ಈ 3 ರಾಜ್ಯಗಳಿಂದ ಬರುವವರಿಗೆ ಕರ್ನಾಟಕಕ್ಕೆ ನೋ ಎಂಟ್ರಿ!

ಸಾಧು ಶ್ರೀನಾಥ್​

| Edited By: Ayesha Banu

Updated on:May 21, 2020 | 3:54 PM

ಬೆಂಗಳೂರು: ಒಂದು ಊರಲ್ಲ.. ಒಂದು ಕೇರಿಯಲ್ಲ.. ಒಂದು ಹಳ್ಳಿಯಲ್ಲ.. ಒಂದು ಸಿಟಿಯಲ್ಲ.. ಇಡೀ ಕರುನಾಡಿನ ಕೊರಳನ್ನೇ ಕೊರೊನಾ ಬಿಗಿದು ಹಾಕ್ತಿದೆ. ಡೆಡ್ಲಿ ವೈರಸ್ ಕ್ಷಣ ಕ್ಷಣಕ್ಕೂ ಶಾಕ್​ ಕೊಡ್ತಿದೆ. ಹತ್ತಾರು ಜಿಲ್ಲೆಗಳಲ್ಲಿ ಹೆಜ್ಜೆ ಇಟ್ಟಿರೋ ಹೆಮ್ಮಾರಿ ಕ್ರೌರ್ಯ ಮೆರೀತಿದೆ. ತಬ್ಲೀಗ್ ಆಯ್ತು, ಇದೀಗ ಮುಂಬೈನಿಂದ ಹೊತ್ತು ತಂದಿರೋ ಕೊರೊನಾ ಬಾಂಬ್ ಸ್ಫೋಟಕ್ಕೆ ಅದುರಿ ಹೋಗಿದೆ. ಕರುನಾಡಿನಲ್ಲಿ ಮುಂಬೈ ಕೊರೊನಾ ಬಾಂಬ್ ಸ್ಫೋಟ! ಯೆಸ್.. ತಬ್ಲೀಗ್​ ಕಾಟಕ್ಕೆ ಕಂಗೆಟ್ಟು ಹೋಗಿದ್ದ ಕರುನಾಡೀಗ ಮುಂಬೈ, ಗುಜರಾತ್​ ಕೊರೊನಾ ನಂಟಿಗೆ ಅಕ್ಷರಶಃ […]

ಈ 3 ರಾಜ್ಯಗಳಿಂದ ಬರುವವರಿಗೆ ಕರ್ನಾಟಕಕ್ಕೆ ನೋ ಎಂಟ್ರಿ!
ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು: ಒಂದು ಊರಲ್ಲ.. ಒಂದು ಕೇರಿಯಲ್ಲ.. ಒಂದು ಹಳ್ಳಿಯಲ್ಲ.. ಒಂದು ಸಿಟಿಯಲ್ಲ.. ಇಡೀ ಕರುನಾಡಿನ ಕೊರಳನ್ನೇ ಕೊರೊನಾ ಬಿಗಿದು ಹಾಕ್ತಿದೆ. ಡೆಡ್ಲಿ ವೈರಸ್ ಕ್ಷಣ ಕ್ಷಣಕ್ಕೂ ಶಾಕ್​ ಕೊಡ್ತಿದೆ. ಹತ್ತಾರು ಜಿಲ್ಲೆಗಳಲ್ಲಿ ಹೆಜ್ಜೆ ಇಟ್ಟಿರೋ ಹೆಮ್ಮಾರಿ ಕ್ರೌರ್ಯ ಮೆರೀತಿದೆ. ತಬ್ಲೀಗ್ ಆಯ್ತು, ಇದೀಗ ಮುಂಬೈನಿಂದ ಹೊತ್ತು ತಂದಿರೋ ಕೊರೊನಾ ಬಾಂಬ್ ಸ್ಫೋಟಕ್ಕೆ ಅದುರಿ ಹೋಗಿದೆ.

ಕರುನಾಡಿನಲ್ಲಿ ಮುಂಬೈ ಕೊರೊನಾ ಬಾಂಬ್ ಸ್ಫೋಟ! ಯೆಸ್.. ತಬ್ಲೀಗ್​ ಕಾಟಕ್ಕೆ ಕಂಗೆಟ್ಟು ಹೋಗಿದ್ದ ಕರುನಾಡೀಗ ಮುಂಬೈ, ಗುಜರಾತ್​ ಕೊರೊನಾ ನಂಟಿಗೆ ಅಕ್ಷರಶಃ ಕುಲುಮೆಗೆ ಬಿದ್ದಂತಾಗಿದೆ. ಪ್ರತಿದಿನವೂ ಸೋಂಕಿನ ಸ್ಫೋಟವಾಗ್ತಿದ್ದು, ಅರ್ಧಶತಕವನ್ನ ಅನಾಯಾಸವಾಗಿ ದಾಟುತ್ತಿದೆ. ಮಹಾಘಾತಕ್ಕೆ ಕಂಗೆಟ್ಟು ಕೂತಿರೋ ರಾಜ್ಯದ ಜನತೆ ರಿಸ್ಕ್​ಗೆ ಸಿಲುಕಿದ್ದಾರೆ. ಹಾಗಿದ್ರೆ, ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೇಸ್​ಗಳು ಮುಂಬೈ ನಂಟು ಹೊದ್ದು ಕೂತಿದೆ ಅನ್ನೋದನ್ನ ನೋಡೋದಾದ್ರೆ.

ಕೊರೊನಾ ‘ಬಾಂಬ್​’!

3 ರಾಜ್ಯಗಳಿಂದ ಬರುವವರಿಗೆ ಕರ್ನಾಟಕ ಎಂಟ್ರಿ ಬ್ಯಾನ್! ಇನ್ನು, ರಾಜ್ಯದಲ್ಲಿ ಕೊರೊನಾ ಬಾಂಬ್​ ಸ್ಫೋಟಗೊಳ್ತಿದ್ದಂತೆ ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ. ಇದೀಗ ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನಿಂದ ಸೋಂಕು ಹೆಚ್ಚಳವಾಗ್ತಿರೋದ್ರಿಂದ ಈ 3 ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಕನ್ಫರ್ಮ್ ಮಾಡಿದ್ದಾರೆ.

ಒಟ್ನಲ್ಲಿ, ಹೊರ ರಾಜ್ಯದಿಂದ ಸಲೀಸಾಲಿ ಬರುತ್ತಿರೋ ಹೆಮ್ಮಾರಿ, ಸೆಳೆತಕ್ಕೆ ಸಿಕ್ಕವ್ರನ್ನ ತನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಮುಂಬೈ, ಮಹಾರಾಷ್ಟ್ರ, ಗುಜರಾತ್​​​ನಿಂದ ಬಂದಿರೋ ಕೊರೊನಾ​ ನಂಟಿಗೆ ಕರುನಾಡಲ್ಲಿ ನರಕ ದರ್ಶನವಾಗ್ತಿದೆ. ಇದು ಮುಂದ್ಯಾವ ಕಥೆ ಕಾಣಿಸುತ್ತೋ ಅಂತ ಎಲ್ರೂ ಕಂಗೆಟ್ಟು ಕೂತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada