ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾದ ಸಿಪಿಐ ಕಲಬುರಗಿಯಿಂದ ಬೆಂಗಳೂರಿಗೆ ಏರ್ಲಿಫ್ಟ್
ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಕಲಬುರಗಿ ಗ್ರಾಮಾಂತರ ಸಿಪಿಐ ಶ್ರೀಮಂತ್ ಅವರನ್ನು ನಾಳೆ ಬೆಳಿಗ್ಗೆ 8ಕ್ಕೆ ಏರ್ ಌಂಬುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡುವ ಸಾಧ್ಯತೆ ಇದೆ.
ಕಲಬುರಗಿ: ಗಾಂಜಾ ದಂಧೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಕಲಬುರಗಿ ಗ್ರಾಮಾಂತರ ಸಿಪಿಐ ಶ್ರೀಮಂತ್ ಅವರನ್ನು ನಾಳೆ ಬೆಳಿಗ್ಗೆ 8ಕ್ಕೆ ಏರ್ ಌಂಬುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ಲಿಫ್ಟ್ ಮಾಡುವ ಸಾಧ್ಯತೆ ಇದೆ. ಇಲ್ಲಾಳ್ ಕುಟುಂಬಸ್ಥರ ಮನವಿ ಮೇರೆಗೆ ಏರ್ಲಿಫ್ಟ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯ ಸಿಪಿಐ ಶ್ರೀಮಂತ್ ಕಲಬುರಗಿಯ ಖಾಸಗಿ ಆಸ್ಪತ್ರೆ ಯುನೈಟೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಸಂಜೆ ಏರ್ ಌಂಬುಲೆನ್ಸ್ ಕೇರಳದ ಕೊಚ್ಚಿಯಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿದೆ . ನಾಳೆ ಬೆಳಿಗ್ಗೆ ಯುನೈಟೆಡ್ ಆಸ್ಪತ್ರೆಯಿಂದ ಕಲಬುರಗಿ ವಿಮಾನ ನಿಲ್ದಾಣದವರೆಗೆ ಆಂಬ್ಯುಲೆನ್ಸ್ನಲ್ಲಿ ಶ್ರೀಮಂತ್ ಅವರನ್ನು ಕರೆತಂದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಌಂಬುಲೆನ್ಸ್ ಮೂಲಕ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.
ಇದನ್ನೂ ಓದಿ: ಕಲಬುರ್ಗಿ ಸಿಪಿಐ ಮೇಲೆ ಗಾಂಜಾ ದಂಧೆಕೋರರಿಂದ ಹಲ್ಲೆ: ಸರ್ವಿಸ್ ಪಿಸ್ತೂಲ್, ಉಂಗುರ ಕಿತ್ತುಕೊಂಡ ದುಷ್ಕರ್ಮಿಗಳು
ಪ್ರಕರಣದ ಹಿನ್ನೆಲೆ
ಸೆ.23ರಂದು ಮಂಠಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದು. ಕಲಬುರಗಿ ಗ್ರಾಮೀಣ ಠಾಣೆಯ ಸಿಪಿಐ ಶ್ರೀಮಂತ್ ಇಲ್ಲಾಳ್ ರ ಮೇಲೆ ಅಂದು ರಾತ್ರಿ ಗಾಂಜಾ ದಂಧೆದೋಕರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನೆರೆಯ ಮಹರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಅನ್ನೋ ಗ್ರಾಮದ ಹೊರವಲಯದಲ್ಲಿ ಮೂವತ್ತಕ್ಕೂ ಹೆಚ್ಚು ಗಾಂಜಾ ದಂದೆಕೋರರು, ಕಬ್ಬಿಣದ ರಾಡ್, ಬಡಿಗೆಯಿಂದ ಸಿಪಿಐ ಶ್ರೀಮಂತ್ ಇಲ್ಲಾಳ್ ಮೇಲೆ ಅಟ್ಯಾಕ್ ಮಾಡಿದ್ದಾರೆ.
ಎರಡು ದಿನದ ಹಿಂದೆ ಶ್ರೀಮಂತ್ ಇಲ್ಲಾಳ್, ಕಲಬುರಗಿಯ ಬಾಬು ನಗರದ ನಿವಾಸಿಯಾಗಿದ್ದ ನವಿನ್ ಅನ್ನೋ ಗಾಂಜಾ ಮಾರಾಟಗಾರನನ್ನು ಕಮಲಾಪುರ ತಾಲೂಕಿನ ದಸ್ತಾಪುರ ಬಳಿ ಬಂಧಿಸಿದ್ದರು. ಆತನಿಗೆ ಬೆಂಡೆತ್ತಿದಾಗ ಗಾಂಜಾವನ್ನು ಮಹಾರಾಷ್ಟ್ರದ ಗಡಿಭಾಗದಿಂದ ತರೋದಾಗಿ ಬಾಯ್ಬಿಟ್ಟಿದ್ದ ಕೂಡಲೇ ಅಲರ್ಟ್ ಆದ ಸಿಪಿಐ ಶ್ರೀಮಂತ್ ಇಲ್ಲಾಳ್ ಮತ್ತು ಅವರ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಸೆ.23ರ ರಾತ್ರಿ ಸುಮಾರು 9 ಗಂಟೆಗೆ ಮಹಾರಾಷ್ಟ್ರದ ಉಮ್ಮರ್ಗಾಕ್ಕೆ ತೆರಳಿದರು. ಕೆಲ ಪೊಲೀಸರು ಉಮ್ಮರ್ಗಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲು ಹೋದರೇ, ಇತ್ತ ಸಿಪಿಐ ಶ್ರೀಮಂತ್ ಇಲ್ಲಾಳ್ ಮತ್ತು ಕೆಲ ಸಿಬ್ಬಂದಿ ಗಾಂಜಾ ಬೆಳದಿದ್ದ ಜಮೀನಿನ ಬಳಿ ನಿಂತುಕೊಂಡಿದ್ದರು. ಈ ವೇಳೆ ಏಕಾಏಕಿ 30ಕ್ಕೂ ಹೆಚ್ಚು ಗಾಂಜಾ ದಂಧೆಕೋರರು ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಕೆಲ ಪೊಲೀಸರು ಓಡಿ ಹೋದರೇ ಕೈಗೆ ಸಿಕ್ಕ ಶ್ರೀಮಂತ್ ಇಲ್ಲಾಳ್ ಮೇಲೆ ಕ್ರಿಮಿಗಳು ಕಬ್ಬಿಣದ ರಾಡ್, ಕೋಲುಗಳಿಂದ ಮನಸೋ ಇಚ್ಚೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪ್ರೇಯಸಿನ್ನು ಕೊಲೆ ಮಾಡಿದ ಪ್ರಿಯಕರ; ವಿಜಯಪುರಕ್ಕೆ ಶವ ಸಾಗಿಸುವಾಗ ಪ್ರಿಯಕರ ಅರೇಸ್ಟ್
ಬಳಿಕ ಉಮ್ಮರ್ಗಾ ಪೊಲೀಸರು ಸ್ಥಳಕ್ಕೆ ಬಂದ ಮೇಲೆ ಶ್ರೀಮಂತ್ ಇಲ್ಲಾಳರನ್ನು ಹುಡುಕಿದ ಪೊಲೀಸರು, ಬಸವಕಲ್ಯಾಣದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಮಂತ್ ಇಲ್ಲಾಳ್, ಮುಖದ ಎಲಬು, ಪಕ್ಕೆಲಬುಗಳು ಮುರಿದಿದ್ದು, ಮೆದುಳಿಗೆ ಗಂಭೀರ ಗಾಯಗಳಾಗಿ ಪರಿಸ್ಥಿತಿ ಚಿಂತಾಜನಕವಾಗಿದೆ.
ಗೃಹ ಸಚಿವರು ಕೂಡಾ ಎಸ್ಪಿಗೆ ಕರೆ ಮಾಡಿ ಅವಶ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಅಥವಾ ಹೈದರಾಬಾದ್ಗೆ ಏರ್ ಲಿಫ್ಟ್ ಮಾಡಲು ಸೂಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ