AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Beer Price Hike: ಮತ್ತೆ ಬಿಯರ್ ದರ ಏರಿಕೆಗೆ ಮುಂದಾದ ಕರ್ನಾಟಕ ಸರ್ಕಾರ

ಕರ್ನಾಟಕ ಬಿಯರ್ ದರ ಏರಿಕೆ: ಬಿಯರ್ ಪ್ರಿಯರಿಗೆ ಮತ್ತೆ ಶಾಕ್ ನೀಡಲು ಕರ್ನಾಟಕ ಸರ್ಕಾರ ಮುಂದಾಗಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇಕಡ ಹತ್ತರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿರುವ ಬಗ್ಗೆ ವರದಿಯಾಗಿದ್ದು, ಇದು ಜಾರಿಗೆ ಬಂದರೆ ಬಿಯರ್ ದರ ಮತ್ತಷ್ಟು ದುಬಾರಿಯಾಗಲಿದೆ.

Karnataka Beer Price Hike: ಮತ್ತೆ ಬಿಯರ್ ದರ ಏರಿಕೆಗೆ ಮುಂದಾದ ಕರ್ನಾಟಕ ಸರ್ಕಾರ
ಸಾಂದರ್ಭಿಕ ಚಿತ್ರ
Ganapathi Sharma
|

Updated on: Apr 30, 2025 | 11:49 AM

Share

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ಸರ್ಕಾರವು ಎಲ್ಲಾ ಬಿಯರ್‌ಗಳ (Beer) ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (Additional Excise Duty) ಶೇ 10 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಸದ್ಯ ರಾಜ್ಯದಲ್ಲಿ ಬಿಯರ್ ಮೇಲಿನ ತೆರಿಗೆ ಉತ್ಪಾದನಾ ವೆಚ್ಚದ ಶೇ 195 ರಷ್ಟಿದೆ. ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 205 ಕ್ಕೆ ಹೆಚ್ಚಿಸುವ ಬಗ್ಗೆ ರಾಜ್ಯದ ಹೊಸ ಕರಡು ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಪ್ರೀಮಿಯಂ ಅಥವಾ ಇತರ ಬಿಯರ್ ಬ್ರಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲ್​​ಗೆ ಸುಮಾರು 10 ರೂಪಾಯಿಗಳಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಎಷ್ಟು ಹೆಚ್ಚಾಗಲಿದೆ ಬಿಯರ್ ದರ?

ಒಟ್ಟಾರೆಯಾಗಿ ತೆರಿಗೆ ಹೆಚ್ಚಳದ ನಂತರ ಬಿಯರ್ ದರ 10 ರೂ.ನಷ್ಟು ಹೆಚ್ಚಳವಾಗಬಹುದು. ಮಧ್ಯಮ ಶ್ರೇಣಿಯ ಮತ್ತು ಅಗ್ಗದ ಸ್ಥಳೀಯ ಬಿಯರ್‌ಗಳಿಗೆ ಪ್ರತಿ ಬಾಟಲ್​​ಗೆ 5 ರೂಪಾಯಿ ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ. ಬೆಲೆ ಏರಿಕೆಯು ಬ್ರ್ಯಾಂಡ್‌ನಿಂದ ಬ್ರ್ಯಾಂಡ್‌ಗೆ ವ್ಯತ್ಯಸ್ತವಾಗಿರಲಿದೆ.

ಹಿಂದೆ, ಕರ್ನಾಟಕದಲ್ಲಿ ಬಿಯರ್​​​ಗೆ ಎರಡು ಹಂತದ ತೆರಿಗೆ ವ್ಯವಸ್ಥೆ ಇತ್ತು. ಕೆಳ ಹಂತದ ಬ್ರಾಂಡ್‌ಗಳಿಗೆ ಲೀಟರ್‌ಗೆ 130 ರೂ. ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇತರ ಬ್ರಾಂಡ್‌ಗಳಿಗೆ ಶೇಕಡಾವಾರು ತೆರಿಗೆ ವಿಧಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಈಗ ರದ್ದುಗೊಳಿಸಲಾಗಿದ್ದು, ಎಲ್ಲಾ ಬಿಯರ್‌ಗಳಿಗೆ ಏಕರೂಪದ ಶೇ 205 ರ ತೆರಿಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ
Image
ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಜಿಂದಾಬಾದ್ಎಂದಿದ್ದಕ್ಕೆ ನಡೀತಾ ಕೊಲೆ?
Image
ಭಕ್ತಿಯಿಂದ ನಮಸ್ಕರಿಸಿ ಕಾಣಿಕೆ ಹುಂಡಿ ಕದ್ದೊಯ್ದ! ಸಿಸಿಟಿವಿ ವಿಡಿಯೋ ನೋಡಿ
Image
ಕೇವಲ 120 ದಿನಗಳಲ್ಲಿ ಕರ್ನಾಟಕದಲ್ಲಿ 3 ಸಾವಿರ ಮಂದಿಗೆ ಹಾವು ಕಡಿತ!
Image
ಗಡುವು ಮುಗಿದರೂ ಕರ್ನಾಟಕದಲ್ಲಿ ಇನ್ನೂ ಇದ್ದಾರೆ ಪಾಕಿಸ್ತಾನೀಯರು!

ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ. ಕಡಿಮೆ ತೆರಿಗೆ ಶ್ರೇಣಿಯನ್ನು ತೆಗೆದುಹಾಕುವುದರೊಂದಿಗೆ, ಎಲ್ಲಾ ಬಿಯರ್ ಬ್ರಾಂಡ್‌ಗಳಿಗೆ ಒಂದೇ ರೀತಿಯ ತೆರಿಗೆ ವಿಧಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮೂರನೇ ಬಾರಿಗೆ ಬಿಯರ್ ದರ ಏರಿಕೆ

ಈಗಿನ ಪ್ರಸ್ತಾವಿತ ಬಿಯರ್ ತೆರಿಗೆ ದರ ಹೆಚ್ಚಳದೊಂದಿಗೆ, ಮೂರು ವರ್ಷಗಳ ಅವಧಿಯಲ್ಲಿ ಬಿಯರ್ ಮೇಲಿನ ತೆರಿಗೆಯನ್ನು ಮೂರನೇ ಬಾರಿ ಹೆಚ್ಚಳ ಮಾಡಿದಂತಾಗಲಿದೆ. 2023 ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 175 ರಿಂದ 185 ಕ್ಕೆ ಹೆಚ್ಚಿಸಿತ್ತು. 2025 ರ ಜನವರಿ 20 ರಂದು ಮತ್ತೊಂದು ಪರಿಷ್ಕರಣೆ ಮಾಡಲಾಗಿತ್ತು. ಆಗ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ 195 ಕ್ಕೆ ಅಥವಾ ಪ್ರತಿ ಬಲ್ಕ್ ಲೀಟರ್‌ಗೆ ರೂ 130 ರ ವರೆಗೆ (ಯಾವುದು ಹೆಚ್ಚೋ ಅದಕ್ಕೆ ಅನುಗುಣವಾಗಿ) ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ತೆರಿಗೆ ಹೆಚ್ಚಳ ಮಾಡಿದೆ.

ಇದನ್ನೂ ಓದಿ: ಅನ್ಯಭಾಗ್ಯ ಅಕ್ಕಿ ಪಾಲಿಶ್ ಮಾಡಿ ಬೇರೆ ಬ್ರ್ಯಾಂಡ್​ಗಳ ಹೆಸರಿನಲ್ಲಿ ಮಾರಾಟ ಶಂಕೆ: ಮಂಗಳೂರಿನಲ್ಲಿ ಮೂಟೆಗಟ್ಟಲೆ ರೇಷನ್ ಅಕ್ಕಿ ಪತ್ತೆ

ಮೂಲ ಅಬಕಾರಿ ಸುಂಕವನ್ನು ಸಹ ಪರಿಷ್ಕರಿಸಲಾಗಿದೆ. ಫ್ಲಾಟ್ ರೇಟ್ ಬದಲಿಗೆ, ಆಲ್ಕೋಹಾಲ್ ಅಂಶವನ್ನು ಆಧರಿಸಿದ ಶ್ರೇಣೀಕೃತ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಶೇ 5 ಅಥವಾ ಅದಕ್ಕಿಂತ ಕಡಿಮೆ ಆಲ್ಕೋಹಾಲ್ ಹೊಂದಿರುವ ಬಿಯರ್‌ಗೆ ಪ್ರತಿ ಬಲ್ಕ್ ಲೀಟರ್‌ಗೆ 12 ರೂ., ಮತ್ತು ಶೇ 5-8 ರ ಆಲ್ಕೋಹಾಲ್ ಹೊಂದಿರುವ ಬಿಯರ್‌ಗೆ 20 ರೂ. ನಿಗದಿಪಡಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ