ಜೆಡಿಎಸ್​​ನಿಂದಲೂ ಆಯುಕ್ತರಿಗೆ ದೂರು: ಮತ್ತಷ್ಟು ತೀವ್ರ ಸ್ವರೂಪ ಪಡೆದ ಸ್ಟಿಂಗ್ ಆಪರೇಷನ್ ಪ್ರಕರಣ

ಸ್ಟಿಂಗ್ ಆಪರೇಷನ್ ವಿಚಾರವಾಗಿ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬಾಂಬ್ ಸಿಡಿಸುತ್ತಿರುವ ಹೆಚ್‌.ಡಿ ಕುಮಾರಸ್ವಾಮಿ, ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಸಿದ್ದರಾಮಯ್ಯರನ್ನ ಇಳಿಸಲು ಒಳಗೊಳಗೆ ಸಂಚು ನಡೆದಿದೆ. ನನ್ನ ಬಳಿ ಇನ್ನಷ್ಟು ದಾಖಲೆಗಳಿವೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಲು ದುಡ್ಡು ಕೊಟ್ಟು ಕೆಲವರನ್ನ ಸಾಕುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಈ ಬೆಳವಣಿಗೆಗಳ ನಡುವೆ ಸ್ಟಿಂಗ್ ವಿಚಾರಕ್ಕೆ ಜೆಡಿಎಸ್​​ ದೂರು ನೀಡಿದೆ.

ಜೆಡಿಎಸ್​​ನಿಂದಲೂ ಆಯುಕ್ತರಿಗೆ ದೂರು: ಮತ್ತಷ್ಟು ತೀವ್ರ ಸ್ವರೂಪ ಪಡೆದ ಸ್ಟಿಂಗ್ ಆಪರೇಷನ್ ಪ್ರಕರಣ
ಜೆಡಿಎಸ್ ದೂರು ನೀಡಿರುವುದು
Edited By:

Updated on: Oct 16, 2026 | 5:33 PM

ಬೆಂಗಳೂರು, (ಅಕ್ಟೋಬರ್ 16): ಸ್ಟಿಂಗ್ ಆಪರೇಷನ್ ಪ್ರಕರಣ ದಿನದಿಂದ ದಿನಕ್ಕೆ ಪೆಂಡಂಭೂತದಂತೆ ಕಾಡುತ್ತಿದೆ. ಸ್ಟಿಂಗ್ ಆಪರೇಷನ್ ವಿಚಾರವಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ಆಲೌಟ್ ಸಮರ ಸಾರಿದೆ. ಸ್ಟಿಂಗ್​ನಲ್ಲಿ ಭಾಗಿಯಾದವರನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಇದೀಗ ಜೆಡಿಎಸ್​ ಸಹ ಈ ಸ್ಟಿಂಗ್ ಆಪರೇಷನ್ ಬಗ್ಗೆ ದೂರು ನೀಡಿದೆ. ಜೆಡಿಎಸ್ ಕಾನೂನು ಘಟಕದ ಪ್ರದೀಪ್ ಎಂಬುವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಕರ್ನಾಟಕ ರಾಜ್ಯದ ಪ್ರಭಾವಿ ನಾಯಕನ ಸ್ಟಿಂಗ್ ಮಾಡಲಾಗಿದೆ. ಹೀಗಾಗಿ ಸೂಕ್ತ ತನಿಖೆ ನಡೆಸಿ ಸ್ಟಿಂಗ್ ಆಪರೇಷನ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸ್ಟಿಂಗ್ ವಿರುದ್ಧ ಕುಮಾರಸ್ವಾಮಿ ಸಮರ

ಇನ್ನೂ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಜೆಡಿಎಸ್‌ ಕಾರ್ಯಕರ್ತರು ವಶಕ್ಕೆ ಪಡೆದು ವಿಚಾರಣೆ ಮಾಡಿರೋದು ಕುಮಾರಸ್ವಾಮಿ ಅವರನ್ನು ಕೆರಳಿಸಿದ್ದು, ಸರ್ಕಾರದ ತನಿಖೆ ವಿರುದ್ಧ ಆಕ್ರೋಶ ಹೊರ ಹಾಕಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಪಾರದರ್ಶಕ ತನಿಖೆಯ ಭರವಸೆ ಕೊಟ್ಟ ಬಳಿಕ ಧರಣಿ ಕೈ ಬಿಟ್ಟ ಕುಮಾರಸ್ವಾಮಿ, ಸರ್ಕಾರಕ್ಕೆ 2 ದಿನಗಳ ಡೆಡ್‌ಲೈನ್‌ ನೀಡಿದ್ದಾರೆ. ಇದರ ಮಧ್ಯೆ ಅ.17ರಂದು ಜೆಡಿಎಸ್ ಶಾಸಕರು, ಮುಖಂಡರ ಸಭೆ ಕರೆದಿದ್ದಾರೆ. ಒಂದು ವೇಳೆ ಪ್ರಮುಖ ಆರೋಪಿ ಬಂಧನವಾಗದಿದ್ರೆ, ಮುಂದಿನ ಹೋರಾಟ ಹೇಗಿರಬೇಕು ಎಂಬ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಸ್ಟಿಂಗ್ ಆಪರೇಷನ್ ವಿಡಿಯೋ ಅಪ್ಲೋಡ್ ಮಾಡುವುದಕ್ಕೆಂದೇ ಓಪನ್ ಆಗಿತ್ತು ಯೂಟ್ಯೂಬ್ ಚಾನೆಲ್: ತನಿಖೆ ವೇಳೆ ಬಯಲಾಯ್ತು ಸ್ಫೋಟಕ ವಿಚಾರ

ಸ್ಟಿಂಗ್‌ನ ಮಾಸ್ಟರ್‌ ಮೈಂಡ್‌ ಮತ್ತೆಗೆ ತನಿಖೆ ಚುರುಕು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಜನರನ್ನು ಸಿಸಿಬಿಯ ಸೈಬರ್‌ ಕ್ರೈಂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿಡಿಯೋ ಅಪ್‌ಲೋಡ್‌ ಮಾಡುವ ಉದ್ದೇಶಕ್ಕಾಗಿಯೇ ಯೂಟ್ಯೂಬ್‌ಚಾಲನ್‌ವೊಂದನ್ನು ತೆರೆಯಲಾಗಿದೆ ಎಂಬುವುದು ಕಂಡು ಬಂದಿದೆ. ಇನ್ನು ಸ್ಟಿಂಗ್‌ನ ಮಾಸ್ಟರ್‌ ಮೈಂಡ್‌ ಯಾರು ಎಂಬುವುದನ್ನು ಪತ್ತೆಹಚ್ಚಲು ತನಿಖೆ ಚುರುಕುಕೊಳಿಸಿದ್ದಾರೆ.

ಇನ್ನು ಸ್ಟಿಂಗ್ ಆಪರೇಷನ್ ಬಗ್ಗೆ ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲೂ ಯಾವುದೇ ಅಭಿಪ್ರಾಯ ನೀಡಿದೇ ಮೌನಕ್ಕೆ ಜಾರಿದ್ದಾರೆ. ಕೆಲ ಸಚಿವರು ನೀವೇ ನಿರ್ಧಾರ ಮಾಡಿ ಅಂತಾ ಸಿಎಂಗೆ ವಿವೇಚನೆಗೆ ಬಿಟ್ಟಿದ್ದಾರೆ. ಇತ್ತ ಕೆಲ ಸಚಿವರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯ ನಿವಾಸ ಕಾವೇರಿಗೆ ಬಂದ ಸಚಿವರಾದ ಕೃಷ್ಣಭೈರೇಗೌಡ, ಎಂ.ಬಿ.ಪಾಟೀಲ್ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುನಿಲ್​ ಎಮ್​ ಹೆಚ್​
Loading...
Unable to load recommendations.
Follow Us