ತಂಬಿಹಳ್ಳಿ ಮಾಧವತೀರ್ಥ ಮಠದ ಉತ್ತರಾಧಿಕಾರಿ ಪೀಠತ್ಯಾಗ: ಪ್ರವಚನಕಾರರಾಗಿ ಮುಂದುವರಿಯುವ ಆಶಯ

ಪೀಠತ್ಯಾಗ ಪತ್ರವನ್ನು ತಾವೇ ಸ್ವತಃ ಸಿದ್ದಪಡಿಸಿ ಗುರುಗಳಾದ ವಿದ್ಯಾಸಾಗರ ಮಾಧವ ತೀರ್ಥರಿಗೆ ನೀಡಿದ್ದು, ಗುರುಗಳು ಈ ಪತ್ರವನ್ನು ಅಂಗೀಕರಿಸಿದ್ದಾರೆ.

ತಂಬಿಹಳ್ಳಿ ಮಾಧವತೀರ್ಥ ಮಠದ ಉತ್ತರಾಧಿಕಾರಿ ಪೀಠತ್ಯಾಗ: ಪ್ರವಚನಕಾರರಾಗಿ ಮುಂದುವರಿಯುವ ಆಶಯ
ತಂಬಿಹಳ್ಳಿ ಮಾಧವತೀರ್ಥ ಮಠ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 13, 2021 | 7:20 PM

ಕೋಲಾರ: ಮಧ್ವಾಚಾರ್ಯ ಪರಂಪರೆಯ ಮಾಧವತೀರ್ಥ ಮಠದ ಉತ್ತರಾಧಿಕಾರಿ ವಿದ್ಯಾಸಿಂಧು ಮಾಧವ ತೀರ್ಥರು ಪೀಠತ್ಯಾಗ ಮಾಡಿದ್ದಾರೆ. ಕೋಲಾರದ ತಾಲ್ಲೂಕು ತಂಬಿಹಳ್ಳಿ ಗ್ರಾಮದಲ್ಲಿ ಈ ಮಠ ಇದೆ. ಐದು ವರ್ಷಗಳ ಹಿಂದಷ್ಟೇ ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದರು. ವೈಯಕ್ತಿಕ ಕಾರಣಗಳಿಂದ ಪೀಠತ್ಯಾಗ ಮಾಡಿದ್ದಾರೆ ಎಂದು ಭಕ್ತರು ಹೇಳಿದ್ದಾರೆ.

ಮಠದ ಪರಂಪರೆಯಲ್ಲಿ ಅತಿ ಅಪರೂಪ ಎನಿಸಿರುವ ಈ ಪೀಠತ್ಯಾಗ ಆಗೊಮ್ಮೆ ಹೀಗೊಮ್ಮೆ ನಡೆದಿವೆ. ಕೋಲಾರ ಜಿಲ್ಲಾಕೇಂದ್ರಕ್ಕೆ ಹತ್ತಿರವಿರುವ ಈ ತಂಬಿಹಳ್ಳಿ ಮಠದಲ್ಲಿ ಹಿರಿಯ ಶ್ರೀಗಳಾದ ವಿದ್ಯಾಸಾಗರ ಮಾಧವ ತೀರ್ಥರು ಹಾಗೂ ಮಠದ ಭಕ್ತರು, ಆಡಳಿತ ಮಂಡಳಿ ಹಾಗೂ ಕೆಲವು ಅಧಿಕಾರಿಗಳ ಸಮ್ಮುಖದಲ್ಲಿ ಪೀಠತ್ಯಾಗದ ಕುರಿತು ಸಾಕಷ್ಟು ಚರ್ಚೆಗಳಾದ ನಂತರ ಕೊನೆಯ ಹಂತದಲ್ಲಿ ವಿದ್ಯಾಸಿಂಧು ಮಾಧವ ತೀರ್ಥರು ತಾವೇ ಸ್ವಇಚ್ಚೆಯಿಂದ ತಮ್ಮ ಪೀಠತ್ಯಾಗ ಮಾಡುವ ನಿರ್ಧಾರಕ್ಕೆ ಬಂದರು. ಪೀಠತ್ಯಾಗ ಪತ್ರವನ್ನು ತಾವೇ ಸ್ವತಃ ಸಿದ್ದಪಡಿಸಿ ಗುರುಗಳಾದ ವಿದ್ಯಾಸಾಗರ ಮಾಧವ ತೀರ್ಥರಿಗೆ ನೀಡಿದ್ದು, ಗುರುಗಳು ಈ ಪತ್ರವನ್ನು ಅಂಗೀಕರಿಸಿದ್ದಾರೆ.

ಇದೀಗ ಪೀಠತ್ಯಾಗ ಮಾಡಿರುವ ವಿದ್ಯಾಸಾಗರ ಮಾಧವತೀರ್ಥರ ಪೂರ್ವಾಶ್ರಮದ ಹೆಸರು ಮುರಳೀಧರ ಆಚಾರ್. ಇವರು ತಮ್ಮ ಸಂಸಾರ ತೊರೆದು 2015ರಲ್ಲಿ ಮಂತ್ರಾಲಯದ ಬಿಚ್ಚಾಲೆ ಗ್ರಾಮದಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಅದೇ ವರ್ಷ ತಂಬಿಹಳ್ಳಿ ಮಠದ ಉತ್ತರಾಧಿಕಾರಿಯಾಗಿ ಇವರನ್ನು ನೇಮಿಸಲಾಯಿತು. ಐದು ವರ್ಷಗಳಿಂದ ಮಠದ ಕೆಲಸಗಳಲ್ಲಿ ಸಕ್ರಿಯರಾಗಿದ್ದರು.

ತಂಬಿಹಳ್ಳಿ ಮಠದ  ವಿದ್ಯಾಸಿಂಧು ಮಾಧವ ತೀರ್ಥರು ಬರೆದಿರುವ ಪತ್ರ

ಪೀಠತ್ಯಾಗಕ್ಕೆ ಏನು ಕಾರಣ? ಪ್ರವಚನಗಳನ್ನು ನೀಡುವುದರಲ್ಲಿ ವಿದ್ಯಾಸಿಂಧು ಮಾಧವ ತೀರ್ಥರಿಗೆ ಹೆಚ್ಚು ಆಸಕ್ತಿಯಿತ್ತು. ಪ್ರವಚನಕ್ಕಾಗಿ ಸದಾ ಸಂಚಾರದಲ್ಲಿ ಇರುತ್ತಿದ್ದರು. ಆಗ ಮಠದಲ್ಲಿನ ಪೂಜಾ ಕೈಂಕರ್ಯಗಳಿಗೆ ತೊಡಕುಂಟಾಗುತ್ತಿತ್ತು. ಈ ವಿಚಾರವಾಗಿ ಹಿರಿಯ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರ ತಿಳಿದ ನಂತರ ವಿದ್ಯಾಸಿಂಧು ಮಾಧವತೀರ್ಥರು ಪೀಠತ್ಯಾಗದ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪೀಠತ್ಯಾಗದ ನಂತರ ಪ್ರವಚನಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದಾಗಿ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.

ಪೀಠತ್ಯಾಗ ಪತ್ರದಲ್ಲೇನಿದೆ..! ಪೀಠತ್ಯಾಗದ ಬಗ್ಗೆ ಹಿರಿಯ ಶ್ರೀಗಳಿಗೆ ವಿದ್ಯಾಸಿಂಧು ಮಾಧವತೀರ್ಥರು ಪತ್ರ ಬರೆದಿದ್ದಾರೆ. ‘ಪೂರ್ವಾಶ್ರಮದಲ್ಲಿ ಮುರಳೀಧರಾಚಾರ್ಯರಾಗಿದ್ದ ನಮಗೆ ಸಂಸಾರದಲ್ಲಿ ಬೇಸರ ಬಂದು ಮೇ 2015ರಲ್ಲಿ ಬಿಚ್ಚಾಲೆ ಗ್ರಾಮದ ರಾಘವೇಂದ್ರ ಗುರುಸಾರ್ವಭೌಮರ ಸನ್ನಿಧಾನದಲ್ಲಿ ಸನ್ಯಾಸ ಸ್ವೀಕರಿಸಿ, ಮಂತ್ರೋಪದೇಶ ಪಡೆದು ತ್ರಿವಿಕ್ರಮತೀರ್ಥರೆಂದು ನಾಮಧೇಯರಾದೆವು. ಆನಂತರ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನವಾದ ಶ್ರೀಮನ್ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ವಿದ್ಯಾಸಾಗರ ಮಾಧವ ತೀರ್ಥ ಶ್ರೀಪಾದಂಗಳವರು ಅವರಿಗೆ ನಾವು ಯಾರ ರೀತಿಯಲ್ಲಿ ಸಂಬಂಧವಿಲ್ಲದೆ ಇದ್ದರೂ 2015ನೇ ಇಸ್ವಿಯಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಂಡರು ಅಷ್ಟೇ ಅಲ್ಲದೆ ನಾವು ಮಠವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತೇವೆಂಬ ನಿರೀಕ್ಷೆ ಇಟ್ಟುಕೊಂಡು, ಅದಕ್ಕೆ ತಕ್ಕಂತೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು.

‘ಸಂಸ್ಥಾನ ಪ್ರತಿಮೆಗಳನ್ನು ಪೂಜೆಗೆ ಕೊಟ್ಟು ಮಠದ ಕೀರ್ತಿ ಬೆಳೆಸುವುದಕ್ಕೆ ಸಂಚಾರಕ್ಕೂ ಕಳುಹಿಸಿಕೊಟ್ಟರು. ನಾವು ನಮ್ಮ ವೈಯಕ್ತಿಕ ಕಾರಣಗಳಿಂದ ಸ್ವ ಇಚ್ಚೆಯಿಂದ ಶ್ರೀಮಾಧವತೀರ್ಥ ಮಠದ ಉತ್ತರಾಧಿಕಾರಿ ಪಟ್ಟವನ್ನು ಇಂದೇ ತ್ಯಾಗ ಮಾಡುತ್ತಿದ್ದೇವೆ. ನನಗೂ ಶ್ರೀಮಠಕ್ಕೂ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲೂ ಸಂಬಂಧವಿಲ್ಲ. ತಕ್ಷಣವೇ ಮಠದಿಂದ ಜಾಗವನ್ನು ಖಾಲಿ ಮಾಡಿ ಹೊರಡುತ್ತವೆ. ಐದು ವರ್ಷಗಳ ಕಾಲ ನನಗೆ ಸರ್ವಜ್ಞಾಚಾರ್ಯ ಕರಾರ್ಚಿತ ಶ್ರೀ ಮೂಲವೀರ ರಾಮಚಂದ್ರ ದೇವರ ಪೂಜಾ ಭಾಗ್ಯವನ್ನು ಕೊಟ್ಟ ಗುರುಗಳಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸುತ್ತೇವೆ’ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಉತ್ತರಾಧಿಕಾರಕ್ಕೆ ಪೈಪೋಟಿ ಶುರು ಸದ್ಯ ತಂಬಿಹಳ್ಳಿ ಮಠದ ಹಿರಿಯ ಸ್ವಾಮಿಗಳಾಗಿರುವ ವಿದ್ಯಾಸಾಗರ ಮಾಧವತೀರ್ಥರು ವೃದ್ಧರು. ಹಾಗಾಗಿ ತೆರವಾಗಿರುವ ಉತ್ತರಾಧಿಕಾರಿ ಸ್ಥಾನಕ್ಕೆ ತಕ್ಷಣವೇ ಆಯ್ಕೆ ನಡೆಯಬೇಕಾಗಿದೆ. ಹಲವರ ಹೆಸರುಗಳು ಕೇಳಿಬರುತ್ತಿದೆ. ಹಿರಿಯ ಶ್ರೀಗಳು ಯಾರ ಹೆಸರನ್ನು ಅಂತಿಮಗೊಳಿಸುತ್ತಾರೆ ಎಂದು ತಿಳಿಯಲು ಕಾದು ನೋಡಬೇಕಿದೆ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ: ಶಿರೂರು ಮಠಕ್ಕೆ ನೂತನ ಯತಿಯಾಗಿ ಅಪ್ರಾಪ್ತರ ನೇಮಕಕ್ಕೆ ಆಕ್ಷೇಪ; ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು

ಇದನ್ನೂ ಓದಿ: ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ; ಧರ್ಮಸ್ಥಳ ನಿಡ್ಲೆ ಮೂಲದ ಅನಿರುದ್ಧ್ ಸರಳತ್ತಾಯ ಮುಂದಿನ ಶ್ರೀ

(Junior Swamiji of Thambihalli Madhava Teertha Mutt Quits)

Published On - 6:15 pm, Sun, 13 June 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ