ಇವಿಎಂನಲ್ಲಿ ಭದ್ರವಾಯ್ತು ಮಿನಿ ಕದನದ ಅಭ್ಯರ್ಥಿಗಳ ಭವಿಷ್ಯ! ದಾವಣಗೆರೆ ದಕ್ಷಿಣದಲ್ಲಿ ಗೆಲ್ಲೋದ್ಯಾರು? ಬಾಗಲ‘ಕೋಟೆ’ ಯಾರಿಗೆ?

Karnataka By Election: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ಸರಾಸರಿ ಶೇ 68ರಷ್ಟು ಮತದಾನ ದಾಖಲಾಗಿದೆ. ಹಣ ಮತ್ತು ಕೋಳಿ ಹಂಚಿಕೆಯಂತಹ ಗಂಭೀರ ಆರೋಪಗಳ ನಡುವೆ ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ ಸೇರಿದ್ದು, ಮೇ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಇವಿಎಂನಲ್ಲಿ ಭದ್ರವಾಯ್ತು ಮಿನಿ ಕದನದ ಅಭ್ಯರ್ಥಿಗಳ ಭವಿಷ್ಯ! ದಾವಣಗೆರೆ ದಕ್ಷಿಣದಲ್ಲಿ ಗೆಲ್ಲೋದ್ಯಾರು? ಬಾಗಲ‘ಕೋಟೆ’ ಯಾರಿಗೆ?
ಇವಿಎಂನಲ್ಲಿ ಭದ್ರವಾಯ್ತು ಮಿನಿ ಕದನದ ಅಭ್ಯರ್ಥಿಗಳ ಭವಿಷ್ಯ!
Image Credit source: tv9
Edited By:

Updated on: Apr 10, 2026 | 6:59 AM

ಬೆಂಗಳೂರು, ಏಪ್ರಿಲ್ 10: ರಾಜ್ಯದ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (Karnataka Bypolls 2026) ಮತದಾನ ಗುರುವಾರ ಮುಕ್ತಾಯಗೊಂಡಿದೆ. ಕಳೆದ 15 ದಿನಗಳಿಂದ ನಡೆದ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದ್ದು, ಮತದಾನವೂ ಮುಗಿದಿದೆ. ಮತದಾರ ಪ್ರಭು ತನ್ನ ನಿರ್ಧಾರವನ್ನು ಮತಯಂತ್ರದಲ್ಲಿ ದಾಖಲಿಸಿದ್ದಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಹುತೇಕ ಸಮಾನ ಪ್ರಮಾಣದ ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.

ಮತದಾನದ ಶೇಕಡಾವಾರು ವಿವರ

  • ದಾವಣಗೆರೆ ದಕ್ಷಿಣ: ಶೇ 68.55 ರಷ್ಟು ಮತದಾನ ದಾಖಲಾಗಿದೆ.
  • ಬಾಗಲಕೋಟೆ: ಶೇ 68.73 ರಷ್ಟು ಮತದಾನವಾಗಿದೆ.

ಹಣ ಮತ್ತು ಕೋಳಿ ಹಂಚಿಕೆ ಆರೋಪ

ಮತದಾನದ ನಡುವೆಯೇ ಮತದಾರರಿಗೆ ಆಮಿಷ ಒಡ್ಡಿದ ಹಲವು ಪ್ರಕರಣಗಳು ವರದಿಯಾಗಿವೆ. ಬಾಗಲಕೋಟೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಜಾಫರ್ ಬೇಫಾರಿ ಎಂಬಾತ ಹಣ ಹಂಚುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ನವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಾಂಬೆ ಕಾಲೋನಿಯಲ್ಲಿ ಮಹಿಳೆಯೊಬ್ಬರು ತನಗೆ ಕಾಂಗ್ರೆಸ್‌ನವರು 500 ರೂ. ನೀಡಿದ್ದಾರೆ ಎಂದು ಹಣ ಪ್ರದರ್ಶಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಇತ್ತ ಹಳೇಪೇಟೆಯಲ್ಲಿ ಹಣ ಹಂಚಲು ಮನೆಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ಹೊರಗಿನಿಂದ ಲಾಕ್ ಮಾಡಿದ್ದರೂ, ಅವರು ಹಿಂಬಾಗಿಲಿನಿಂದ ಎಸ್ಕೇಪ್ ಆಗಿದ್ದಾರೆ.

ಇನ್ನು ದಾವಣಗೆರೆಯಲ್ಲಿ ವಿಭಿನ್ನ ಆಮಿಷದ ಆರೋಪ ಕೇಳಿಬಂದಿದೆ. ಎಸ್‌ಪಿಎಸ್ ನಗರದಲ್ಲಿ ಹಣ ಹಂಚಿಕೆಯ ವಿಡಿಯೋ ವೈರಲ್ ಆಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನವರು ಮತಕ್ಕಾಗಿ ‘ಕೋಳಿ’ ಹಂಚಿದ್ದಾರೆ ಎಂದು ಬಾಲಕರು ಹೇಳುತ್ತಿರುವ ವಿಡಿಯೋವನ್ನು ಬಿಜೆಪಿ ಮುಖಂಡ ವಿನಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ ಉಪಚುನಾವಣೆ: ಮತದಾನ ಮಾಡಲು ಗೋವಾದಿಂದ ಎರಡು ಬಸ್‌ಗಳಲ್ಲಿ ಬಂದ 80 ಮತದಾರರು!

ಈ ಎಲ್ಲಾ ಜಿದ್ದಾಜಿದ್ದಿಗಳ ನಡುವೆ, ಮೇ 4ರಂದು ಫಲಿತಾಂಶ ಹೊರಬೀಳಲಿದೆ.

ವರದಿ: ಬಸವರಾಜ್ ದೊಡ್ಮನಿ, ರವಿಮೂಕಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Follow Us