Karnataka Budget 2025 PDF download: ಕರ್ನಾಟಕ ಬಜೆಟ್ 2025, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ

Karnataka Budget 2025-26 PDF Document Download: ಸಿಎಂ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಅನ್ನು ಇಂದು ಶುಕ್ರವಾರ (ಮಾ. 7) ಮಂಡಿಸುತ್ತಿದ್ದಾರೆ. ಸಿದ್ದರಾಮಯ್ಯ 2.0 ಸರ್ಕಾರದ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ನಾಲ್ಕು ಲಕ್ಷ ಕೋಟಿ ರೂಗೂ ಅಧಿಕ ಗಾತ್ರದ ಬಜೆಟ್ ಇದಾಗಿದ್ದು, ಬೆಟ್ಟದಷ್ಟು ನಿರೀಕ್ಷೆಗಳನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿದೆ. ಈ ಬಜೆಟ್ ಡೌನ್​ಲೋಡ್ ಲಿಂಕ್ ಈ ಕೆಳಗೆ ಇದೆ.

Karnataka Budget 2025 PDF download: ಕರ್ನಾಟಕ ಬಜೆಟ್ 2025, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ
ಸಿದ್ದರಾಮಯ್ಯ
Edited By:

Updated on: Mar 07, 2025 | 11:42 AM

ಬೆಂಗಳೂರು, ಮಾರ್ಚ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶುಕ್ರವಾರ 2025-26ನೇ ಸಾಲಿನ ರಾಜ್ಯ ಬಜೆಟ್ (Karnataka Budget 2025-26) ಬಜೆಟ್ ಮಂಡಿಸಿದ್ದಾರೆ. ಇದು ಅವರ ದಾಖಲೆಯ 16ನೇ ಬಜೆಟ್ ಆಗಿದೆ. ಸಿದ್ದರಾಮಯ್ಯ ನೇತೃತ್ವದ ಈಗಿನ ಕಾಂಗ್ರೆಸ್ ಸರ್ಕಾರದ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಹಿಂದಿನ ಬಜೆಟ್​ನಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ವಿಚಾರದಲ್ಲಿ ಸಾಕಷ್ಟು ಕುತೂಹಲ ಇತ್ತು. 3.71 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. ಈ ಬಾರಿ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂಗಿಂತಲೂ ಹೆಚ್ಚಾಗಿದೆ.

ಕರ್ನಾಟಕ ಬಜೆಟ್​ 2025-26 ಪಿಡಿಎಫ್ ಪ್ರತಿ ಡೌನ್ ಮಾಡಿ:

ಗ್ಯಾರಂಟಿಗಳ ಮಧ್ಯೆ ಇನ್ನಷ್ಟು ಹೆಚ್ಚಿದ ನಿರೀಕ್ಷೆ…

ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ (2025-26) 10,100 ಕೋಟಿ ರೂ ಹಣವನ್ನು ಬಜೆಟ್​​ನಲ್ಲಿ ನೀಡಲಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಗೆ ಮುಂಬರುವ ವರ್ಷದಲ್ಲಿ 28,608 ಕೋಟಿ ರೂ ಮೀಸಲಿರಿಸಲಾಗಿದೆ. ಇದರ ಜೊತೆಗೆ ಮಹಿಳೆಯರ ಸಬಲೀಕರಣಕ್ಕೆ ಮತ್ತಷ್ಟು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಅಕ್ಕ ಕೆಫೆ, ಅಕ್ಕ ಕೋ ಆಪರೇಟಿವ್ ಸೊಸೈಟಿಗಳ ಸ್ಥಾಪನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಗೆಯೇ, 16 ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆ ಮಾಡಲಾಗುತ್ತಿದೆ.

ಇದನ್ನೂ ಓದಿ
ಸಿಎಂ ಸಿದ್ದರಾಮಯ್ಯ ದಾಖಲೆಯ 16ನೇ ಸಲ ಬಜೆಟ್ ಮಂಡಿಸಲಿದ್ದಾರೆ
Budget PDF: ಕರ್ನಾಟಕ ಬಜೆಟ್ 2025, ಪಿಡಿಎಫ್ ಡೌನ್​ಲೋಡ್
Karnataka Budget Highlights: ಬಜೆಟ್​ ಮಂಡಿಸಿ ದಾಖಲೆ ನಿರ್ಮಿಸಿದ ಸಿಎಂ
ನಡೆದು ಬರಲಿ ಇಲ್ ವ್ಹೀಲ್ ಚೇರ​ಲ್ಲಿ; ಸಿದ್ದರಾಮಯ್ಯ ಗತ್ತಲ್ಲಿ ನೋ ಚೇಂಜ್

ಇದನ್ನೂ ಓದಿ: ಕರ್ನಾಟಕ ಬಜೆಟ್: ಲೈವ್ ಅಪ್​ಡೇಟ್ಸ್​ಗೆ ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಹಣ ಬೇಕು. ಇದನ್ನು ಹೊರತುಪಡಿಸಿಯೂ ಬಜೆಟ್​​ನಲ್ಲಿ ಬೇರೆ ಕೆಲ ಮಹತ್ವದ ಯೋಜನೆಗಳಿಗೆ ಹಣ ಹೊಂದಿಸಲಾಗಿದೆ. ಯಾವ್ಯಾವ ಯೋಜನೆ, ವಲಯಕ್ಕೆ ಎಷ್ಟೆಷ್ಟು ಹಣ ನೀಡಲಾಗಿದೆ ಎನ್ನುವ ವಿವರ ಈ ಮೇಲಿನ ಪಿಡಿಎಫ್ ಪ್ರತಿಯಲ್ಲಿ ಕಾಣಬಹುದು.

ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:42 am, Fri, 7 March 25