ಸರ್ಕಾರವನ್ನ ಬಡಿದೆಬ್ಬಿಸಿದ ಉದ್ಯೋಗಾಕಾಂಕ್ಷಿಗಳು: 56 ಸಾವಿರ ಹುದ್ದೆ ನೇಮಕಕ್ಕೆ ಸಂಪುಟ ಒಪ್ಪಿಗೆ

ಧಾರವಾಡದಲ್ಲಿ ಮೊನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ರಾಜ್ಯ ಸರ್ಕಾರವನ್ನ ಬಡಿದೆಬ್ಬಿಸಿದೆ. ಖಾಲಿ ಇರುವ ಎರಡೂವರೆ ಲಕ್ಷ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಹರಸಾಹಸ ಪಡುತ್ತಿದೆ. ಗ್ಯಾರಂಟಿ ಹೊರೆ ಮಾಡ್ಕೊಂಡಿರೋ ಸರ್ಕಾರಕ್ಕೆ ಹಣಕಾಸಿನ ಸವಾಲಾಗಿದೆ. ಇನ್ನೊಂದೆಡೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಭಾರೀ ಸುದ್ದು ಮಾಡಿದೆ. ಇದೆಲ್ಲದರ ನಡುವೆ ಕೊನೆಗೂ ಸಿದ್ದರಾಮಯ್ಯ ಸರ್ಕಾರ 56 ಸಾವಿರ ಹುದ್ದೆ ನೇಮಕಕ್ಕೆ ಮುಂದಾಗಿದೆ.

ಸರ್ಕಾರವನ್ನ ಬಡಿದೆಬ್ಬಿಸಿದ ಉದ್ಯೋಗಾಕಾಂಕ್ಷಿಗಳು: 56 ಸಾವಿರ  ಹುದ್ದೆ ನೇಮಕಕ್ಕೆ ಸಂಪುಟ ಒಪ್ಪಿಗೆ
ಸಿದ್ದರಾಮಯ್ಯ
Image Credit source: Google
Edited By:

Updated on: Feb 26, 2026 | 9:22 PM

ಬೆಂಗಳೂರು, (ಫೆಬ್ರವರಿ 26): ಮೊನ್ನೆ ವಿದ್ಯಾಕಾಶಿ  ಧಾರವಾಡದಲ್ಲಿ  ಉದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆ (Dharwad Protest)  ದೇಶದಲ್ಲಿ ಭಾರೀ ಸದ್ದು ಮಾಡಿದೆ.  ಹೀಗಾಗಿ ಇದನ್ನು ಸಿದ್ದರಾಮಯ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇಂದು (ಫೆಬ್ರವರಿ 26) ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದೆ. ನೇಮಕಾತಿಗೆ ಇರೋ ಸಾಧಕ ಭಾಧಕಗಳ ಬಗ್ಗೆ ಚರ್ಚಿಸಿದ್ದು, ಅಂತಿಮವಾಗಿ ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ನೇಮಕಾತಿಗೆ ತೀರ್ಮಾನಿಸಿದೆ. ಹೌದು…ಕರ್ನಾಟಕದ ವಿವಿಧ ಇಲಾಖೆಗಳ 56 ಸಾವಿರ ಖಾಲಿ ಹುದ್ದೆ ಭರ್ತಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಫಲಸಿಕ್ಕಂತಾಗಿದೆ.

ಹಳೇ ಸೂತ್ರದ ಅನ್ವಯ ನೇಮಕಾತಿ

ಹಲವು ಸವಾಲುಗಳ ನಡುವೆ ರಾಜ್ಯ ಸರ್ಕಾರ, ಮೀಸಲಾತಿ ಮಿತಿ 50% ಮೀರದಂತೆ ಒಳಮೀಸಲಾತಿಯೊಂದಿಗೆ ವಿವಿಧ ಇಲಾಖೆಗಳ 56 ಸಾವಿರ ಖಾಲಿ ಹುದ್ದೆ ನೇಮಕಕ್ಕೆ ತೀರ್ಮಾನಿಸಿದ್ದು, ನೇಮಕಾತಿಗಾಗಿ ತಾತ್ಕಲಿಕ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. 15% ಎಸ್ಸಿ ಮೀಸಲಾತಿಗೆ ಒಳಮೀಸಲು ನೀಡಿ ನೇಮಕಾತಿಗೆ ತೀರ್ಮಾನಿಸಿದೆ. ಆದ್ರೆ, ಎಸ್‌ಸಿ ಒಳಮೀಸಲಾತಿ 17% ಇಟ್ಟು ತಕ್ಷಣ ನೇಮಕಾತಿ ಅಸಾಧ್ಯ. 17% ಎಸ್ಸಿ ಮೀಸಲಾತಿ ಜಾರಿಗೆ ಕಾನೂನು ಹೋರಾಟಕ್ಕೆ ಸರ್ಕಾರ ಮುಂದಾಗಬೇಕು. ರಾಜ್ಯಪಾಲರು ಒಳ ಮೀಸಲಾತಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದರೂ ಕಾನೂನು ಸಂಘರ್ಷ ಮುಂದುವರಿಸಬೇಕಿದೆ. ಹೀಗಾಗಿ ಹಳೇ ಸೂತ್ರದ ಅನ್ವಯ  ಅಂದರೆ 15% ಎಸ್ಸಿ, 3% ಎಸ್ಟಿ ಮೀಸಲಾತಿಯೋಂದಿಗೆ ನೇಮಕಾತಿಗೆ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಧಾರವಾಡದಲ್ಲಿ ಉಗ್ರ ಹೋರಾಟ ಬೆನ್ನಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಖಾಲಿ ಇರುವ ಎರಡೂವರೆ ಲಕ್ಷ ಉದ್ಯೋಗ ಭರ್ತಿಗೆ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಒಳ ಮೀಸಲಾತಿ ಬಿಲ್‌ಗೂ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಬಗ್ಗೆಯೂ ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗಿದೆ. ಈಗ ಹೊಸ ನೇಮಕಾತಿಗೆ ಅಧಿಸೂಚನೆ ಹೊರಡಿಸುವ ಕುರಿತು ತೀರ್ಮಾನಿಸಿದ್ದು, ಮೀಸಲಾತಿ ಗೊಂದಲದ ನಡುವೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತೆ ಎನ್ನುವ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:55 pm, Thu, 26 February 26

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us