AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯಿಂದ ನನ್ನನ್ನು ಹೊರಹಾಕಲ್ಲ, ಪಕ್ಷದಲ್ಲಿ ಗಟ್ಟಿಯಾಗಿದ್ದೀನಿ: ಬೆಂಬಲಿಗರಿಗೆ ಯತ್ನಾಳ್ ಸಂದೇಶ

ಕಲಬುರಗಿ(Kalaburagi)ಯ ಶ್ರೀಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸಮಾವೇಶದಲ್ಲಿ ಮಾತನಾಡಿದ, ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal), ‘ಬಿಜೆಪಿಯಿಂದ ನನ್ನನ್ನು ಹೊರಹಾಕಲ್ಲ, ಬಿಜೆಪಿಯಲ್ಲಿ ಗಟ್ಟಿಯಾಗಿದ್ದೀನಿ. ಲೋಕಸಭಾ ಚುನಾವಣೆ ಮುಗಿಯಲಿ, ನಂತರ ನಾನು ತೋರಿಸುತ್ತೇನೆ ಎಂದರು.

ಬಿಜೆಪಿಯಿಂದ ನನ್ನನ್ನು ಹೊರಹಾಕಲ್ಲ, ಪಕ್ಷದಲ್ಲಿ ಗಟ್ಟಿಯಾಗಿದ್ದೀನಿ: ಬೆಂಬಲಿಗರಿಗೆ ಯತ್ನಾಳ್ ಸಂದೇಶ
ಬಿಜೆಪಿ ಶಾಸಕ ಯತ್ನಾಳ್
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Mar 12, 2024 | 10:33 PM

Share

ಕಲಬುರಗಿ, ಮಾ.12: ‘ಬಿಜೆಪಿಯಿಂದ ನನ್ನನ್ನು ಹೊರಹಾಕಲ್ಲ, ಬಿಜೆಪಿಯಲ್ಲಿ ಗಟ್ಟಿಯಾಗಿದ್ದೀನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಹೇಳಿದರು. ಕಲಬುರಗಿ(Kalaburagi)ಯ ಶ್ರೀಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆ ಮುಗಿಯಲಿ, ನಂತರ ನಾನು ತೋರಿಸುತ್ತೇನೆ. ಚುನಾವಣೆಯೊಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ 2ಎ ಮೀಸಲಾತಿ ನೀಡಬೇಕು. ಇಲ್ಲದಿದ್ರೆ ಕಾಂಗ್ರೆಸ್ಗೆ ವೋಟ್​ ಹಾಕಬೇಡಿ. ನಾನು ಮೀಸಲಾತಿ ತಂದು ತೋರಿಸ್ತೆನೆ ಕೇಂದ್ರದಲ್ಲಿ ನಮ್ಮದೆ ಸರ್ಕಾರ ಬರುತ್ತೆ ಎಂದರು.

ಇನ್ನು ಲೋಕಸಭಾ ಚುನಾವಣೆಯಲ್ಲಿ ನಿರ್ಣಯ ತೆಗೆದುಕೊಳ್ಳಲು ಈ ಸಮಾವೇಶ‌ ಆಯೋಜಿಸಲಾಗಿದೆ. ಈ ಮೂಲಕ ದೀಕ್ಷಾ, ಪಂಚಮಸಾಲಿ ಸಮಾಜಗಳು ಒಂದು ಮಾಡಲು ಮುಂದಾಗಿದ್ದೇವೆ. ನಮ್ಮ ಹೋರಾಟದಿಂದಲೇ ವೀರಶೈವ ಲಿಂಗಾಯತ ಸಮಾಜ ಒಂದಾಗುತ್ತಿದೆ. ಮೀಸಲಾತಿ ದೊರೆಯುವುದಕ್ಕೆ ಪ್ರಧಾನಿ ಮೋದಿ, ಶಾ ಮುತುವರ್ಜಿ ವಹಿಸಿದ್ದರು. ಕೆಲ ಸ್ವಾಮೀಜಿಗಳು ಯಾರೂ ಏನು ಕೆಲಸ ಮಾಡುತ್ತಿಲ್ಲ ಎಂದು ಯತ್ನಾಳ್ ಸ್ವ ಸಮುದಾಯದ ಸ್ವಾಮೀಜಿಗಳ ವಿರುದ್ದ ಕಿಡಿಕಾರಿದರು.

ಇದನ್ನೂ ಓದಿ:ಪೂಜ್ಯ ತಂದೆ-ಮಕ್ಕಳು ಎಲ್ಲರನ್ನೂ ಮುಗಿಸಲು ಹೊರಟಿದ್ದಾರೆ: ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ

ಕೆಲ ಸ್ವಾಮೀಜಿಗಳು, ‘ನೀನು ಸಿಎಂ ಆಗ್ತೀಯಾ ಎಂದು ಆಶೀರ್ವದಿಸ್ತಾರೆ, ನಮ್ಮ ವಿಜಯಪುರ ಮಂದಿ ಯಾವುದಕ್ಕೂ ಅಂಜುವುದಿಲ್ಲ. ವಿಧಾನಸಭೆ ಚುನಾವಣೆ ವೇಳೆ ನನಗೆ ಟಿಕೆಟ್ ತಪ್ಪಿಸ್ತೀನಿ ಎಂದು ಕೆಲವರು ಹೇಳಿದ್ದರು. ಅವರೆಲ್ಲಾ ಏನ್ ಮಾಡಿದ್ರು, ಬಿಜೆಪಿಯ ಮೊದಲ ಲಿಸ್ಟ್‌ನಲ್ಲೇ ನನಗೆ ಟಿಕೆಟ್ ಸಿಕ್ಕಿತು. ಪರೋಕ್ಷವಾಗಿ ವಿರೋಧಿಗಳ ವಿರುದ್ಧ ಬಿಜೆಪಿ ಶಾಸಕ ಯತ್ನಾಳ್ ಗುಡುಗಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ