆಲ ಕೇಬಲ್‌ಗಳನ್ನು ಅಳವಡಿಸಿ ಸಣ್ಣ ಪ್ರಮಾಣದ ವೆಹಿಕಲ್ ಓಡಾಟಕ್ಕೆ ಅವಕಾಶ ಮಾಡಲಾಗಿತ್ತು. ಫ್ಲೈಓವರ್‌ ಮೇಲೆ ಸಂಪೂರ್ಣವಾಗಿ ವೆಹಿಕಲ್‌ಗಳ ಓಡಾಟ ನಿರ್ಬಂಧಿಸಲಾಗಿತ್ತು. ಲೋಡ್ ಎನ್‌ಹೆಚ್‌ಎ ಮನವಿ ಮಾಡಿಕೊಂಡಿತ್ತು. ಹೀಗಾಗಿ ಸಂಚಾರಿ ಪೊಲೀಸರು ಇಂದಿನಿಂದ ಫ್ಲೈಓವರ್‌ ಕ್ಲೋಸ್ ಮಾಡಿದ್ದರು. ಈಗ ಲೋಡ್ ಪರೀಕ್ಷೆ ಮುಗಿದಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ