ಕಂಟೇನ್ಮೆಂಟ್ ಜೋನ್ ಆಗಿದ್ರೂ ಸಲೂನ್, ಬಾರ್ ಓಪನ್: ಕಂಟಕವಾಗುತ್ವಾ ಓಲಾ, ಉಬರ್
ಬೆಂಗಳೂರು: 4ನೇ ಹಂತದ ಲಾಕ್ಡೌನ್ ಸಡಿಲಿಕೆ ಆದಾಗಲಿಂದಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರ ಜೊತೆಗೆ ಕೊರೊನಾ ಹಾಟ್ ಸ್ಪಾಟ್ ಆಗಿರುವ ಪಾದರಾಯನಪುರದಲ್ಲಿ ಜನರ ದರ್ಬಾರ್ ಜೋರಾಗಿದೆ. ಕಂಟೇನ್ಮೆಂಟ್ ಜೋನ್ ಆಗಿದ್ರೂ ಸಲೂನ್ಗಳು, ಬಾರ್ ಓಪನ್ ಆಗಿವೆ. ಜನ ಕೊರೊನಾ ಮರೆತು ಓಡಾಡುತ್ತಿದ್ದಾರೆ. ಬೆಳಗ್ಗೆನೆ ಎಣ್ಣೆ ಖರೀದಿಸಲು ಜನ ಬರ್ತಿದ್ದಾರೆ. ಇನ್ನು ಸಲೂನ್ಗಳು ಓಪನ್ ಆಗಿದ್ದು, ಸಲೂನ್ಗೆ ಹೋಗೋರು ಬರೋರಿಂದ ಕೊರೊನಾ ಹೆಚ್ಚಾಗುವ ಆತಂಕ ಶುರುವಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಡೇಂಜರ್ ಜೋನ್ನಲ್ಲಿ […]
ಬೆಂಗಳೂರು: 4ನೇ ಹಂತದ ಲಾಕ್ಡೌನ್ ಸಡಿಲಿಕೆ ಆದಾಗಲಿಂದಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರ ಜೊತೆಗೆ ಕೊರೊನಾ ಹಾಟ್ ಸ್ಪಾಟ್ ಆಗಿರುವ ಪಾದರಾಯನಪುರದಲ್ಲಿ ಜನರ ದರ್ಬಾರ್ ಜೋರಾಗಿದೆ.
ಕಂಟೇನ್ಮೆಂಟ್ ಜೋನ್ ಆಗಿದ್ರೂ ಸಲೂನ್ಗಳು, ಬಾರ್ ಓಪನ್ ಆಗಿವೆ. ಜನ ಕೊರೊನಾ ಮರೆತು ಓಡಾಡುತ್ತಿದ್ದಾರೆ. ಬೆಳಗ್ಗೆನೆ ಎಣ್ಣೆ ಖರೀದಿಸಲು ಜನ ಬರ್ತಿದ್ದಾರೆ. ಇನ್ನು ಸಲೂನ್ಗಳು ಓಪನ್ ಆಗಿದ್ದು, ಸಲೂನ್ಗೆ ಹೋಗೋರು ಬರೋರಿಂದ ಕೊರೊನಾ ಹೆಚ್ಚಾಗುವ ಆತಂಕ ಶುರುವಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಡೇಂಜರ್ ಜೋನ್ನಲ್ಲಿ ಸಲೂನ್ ತೆರೆದು ರಿಸ್ಕ್ಗೆ ಆಹ್ವಾನಿಸಿದ್ದಾರೆ.
ಪಾದರಾಯನಪುರದಲ್ಲಿ ಓಲಾ, ಉಬರ್ ಓಡಾಟ: ಮತ್ತೊಂದು ಶಾಕಿಂಗ್ ಎನ್ನುವಂತೆ ಓಲಾ, ಉಬರ್ಗಳು ಪಾದರಾಯನಪುರದಲ್ಲಿ ಓಡಾಡುತ್ತಿವೆ. ಇದರಿಂದ ಓಲಾ, ಉಬರ್, ಟ್ಯಾಕ್ಸಿಯಲ್ಲಿ ಪ್ರಯಾಣಿಸುವವರು ಹುಷಾರಾಗಿರಬೇಕು, ಚೂರು ಯಾಮಾರಿದ್ರೂ ಜೀವಕ್ಕೇ ಕಂಟಕವಾಗಲಿದೆ. ಕಂಟೇನ್ಮೆಂಟ್ ಜೋನ್ಗಳಲ್ಲಿ ಪಿಕಪ್ & ಡ್ರಾಪ್ಗಾಗಿ ವಾಹನಗಳು ಓಡಾಡುತ್ತಿವೆ.
Published On - 10:05 am, Thu, 21 May 20