ನಾನು ಉಸ್ತುವಾರಿ ಇದ್ದಾಗ ಡಿಕೆಶಿಗೆ ಬೆಳಗಾವಿ ಪ್ರವೇಶಕ್ಕೆ ಬಿಟ್ಟಿಲ್ಲ: ಗುಡುಗಿದ ರಮೇಶ್ ಜಾರಕಿಹೊಳಿ
ಅತ್ತ ದಿಲ್ಲಿಯಲ್ಲಿಂದು ಎಐಸಿಸಿ ಕಚೇರಿ ಉದ್ಘಾಟನೆಯಾಗಿದ್ದರೆ, ಇತ್ತ ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಕ್ರೆಡಿಟ್ ಫೈಟ್ ಜೋರಾಗಿದೆ. ಇದೇ ವಿಚಾರಕ್ಕೆ ಮೊನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಮಾತಿನ ಜಟಾಪಟಿ ನಡೆದಿದೆ. ಬಳಿಕ ಸಿಎಂ ಸಿದ್ದರಾಮ್ಯಯ, ಡಿಕೆ ಶಿವಕುಮಾರ್ ಹಾಗೂ ಉಸ್ತುವಾರಿ ಸುರ್ಜೆವಾಲ ಮಧ್ಯೆ ಪ್ರವೇಶಿಸಿ ಇಬ್ಬರನ್ನೂ ಸೈಲೆಂಟ್ ಮಾಡಿದ್ದರು. ಇದರ ನಡುವೆ ಇದೀಗ ಸತೀಶ್ ಜಾರಕಿಹೊಳಿ ಸಹೋದರ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಧ್ಯ ಪ್ರವೇಶಿಸಿದ್ದು, ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ, (ಜನವರಿ 15): ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣದ ವಿಚಾರವಾಗಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕ್ರೆಡಿಟ್ ಫೈಟ್ ನಡೆದಿದ್ದು, ಇದೀಗ ಇವರ ಮಧ್ಯ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರವೇಶ ಮಾಡಿದ್ದು, ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಚೇರಿ ನಿರ್ಮಾಣದಲ್ಲಿ ಸಾಕಷ್ಟು ಗೊಲ್ ಮಾಲ್ ಆಗಿದೆ. ನಾನು ಕಾಂಗ್ರೆಸ್ ಶಾಸಕನಾಗಿರುವಾಗ ಡಿಕೆ ಶಿವಕುಮಾರ್ ನನ್ನು ಬೆಳಗಾವಿ ಜಿಲ್ಲೆಗೆ ಬರಲು ಕೊಟ್ಟಿಲ್ಲ. ನಾನು ಅಧಿಕಾರ ನಡೆಸಿದ್ದೇನೆ. ಸಾಮೂಹಿಕ ನಾಯಕತ್ವದಲ್ಲಿ ಡಿಕೆ ಶಿವಕುಮಾರ್ ಮಾತು ಕೇಳಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಮೊನ್ನೆ ಕಾಂಗ್ರೆಸ್ ಪಕ್ಷದ ಸಿಎಲ್‌ಪಿ ಸಭೆ ನಡೆದಿತ್ತು. ಸನ್ಮಾನ್ಯ ಡಿಕೆ ಶಿವಕುಮಾರ್ ರಾಜ್ಯದ ಜನರಿಗೆ ತಪ್ಪು ಸಂದೇಶ ಕೊಟ್ಟಿದ್ದರು. ಈ ವೇಳೆ ಸತೀಶ್ ಜಾರಕಿಹೊಳಿ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಿದ್ದರು. ಸಭೆಯಲ್ಲಿ ನನ್ನ ಹೆಸರು ಪ್ರಸ್ತಾಪ ಆಗಿದ್ದರಿಂದ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದಾಗ ಪರಮೇಶ್ವರ್ ಅವರು ಆ ವೇಳೆ ಅಧ್ಯಕ್ಷರಾಗಿದ್ದರು. ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ಆಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸತೀಶ್ ಜಾರಕಿಹೊಳಿಗೆ ವಿರೋಧ ಮಾಡುವ ಶಕ್ತಿ ಕೊಟ್ಟಿದ್ದಕ್ಕೆ ಡಿಕೆ ಶಿವಕುಮಾರ್ಗೆ ಧನ್ಯವಾದ ಹೇಳುತ್ತೇನೆ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ನಾಯಕರ ಊಟ, ಕುರ್ಚಿ ಆಟ…ಸಚಿವರ ವಾಗ್ಯುದ್ಧ: ಕಾಂಗ್ರೆಸ್ ಶಾಸಕಾಂಗ ಸಭೆಯ ಇನ್‌ಸೈಡ್ ಸ್ಟೋರಿ
2013-18ರ ವರೆಗೆ ಕಾಂಗ್ರೆಸ್ ಪಕ್ಷದ ಕಚೇರಿ ಆಗಿದ್ದರ ಬಗ್ಗೆ ಹೇಳಿದ್ರು.. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧ್ಯಕ್ಷೆಯಾಗಿದ್ದರು. ಅಂದು ಮಹಾದೇವಪ್ಪ ಅವರು ಕಟ್ಟಡ ನಿರ್ವಹಣೆ ಕಮಿಟಿ ಅಧ್ಯಕ್ಷರಾಗಿದ್ದರು. ಆಗ ನಾನು ಶಾಸಕನಾಗಿದ್ದೆ, ಹೆಬ್ಬಾಳ್ಕರ್ ನಾವು ಒಂದು ಟೀಮ್ ಆಗಿ ಕೆಲಸ ಮಾಡುತ್ತಿದ್ವಿ. ಶಂಕ್ರಾನಂದ ಅವರ ಹೆಸರಿನಲ್ಲಿ ಜಾಗ ಇದ್ದು ಅವರ ಮಕ್ಕಳಿಗೆ ಜಾಗ ನೀಡುವಂತೆ ಕನ್ವೆನ್ಸ್ ಮಾಡಿದ್ದೆ. ಆರ್‌ಟಿಓ ಸರ್ಕಲ್ ನಲ್ಲಿ ಜಾಗ ಬಿಟ್ಟು ಕೊಡುವಂತೆ ಕನ್ವೆನ್ಸ್ ಮಾಡಿದ್ದೆ. ಬಳಿಕ ಕ್ಯಾಬಿನೆಟ್ ಗೆ ತಂದು ಆ ಜಾಗ ಮಂಜೂರು ಮಾಡಿಸಿದೆ. ನಾನು 54 ಲಕ್ಷ ಜಾಗಕ್ಕೆ ಹಣ ನೀಡಿ ಖರೀದಿ ಪ್ರಕ್ರಿಯೆ ಮಾಡಿಸಿದ್ವಿ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕಚೇರಿ ಕಟ್ಟಲು ನಾನು ಹಣ ಕೊಟ್ಟಿದ್ದೆ
ಎರಡು ಪಾರ್ಟ್ ಮೂಲಕ ಹಣವನ್ನ ಮಾಲೀಕರಿಗೆ ನೀಡಿದ್ವಿ. ನಾನೇ ಸ್ವಂತ 27 ಲಕ್ಷ ರೂ. ಹಣವನ್ನ ಮೊದಲ ಕಂತನಲ್ಲಿ ಹಣ ನೀಡಿದೆ. ಜಾಗ ಖರೀದಿಯಾದ ಮೇಲೆ ಕಚೇರಿ ನಿರ್ಮಾಣ ನೆನೆಗುದಿಗೆ ಬಿತ್ತು. ನಾನು ಮಂತ್ರಿಯಾದ ಮೇಲೆ ಒಂದು ಕೋಟಿ ಹಣ ಕೈಯಿಂದ ಕೊಟ್ಟೆ. ನಾನು 1 ಕೋಟಿ 27 ಲಕ್ಷ ಹಣ ಕಾಂಗ್ರೆಸ್ ಕಚೇರಿ ಕಟ್ಟಲು ನೀಡಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್ ನಾನು ಮಾಡಿದ್ದೇನೆ ಎಂದು ಹೇಳುತ್ತಿರುವುದು ತಪ್ಪು. ಕಾಂಗ್ರೆಸ್ ನ ಎಲ್ಲ ಶಾಸಕರು ಕೂಡ ಹಣ ಕೊಟ್ಟಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ ಗೊತ್ತಿಲ್ಲ. ಹಣ ಕೊಟ್ಟಿದ್ದೇನೆ ಎಂದು ಹೇಳೋದು ತಪ್ಪು ಅದನ್ನ ಖಂಡಿಸುತ್ತೇನೆ. ಕಚೇರಿ ನಿರ್ಮಾಣ ಮಾಡುವುದರಲ್ಲಿ ತಮ್ಮದೇ ಪ್ರಮುಖ ಪಾತ್ರ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಮುಂದಿನ ದಿನದಲ್ಲಿ ಕಚೇರಿ ಆಗಲು ಸತೀಶ್ ಜಾರಕಿಹೊಳಿ ಕೆಲಸ ಮಾಡಿದ್ದಾರೆ. ಕಚೇರಿ ನಿರ್ಮಾಣದಲ್ಲಿ ಸಾಕಷ್ಟು ಗೊಲ್ ಮಾಲ್ ಆಗಿದೆ. ಕಾಂಗ್ರೆಸ್ ಕಚೇರಿ ನಿರ್ಮಾಣದ ಹೆಸರಿನಲ್ಲಿ ಗಾಡಿ ತಗೊಂಡು ಚೈನಿ ಮಾಡಿದ್ದಾರೆ. ಯಾರು ಮಾಡಿದ್ದಾರೆ ಅನ್ನೋದನ್ನ ಈಗಿನ ಜಿಲ್ಲಾಧ್ಯಕ್ಷ ವಿನಯ್ ಅವರನ್ನು ಕೇಳಿ. ಅವತ್ತು ಡಿಕೆ ಶಿವಕುಮಾರ್ನ ಬೆಳಗಾವಿಗೆ ಬರಲು ನಾನು ಕೊಟ್ಟಿರಲಿಲ್ಲ. ಬೆಳಗಾವಿ ಜಿಲ್ಲೆಗೆ ಅವರನ್ನ ಎಂಟ್ರಿಯಾಗಿಸಿ ಕೊಟ್ಟಿಲ್ಲ ಎಂದರು.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ