ಇಂಡಿಯಾ ಕೂಟ ಗೆದ್ರೆ ಮೇಕೆದಾಟು ಬಂದ್ ಎಂದ ಡಿಎಂಕೆ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ
ಬೆಂಗಳೂರಿಗರಿಗೆ ಕುಡಿಯಲು, ಕಾವೇರಿ ಕೊಳ್ಳದ ರೈತರ ಭೂಮಿಗೆ ನೀರು ಹರಿಸುವ ವಾಗ್ದಾನ ಮಾಡಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಆದರೆ, ಇಂಡಿಯಾ ಮೈತ್ರಿಕೂಟದಲ್ಲಿರುವ ಡಿಎಂಕೆ ನಿನ್ನೆ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟುವಿಗೆ ಅವಕಾಶ ಕೊಡಲ್ಲ ಎಂದು ಘೋಷಿಸಿದೆ. ಈ ವಿಚಾರ ರಾಜ್ಯ ಕಾಂಗ್ರೆಸ್ಗೆ ಭಾರಿ ಮುಖಭಂಗ ಉಂಟು ಮಾಡಿದೆ. ಇದು ರಾಜ್ಯ ಬಿಜೆಪಿ ನಾಯಕರಿಗೆ ಅಸ್ತ್ರವಾಗಿದ್ದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, ಮಾರ್ಚ್ 21: ಬೆಂಗಳೂರಿಗರಿಗೆ ಕುಡಿಯಲು, ಕಾವೇರಿ ಕೊಳ್ಳದ ರೈತರ ಭೂಮಿಗೆ ನೀರು ಹರಿಸುವ ವಾಗ್ದಾನ ಮಾಡಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಆದರೆ, ಇಂಡಿಯಾ ಮೈತ್ರಿಕೂಟದಲ್ಲಿರುವ ಡಿಎಂಕೆ ನಿನ್ನೆ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟು (Mekedatu) ವಿಗೆ ಅವಕಾಶ ಕೊಡಲ್ಲ ಎಂದು ಘೋಷಿಸಿದೆ. ಈ ವಿಚಾರ ರಾಜ್ಯ ಕಾಂಗ್ರೆಸ್ಗೆ ಭಾರಿ ಮುಖಭಂಗ ಉಂಟು ಮಾಡಿದೆ. ಕಾಂಗ್ರೆಸ್ ಮೇಕೆದಾಟು ಅಣೆಕಟ್ಟು ನಿರ್ಮಾನಕ್ಕೆ ಸಾಕಷ್ಟು ಹೋರಾಡಿದೆ. ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆಯನ್ನು ಸಹ ಮಾಡಿದ್ದರು. ಆದರೆ ಇದೀಗ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಮೇಕೆದಾಟುವಿಗೆ ಅವಕಾಶವಿಲ್ಲವೆದಿರುವುದು ರಾಜ್ಯ ಕಾಂಗ್ರೆಸ್ಗೆ ಮುಖಭಂಗವಾಗಿದೆ. ಇದು ರಾಜ್ಯ ಬಿಜೆಪಿ ನಾಯಕರಿಗೆ ಅಸ್ತ್ರವಾಗಿದ್ದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ
ಈ ವಿಚಾರವಾಗಿ ನಗರದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿದ್ದು, ರಾಜ್ಯದಲ್ಲಿ ವೀಕ್ ಸರ್ಕಾರ ಇದೆ, ವೀಕ್ ಸಿಎಂ ಇದ್ದಾರೆ. ಹೀಗಾಗಿಯೇ ಡಿಎಂಕೆ ಮೇಕೆದಾಟು ನಿರ್ಮಿಸಲು ಬಿಡಲ್ಲ ಎಂದಿದೆ. ನಮ್ಮ ನೀರು ನಮ್ಮ ಹಕ್ಕು ಅಂತಾ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೋರಾಡಿದರು. ಇದಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಪಾದಯಾತ್ರೆ ಮಾಡಿದ್ದರು. ಆಪ್ತ ಸ್ನೇಹಿತ ಎಂ.ಕೆ.ಸ್ಟಾಲಿನ್, ಡಿಕೆ ಶಿವಕುಮಾರ್ ನದಿಯಲ್ಲಿ ಸ್ನಾನ ಮಾಡಿದ್ದರು. ಆದರೆ ಬೆಂಗಳೂರಿನಲ್ಲಿ ಮುಖ ತೊಳೆಯಲು ನೀರಿಲ್ಲ ಎಂದು ಕಿಡಿಕಾರಿದ್ದಾರೆ.
ನಮ್ಮ ಹಣ ನಮ್ಮ ಹಕ್ಕು ಎಂದು ದೆಹಲಿಗೆ ಹೋಗಿದ್ದರಲ್ಲಾ ಹಾಗೇ ತಮಿಳುನಾಡಿಗೆ ಹೋಗಿ ಕಾಫಿ ಕುಡಿದು ಡಿಎಂಕೆ ವಿರುದ್ಧ ಹೋರಾಡಿ. ಇಲ್ಲವಾದಲ್ಲಿ ಜನ ಹಾದಿಬೀದಿಯಲ್ಲಿ ನಿಮ್ಮ ಮಾನ ತೆಗೆಯುತ್ತಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಪ್ರಣಾಳಿಕೆಯಲ್ಲಿ ನಿಲುವು ತಿಳಿಸಬೇಕು. ಇಲ್ಲವಾದಲ್ಲಿ ನಿಮ್ಮ ಪಾದಯಾತ್ರೆ ಗಿಮಿಕ್ ಅಂತ ತಿಳಿಯಬೇಕಾಗುತ್ತೆ. ನೂಕಾಟ ತಳ್ಳಾಟಕ್ಕೆ ಬಿರಿಯಾನಿಗೆ ಸೀಮಿತ ಎಂದು ತಿಳಿಯಬೇಕಾಗುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೇವಲ ಮಂತ್ರಿಗಳ ಮಕ್ಕಳಿಗೆ ಟಿಕೆಟ್ ಸಿಗ್ತಿದೆ ಅಂದಾಗ ಡಿಕೆ ಶಿವಕುಮಾರ್ ರಿಂದ ಅಸಮಂಜಸ ಸ್ಪಷ್ಟನೆ!
ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಡಿಎಂಕೆ ನಿರ್ಧಾರದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮೇಕೆದಾಟು ಯೋಜನೆ ಪೂರ್ಣಗೊಳಿಸುವುದೇ ನನ್ನ ಗುರಿ. ಮೇಕೆದಾಟು ಯೋಜನೆಗಾಗಿಯೇ ಜಲಸಂಪನ್ಮೂಲ ಸಚಿವನಾಗಿದ್ದೇನೆ. ಮೇಕೆದಾಟು ಯೋಜನೆಯನ್ನು ಮಾಡೇ ತೀರುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 pm, Thu, 21 March 24