ದೇಶ ಕಾಯೋಕು ಸೈ, ಹುಟ್ಟೂರನ್ನ ಸ್ವಚ್ಛಗೊಳಿಸೋಕೂ ಜೈ

ಬಾಗಲಕೋಟೆ: ಗಡಿಯಲ್ಲಿ ನಿಂತು ಯುದ್ಧ ಮಾಡೋಕೂ ಸೈ. ಹುಟ್ಟೂರನ್ನ ಸ್ವಚ್ಛಗೊಳಿಸೋದಕ್ಕೂ ಜೈ. ದೇಶ ರಕ್ಷಣೆಗೂ ಅಣಿ. ಜನ್ಮಕೊಟ್ಟ ಗ್ರಾಮಕ್ಕೂ ಋಣಿ ಅನ್ನೋ ಹಾಗೆ ಗನ್ ಹಿಡಿಯೋ ಕೈಯಲ್ಲಿ ಪೊರಕೆ ಹಿಡಿದು ದೇಶ ಕಾಯೋ ಯೋಧರು ಕ್ಲೀನ್ ಮಾಡ್ತಿದ್ದಾರೆ. ಪೊರಕೆ ಹಿಡಿದು ಕಸ ಗುಡಿಸುವ ಯೋಧರು: ಸೂಳಿಕೇರಿ ಗ್ರಾಮದ ಬಹುತೇಕರು ತಮ್ಮನ್ನ ತಾವು ದೇಶ ಸೇವೆಗೆ ಮೀಸಲಿರಿಸಿಕೊಂಡಿದ್ದಾರೆ. ಹಾಗೆ ನೋಡಿದ್ರೆ ಗ್ರಾಮದಲ್ಲಿ ಸುಮಾರು 80ಕ್ಕೂ ಹೆಚ್ಚು ಯೋಧರಿದ್ದಾರೆ. ಇವ್ರೆಲ್ಲಾ ಬರೀ ದೇಶ ಸೇವೆ ಮಾತ್ರವಲ್ಲ ಊರಿಗೆ ಬಂದಾಗ ತಪ್ಪದೆ […]

ದೇಶ ಕಾಯೋಕು ಸೈ, ಹುಟ್ಟೂರನ್ನ ಸ್ವಚ್ಛಗೊಳಿಸೋಕೂ ಜೈ
Follow us
ಸಾಧು ಶ್ರೀನಾಥ್​
|

Updated on:Dec 15, 2019 | 3:57 PM

ಬಾಗಲಕೋಟೆ: ಗಡಿಯಲ್ಲಿ ನಿಂತು ಯುದ್ಧ ಮಾಡೋಕೂ ಸೈ. ಹುಟ್ಟೂರನ್ನ ಸ್ವಚ್ಛಗೊಳಿಸೋದಕ್ಕೂ ಜೈ. ದೇಶ ರಕ್ಷಣೆಗೂ ಅಣಿ. ಜನ್ಮಕೊಟ್ಟ ಗ್ರಾಮಕ್ಕೂ ಋಣಿ ಅನ್ನೋ ಹಾಗೆ ಗನ್ ಹಿಡಿಯೋ ಕೈಯಲ್ಲಿ ಪೊರಕೆ ಹಿಡಿದು ದೇಶ ಕಾಯೋ ಯೋಧರು ಕ್ಲೀನ್ ಮಾಡ್ತಿದ್ದಾರೆ.

ಪೊರಕೆ ಹಿಡಿದು ಕಸ ಗುಡಿಸುವ ಯೋಧರು: ಸೂಳಿಕೇರಿ ಗ್ರಾಮದ ಬಹುತೇಕರು ತಮ್ಮನ್ನ ತಾವು ದೇಶ ಸೇವೆಗೆ ಮೀಸಲಿರಿಸಿಕೊಂಡಿದ್ದಾರೆ. ಹಾಗೆ ನೋಡಿದ್ರೆ ಗ್ರಾಮದಲ್ಲಿ ಸುಮಾರು 80ಕ್ಕೂ ಹೆಚ್ಚು ಯೋಧರಿದ್ದಾರೆ. ಇವ್ರೆಲ್ಲಾ ಬರೀ ದೇಶ ಸೇವೆ ಮಾತ್ರವಲ್ಲ ಊರಿಗೆ ಬಂದಾಗ ತಪ್ಪದೆ ಸ್ವಚ್ಛತಾ ಕಾರ್ಯ ಮಾಡ್ತಾರೆ. ಪ್ರತಿ ಸಾರಿ ಬಂದಾಗಲೂ ಪೊರಕೆ ಹಿಡಿದು ಊರಲ್ಲಿನ ಕಸ ಗುಡಿಸುತ್ತಾರೆ. ಸಲಿಕೆ ಹಿಡಿದು ರಸ್ತೆ, ಚರಂಡಿಗಳನ್ನ ಕ್ಲೀನ್ ಮಾಡ್ತಾರೆ. ಈ ಮೂಲಕ ಹುಟ್ಟೂರಿನ ಋಣ ತೀರಿಸೋ ಜೊತೆ ಜೊತೆಗೆ ಗ್ರಾಮಸ್ಥರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸೋ ಉದ್ದೇಶ ಯೋಧರದ್ದು.

ಗ್ರಾಮದಲ್ಲಿನ ಮಾರುತೇಶ್ವರ ದೇವರೆಂದರೆ ಗ್ರಾಮಸ್ಥರು ಹಾಗೂ ಯೋಧರಿಗೆ ಎಲ್ಲಿಲ್ಲದ ಭಕ್ತಿ. ದೇವರ ಕೃಪೆಯಿಂದಲೇ ತಾವೆಲ್ಲ ಸೈನ್ಯಕ್ಕೆ ಸೇರಿದ್ದೇವೆ ಅನ್ನೋ ನಂಬಿಕೆ ಯೋಧರದ್ದು. ಸದ್ಯದಲ್ಲೇ ಮಾರುತೇಶ್ವರನ ಜಾತ್ರೆ ಕೂಡ ನಡೆಯಲಿದೆ. ಜಾತ್ರೆಗೂ ಮುನ್ನ ರಜೆ ಪಡೆದು ಬರೋ ಯೋಧರು ಗ್ರಾಮವನ್ನ ಸ್ವಚ್ಛಗೊಳಿಸ್ತಾರೆ.

ಯೋಧರ ಕಾರ್ಯಕ್ಕೆ ಸಲಾಂ: ಪಂಚಾಯ್ತಿಯಿಂದ ಹೇಳಿಕೊಳ್ಳುವಂತಹ ಕೆಲಸ ನಡೆಯದ ಕಾರಣ ತಮ್ಮದೇ ಸಂಘ ಕಟ್ಟಿಕೊಂಡು ಸ್ವಚ್ಛತಾ ಕಾರ್ಯ ಕೈಗೊಳ್ತಾರೆ. ದೇಶ ಕಾಯೋ ಯೋಧರ ಈ ಕೆಲಸಕ್ಕೆ ಗ್ರಾಮಸ್ಥರು ಸಲಾಂ ಅಂತಿದ್ದಾರೆ. ಒಟ್ನಲ್ಲಿ, ಗಡಿಯಲ್ಲಿ ಪ್ರಾಣ ಪಣಕ್ಕಿಟ್ಟು ಹೋರಾಡೋ ವೀರ ಯೋಧರು ಕೈಯಲ್ಲಿ ಪೊರಕೆ ಹಿಡಿದು ಊರಿನ ಸ್ವಚ್ಛತೆಗೆ ಮುಂದಾಗಿರೋದು ನಿಜಕ್ಕೂ ಶ್ಲಾಘನೀಯ.

Published On - 3:57 pm, Sun, 15 December 19

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ