AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಂದಾಲ್​ನ 97 ಉದ್ಯೋಗಿಗಳಿಗೆ ಕೊರೊನಾ! ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ ಆತಂಕ

ಬಳ್ಳಾರಿ: ಜ್ಯುಬಿಲೆಂಟ್ ನಂಜು ರಾಜ್ಯವನ್ನ ಕಾಡಿದ್ದಾಯ್ತು, ಈಗ ಜಿಂದಾಲ್​ನಲ್ಲಿ ಹರಡಿರುವ ಕೊರೊನಾ ಸೋಂಕು ಗಣಿನಾಡು ಬಳ್ಳಾರಿಯನ್ನ ಗಢಗಢ ನಡುಗಿಸುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದ್ರು ಯಾರು ಊಹಿಸಲಾಗದಂಥ ಕಂಟಕ ಎದುರಾಗೋದು ಗ್ಯಾರಂಟಿ. ಹೀಗಿರುವಾಗಲೇ ಗಣಿನಾಡಿಗೆ ನಿನ್ನೆ ಸಚಿವರ ಪಡೆಯೇ ದೌಡಾಯಿಸಿತ್ತು. ಅದೇನಾಯ್ತೋ ಏನೋ ಅದೆಲ್ಲಿಂದ ಮಹಾಮಾರಿ ವಕ್ಕರಿಸುತ್ತಿದೆಯೋ ಗೊತ್ತಿಲ್ಲ. ಕೆಲ ದಿನಗಳಿಂದ ಕರುನಾಡಿನ ಜನ ಅಕ್ಷರಶಃ ನಲುಗಿದ್ದಾರೆ, ಭಯಗೊಂಡಿದ್ದಾರೆ. ದಿನಕ್ಕೆ ಒಂದೋ, ಎರಡೋ ಕೇಸ್ ದಾಖಲಾಗುತ್ತಿದ್ದ ಕಡೆ ಇದೀಗ ಮಿನಿಮಮ್ ಸೆಂಚ್ಯೂರಿ ಗ್ಯಾರಂಟಿ. ಅದ್ರಲ್ಲೂ ಗಣಿನಾಡು ಬಳ್ಳಾರಿಯಲ್ಲಿ ರಣಭೀಕರ […]

ಜಿಂದಾಲ್​ನ 97 ಉದ್ಯೋಗಿಗಳಿಗೆ ಕೊರೊನಾ! ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ ಆತಂಕ
ಆಯೇಷಾ ಬಾನು
|

Updated on:Jun 13, 2020 | 3:48 PM

Share

ಬಳ್ಳಾರಿ: ಜ್ಯುಬಿಲೆಂಟ್ ನಂಜು ರಾಜ್ಯವನ್ನ ಕಾಡಿದ್ದಾಯ್ತು, ಈಗ ಜಿಂದಾಲ್​ನಲ್ಲಿ ಹರಡಿರುವ ಕೊರೊನಾ ಸೋಂಕು ಗಣಿನಾಡು ಬಳ್ಳಾರಿಯನ್ನ ಗಢಗಢ ನಡುಗಿಸುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದ್ರು ಯಾರು ಊಹಿಸಲಾಗದಂಥ ಕಂಟಕ ಎದುರಾಗೋದು ಗ್ಯಾರಂಟಿ. ಹೀಗಿರುವಾಗಲೇ ಗಣಿನಾಡಿಗೆ ನಿನ್ನೆ ಸಚಿವರ ಪಡೆಯೇ ದೌಡಾಯಿಸಿತ್ತು.

ಅದೇನಾಯ್ತೋ ಏನೋ ಅದೆಲ್ಲಿಂದ ಮಹಾಮಾರಿ ವಕ್ಕರಿಸುತ್ತಿದೆಯೋ ಗೊತ್ತಿಲ್ಲ. ಕೆಲ ದಿನಗಳಿಂದ ಕರುನಾಡಿನ ಜನ ಅಕ್ಷರಶಃ ನಲುಗಿದ್ದಾರೆ, ಭಯಗೊಂಡಿದ್ದಾರೆ. ದಿನಕ್ಕೆ ಒಂದೋ, ಎರಡೋ ಕೇಸ್ ದಾಖಲಾಗುತ್ತಿದ್ದ ಕಡೆ ಇದೀಗ ಮಿನಿಮಮ್ ಸೆಂಚ್ಯೂರಿ ಗ್ಯಾರಂಟಿ. ಅದ್ರಲ್ಲೂ ಗಣಿನಾಡು ಬಳ್ಳಾರಿಯಲ್ಲಿ ರಣಭೀಕರ ವಾತಾವರಣ ನಿರ್ಮಾಣವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಹತ್ತಾರು ಸಾವಿರ ಕಾರ್ಮಿಕರಿಗೆ ಸೋಂಕು ಹರಡುವ ಭೀತಿ ಎದುರಾಗಿದೆ.

ಜಿಂದಾಲ್​ನ 97 ಉದ್ಯೋಗಿಗಳಿಗೆ ಕೊರೊನಾ ಸೋಂಕು! ಹೌದು ಕೊರೊನಾ ಸೋಂಕು ಭಾರತಕ್ಕೆ ವಕ್ಕರಿಸಿ ತಿಂಗಳುಗಳು ಉರುಳಿದ್ದರೂ ನೆಮ್ಮದಿಯಾಗಿ ಗ್ರೀನ್​ಜೋನ್​ನಲ್ಲೇ ಇದ್ದ ಬಳ್ಳಾರಿಯಲ್ಲೀಗ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಭಯ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಕಾರಣ ಜಿಂದಾಲ್ ಕಂಪನಿ ಉದ್ಯೋಗಿಗಳಿಗೆ ಹಬ್ಬಿರುವ ಸೋಂಕು. ಈವರೆಗೆ ಒಟ್ಟು 97 ಜಿಂದಾಲ್ ಉದ್ಯೋಗಿಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಆತಂಕಕಾರಿ ಸಂಗತಿ ಏನಂದ್ರೆ, ಬಳ್ಳಾರಿಯ ಜಿಂದಾಲ್​ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕಿನ ತೀವ್ರತೆ ವಿಪರೀತವಾದ್ರೆ ಸುತ್ತಮುತ್ತಲ ಗ್ರಾಮಗಳಿಗೂ ಅಪಾಯ ಕಟ್ಟಿಟ್ಟಬುತ್ತಿ.

ಜಿಂದಾಲ್ ಕಂಪನಿ ತಾತ್ಕಾಲಿಕವಾಗಿ ಬಂದ್ ಮಾಡಲು ಒತ್ತಾಯ! ಜಿಂದಾಲ್ ಕಂಪನಿಯಲ್ಲಿ ಸೋಂಕಿತರ ಸಂಖ್ಯೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಂಪನಿಗೆ ರಜೆ ನೀಡುವಂತೆ ಒತ್ತಾಯ ಕೇಳಿಬರ್ತಿದೆ. ಆದರೆ ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಪರಿಸ್ಥಿತಿ ಹೀಗೆ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಬಳ್ಳಾರಿಗೆ ದೌಡಾಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಜಿಂದಾಲ್ ಆಡಳಿತ ಮಂಡಳಿ ಅಧಿಕಾರಿಗಳು ಈ ಸಭೆಯಲ್ಲಿ ತಾವು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವರದಿ ಮಂಡಿಸಿದೆ.

ಒಟ್ನಲ್ಲಿ ಡೆಡ್ಲಿ ಕೊರೊನಾ ಸೋಂಕು ಕರುನಾಡನ್ನು ಕಾಡಲು ಶುರುಮಾಡಿದೆ. ನಿನ್ನೆ ಕೂಡ ಸೋಂಕಿತರ ಸಂಖ್ಯೆ ದ್ವಿಶತಕ ಬಾರಿಸಿದ್ದು, ಮುಂಬರುವ ದಿನಗಳು ಇನ್ನೂ ಭಯಾನಕವಾಗಿರಲಿವೆ. ಜನರು ಇದನ್ನು ಅರ್ಥ ಮಾಡಿಕೊಂಡು ಸರ್ಕಾರದ ನಿಯಮಗಳನ್ನ ಚಾಚೂ ತಪ್ಪದೆ ಪಾಲಿಸಬೇಕಿದೆ.

Published On - 7:44 am, Sat, 13 June 20