AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pillion Riding Accident: ಸೀರೆಯ ಸೆರಗು ಸಿಕ್ಕು ಬೈಕ್ ಚಕ್ರಕ್ಕೆ ಸಿಕ್ಕಿಕೊಂಡ ಮಹಿಳೆ ಕಾಲು; ತಪ್ಪದೇ ಓದಿ ಈ ಸುದ್ದಿ

Woman's Leg Stuck Inside Wheel: ಬೈಕ್​ನ ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸೀರೆಯ ಸೆರಗು ಚಕ್ರಕ್ಕೆ ಸಿಕ್ಕು, ಆಕೆಯ ಕಾಲು ಕೂಡ ಒಳಗೆ ಸಿಲುಕಿಕೊಂಡ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ಸಂಭವಿಸಿದೆ.

Pillion Riding Accident: ಸೀರೆಯ ಸೆರಗು ಸಿಕ್ಕು ಬೈಕ್ ಚಕ್ರಕ್ಕೆ ಸಿಕ್ಕಿಕೊಂಡ ಮಹಿಳೆ ಕಾಲು; ತಪ್ಪದೇ ಓದಿ ಈ ಸುದ್ದಿ
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 08, 2023 | 12:30 PM

Share

ಚಿಕ್ಕಮಗಳೂರು: ಇದು ಪ್ರತಿಯೊಬ್ಬರೂ ತಪ್ಪದೇ ಓದಬೇಕಾದ ಸುದ್ದಿ. ಬೈಕ್​ನಲ್ಲಿ ಸೀರೆ ಅಥವಾ ದುಪಟ್ಟಾ ಧರಿಸಿ ಕೂರುವ ಮಹಿಳೆಯರೇ ಎಚ್ಚರ. ಸ್ವಲ್ಪ ಏಮಾರಿದರೂ ಪ್ರಾಣಕ್ಕೆ ಕುತ್ತು ಬಂದೀತು. ಚಿಕ್ಕಮಗಳೂರಿನಲ್ಲಿ ನಡೆದ ಈ ಒಂದು ಘಟನೆ ಎಲ್ಲರಿಗೂ ಪಾಠವಾದೀತು. ತರೀಕೆರೆ ಪಟ್ಟಣದಲ್ಲಿ ಬೈಕ್​ನ ಹಿಂಬದಿಯಲ್ಲಿ ಕೂತು ಹೋಗುತ್ತಿದ್ದ ಮಹಿಳೆಯೊಬ್ಬರ ಸೆರಗು ಚಕ್ರಕ್ಕೆ ಸಿಕ್ಕಿ, ನಂತರ ಆಕೆಯ ಕಾಲು ಕೂಡ ಚಕ್ರದೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ತರೀಕೆರೆಯ ಇಟ್ಟಿಗೆ ಗ್ರಾಮದ (Ittige Village In Tarikere Taluk of Chikkamagaluru) ಯಶೋಧಾ ಬಾಯಿ ಈ ಅಪಘಾತಕ್ಕೆ ಒಳಗಾದ ಮಹಿಳೆ.

ಬೈಕ್ ಚಕ್ರಕ್ಕೆ ಸಿಕ್ಕು ಈಕೆ ಬಿಡಿಸಿಕೊಳ್ಳಲು ಆಗದೇ ರಸ್ತೆಯಲ್ಲೇ ಗಂಟೆಗಟ್ಟಲೆ ನೋವಿನಿಂದ ನರಳಾಡಬೇಕಾಯಿತು. ಮೆಕ್ಯಾನಿಕ್​ಗಳನ್ನು ಕರೆಸಿ ಬೈಕ್​ನ ಚೈನ್ ಕತ್ತರಿಸಿ, ಗೇರ್ ಬಾಕ್ಸ್ ಬಿಚ್ಚಿ ನಂತರ ಯಶೋಧಾ ಬಾಯಿಯ ಕಾಲನ್ನು ಹೊರತೆಗೆಯಲಾಯಿತು.

ಇಂಥ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಆದರೂ ಕೂಡ ಬೈಕ್ ಪ್ರಯಾಣಿಕರು ಯಾವ ಮುನ್ನೆಚ್ಚರಿಕೆ, ಜಾಗ್ರತೆ ಇಲ್ಲದೇ ಹೋಗುವುದನ್ನು ಕಾಣುತ್ತೇವೆ. ಬೈಕ್​ನಲ್ಲಿ ಸ್ಯಾರಿ ಗಾರ್ಡ್ ಯಾಕೆ ಮುಖ್ಯ ಎಂಬುದಕ್ಕೆ ಈ ಘಟನೆ ಒಂದು ನಿದರ್ಶನವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಪ್ರಯಾಣಿಕರಿಗಾಗಿ ಸ್ಯಾರಿ ಗಾರ್ಡ್, ಹ್ಯಾಂಡ್ ಗ್ರಿಪ್ ಇರುವುದನ್ನು ಸುಪ್ರೀಂಕೋರ್ಟ್ 2028ರಲ್ಲಿ ಕಡ್ಡಾಯಗೊಳಿಸಿತ್ತು. ಆದರೂ ಕೂಡ ಸ್ಯಾರಿ ಗಾರ್ಡ್ ಇಲ್ಲದ ಬಹಳಷ್ಟು ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಕಾಣಬಹುದು.

ಇದನ್ನೂ ಓದಿ: ಬೆಂಗಳೂರು: ದಾರಿಯಲ್ಲಿ ನಡೆದು ಹೋಗುತ್ತಿದ್ದ ಯುವತಿ ಕೈಹಿಡಿದು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕರು, ಬೈಕ್ ಸವಾರನಿಂದ ಉಳೀತು ಮಾನ

ಬೈಕ್​ನ ಚಕ್ರಗಳಲ್ಲಿ ಸ್ಪೋಕ್ಸ್ ಇರುವುದರಿಂದ ಸೀರೆ ಬಹಳ ಬೇಗ ಸಿಕ್ಕಿಕೊಳ್ಳುತ್ತದೆ. ಆದ್ದರಿಂದ ಚಕ್ರದ ಕನಿಷ್ಠ ಅರ್ಧಭಾಗದವರೆಗಾದರೂ ರಕ್ಷಣಾ ಕವಚ (ಪ್ರೊಟೆಕ್ಷನ್ ಗಾರ್ಡ್) ಅಳವಡಿಸಬೇಕು ಎಂದು ಕೇಂದ್ರ ಮೋಟಾರು ವಾಹನ ನಿಯಮಗಳು ಹೇಳುತ್ತವೆ.

ಭಾರತದಲ್ಲಿ ಬೈಕ್​ನ ಹಿಂಬದಿಯಲ್ಲಿ ಕೂರುವ ಮಹಿಳೆಯರು ಸೀರೆ ತೊಟ್ಟಿದ್ದರೆ ಅದರ ಸೆರಗು ಚಕ್ರಕ್ಕೆ ಸಿಲುಕಬಹುದು. ಅಥವಾ ದುಪಟ್ಟಾ ಗಾಳಿಯಲ್ಲಿ ಹಾರಿ ಚಕ್ರಕ್ಕೆ ಸಿಲುಕಬಹುದು. ಇಂಥ ಘಟನೆಯಲ್ಲಿ ಮಹಿಳೆಯರು ಕೆಳಗೆ ಬಿದ್ದು ಸಾವನ್ನಪ್ಪು ಸಾಧ್ಯತೆಯೇ ಹೆಚ್ಚು.

ಸ್ಯಾರಿ ಗಾರ್ಡ್ ಇಲ್ಲದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸೀಟಿನಲ್ಲಿ ಕೂರುವ ಮಹಿಳೆಯರು ತಮ್ಮ ವಸ್ತ್ರದ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ. ಸೆರಗು ಗಾಳಿಗೆ ಹಾರದಂತೆ ಹಿಡಿದಿಟ್ಟುಕೊಳ್ಳಬೇಕು.

ಮಾಹಿತಿ: ಟಿವಿ9, ಚಿಕ್ಕಮಗಳೂರು ವರದಿಗಾರ

Published On - 12:30 pm, Wed, 8 February 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More