ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಕೊರೊನಾ! ಇಂದು ತಾಂತ್ರಿಕ ಸಲಹಾ ಸಮಿತಿ ಜೊತೆ ಸಚಿವ ಸುಧಾಕರ್ ಸಭೆ
ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಕೊವಿಡ್ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ. 10 ದಿನಗಳ ಹಿಂದೆ ಶೇ 1.1ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಇದೀಗ ಶೇ 2.9ಕ್ಕೆ ಹೆಚ್ಚಾಗಿದೆ.
ಬೆಂಗಳೂರು: ರಾಜ್ಯದಲ್ಲಿ ನಿಯಂತ್ರಣಲ್ಲಿದ್ದ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಸದ್ಯ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr K Sudhakar) ಇಂದು (ಜೂನ್ 13) ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸುತ್ತಾರೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಆರೋಗ್ಯಸೌಧದಲ್ಲಿ ಸಚಿವ ಸುಧಾಕರ್ ಸಭೆ ನಡೆಸಿ, ಮುಂದಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕೊವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಾದ ಕಾರಣ ಸಭೆ ನಡೆಯಲಿದೆ.
ಬೆಂಗಳೂರಿನಲ್ಲಿ ಮೂರು ಪಟ್ಟು ಕೊರೊನಾ ಹೆಚ್ಚಳ: ನಗರದಲ್ಲಿ ಕಳೆದ 10 ದಿನಗಳಲ್ಲಿ ಕೊವಿಡ್ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿವೆ. 10 ದಿನಗಳ ಹಿಂದೆ ಶೇ 1.1ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಇದೀಗ ಶೇ 2.9ಕ್ಕೆ ಹೆಚ್ಚಾಗಿದೆ. ಬಿಬಿಎಂಪಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಮೇ 31ರಂದು 178 ಪ್ರಕರಣಗಳು ವರದಿಯಾಗಿದ್ದರೆ, ಜೂನ್ 10ರಂದು ವರದಿಯಾಗಿರುವ ಪ್ರಕರಣಗಳ ಸಂಖ್ಯೆ 494 ದಾಟಿದೆ. ನಗರದ 10 ವಾರ್ಡ್ಗಳಲ್ಲಿ ಪಾಸಿಟಿವಿಟಿ ಪ್ರಮಾಣವೂ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಪೈಕಿ 8 ವಾರ್ಡ್ಗಳು ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಇರುವುದು ಗಮನಾರ್ಹ ಅಂಶ. ಇತರ ಎರಡು ವಾರ್ಡ್ಗಳು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿವೆ.
ಇದನ್ನೂ ಓದಿ: Rishabh Pant: ಸತತ 2ನೇ ಸೋಲಿನ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ರಿಷಭ್ ಪಂತ್: ಏನಂದ್ರು ಗೊತ್ತೇ?
ಸೋಂಕು ಬಿಗಡಾಯಿಸಿರುವ ಕ್ಲಸ್ಟರ್ಗಳು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೊವಿಡ್ ಹೆಚ್ಚಾಗಿ ಕಾಣಿಸಿಕೊಂಡಿರುವ ಕ್ಲಸ್ಟರ್ಗಳ ಸಂಖ್ಯೆಯು ಕಳೆದ 10 ದಿನಗಳಲ್ಲಿ 5ರಿಂದ 12ಕ್ಕೆ ಹೆಚ್ಚಾಗಿದೆ. ಶುಕ್ರವಾರ ಒಂದೇ ದಿನ ಐದು ಹೊಸ ಕ್ಲಸ್ಟರ್ಗಳು ವರದಿಯಾಗಿವೆ. 12 ಕ್ಲಸ್ಟರ್ಗಳ ಪೈಕಿ 11 ಮಹದೇವಪುರ ವಾರ್ಡ್ನಲ್ಲಿಯೇ ಇವೆ.
ಒಂದು ವ್ಯಕ್ತಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟ ನಂತರ ಇಡೀ ಕುಟುಂಬದ ಎಲ್ಲರೂ ಪಾಸಿಟಿವ್ ಆಗುತ್ತಿದ್ದಾರೆ. 11 ಕ್ಲಸ್ಟರ್ಗಳ ಪೈಕಿ 10 ಕ್ಲಸ್ಟರ್ಗಳು ಅಪಾರ್ಟ್ಮೆಂಟ್ಗಳೇ ಆಗಿವೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:35 am, Mon, 13 June 22