ಮುಸ್ಲಿಮರಲ್ಲಿಯೂ 93 ಉಪಜಾತಿಗಳಿವೆ: ಜಾತಿ ಗಣತಿ ವರದಿ ಬಗ್ಗೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಿಷ್ಟು

ಹಿಂದೂಗಳಂತೆ ಮುಸ್ಲಿಮರಲ್ಲೂ ಜಾತಿಗಳಿವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಬೆಂಗಳೂರಿನಲ್ಲಿ ‘ಟಿವಿ9’ಗೆ ತಿಳಿಸಿದ್ದಾರೆ. ಮುಸ್ಲಿಮರಲ್ಲಿ ಸುಮಾರು 93 ಉಪಜಾತಿಗಳು ಸಿಕ್ಕಿವೆ. ಅವನ್ನೆಲ್ಲ ಪರಿಶೀಲನೆ ಮಾಡಿ ವರದಿಯನ್ನು ಸಿದ್ಧಪಡಿಸಿದ್ದೇವೆ. ಅಲೆಮಾರಿ ಕೆಟಗರಿಯಲ್ಲೂ ಕೂಡ ಕೆಲವರು ಮುಸ್ಲಿಮರಿದ್ದಾರೆ. ಪಿಂಜಾರ, ಜಪ್ಪರ್ ಬಂದ್ ಅಲೆಮಾರಿ ಜನಾಂಗಕ್ಕೆ ಬರುತ್ತದೆ ಎಂದು ಅವರು ಹೇಳಿದ್ದಾರೆ. ಜಯಪ್ರಕಾಶ್ ಹೆಗ್ಡೆ ಜತೆ ‘ಟಿವಿ9’ ಪ್ರತಿನಿಧಿ ಪ್ರಸನ್ನ ನಡೆಸಿರುವ ಮಾತುಕತೆಯ ವಿವರ ಇಲ್ಲಿದೆ.

ಮುಸ್ಲಿಮರಲ್ಲಿಯೂ 93 ಉಪಜಾತಿಗಳಿವೆ: ಜಾತಿ ಗಣತಿ ವರದಿ ಬಗ್ಗೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಿಷ್ಟು
ಮುಸ್ಲಿಮರಲ್ಲಿಯೂ 93 ಉಪಜಾತಿಗಳಿವೆ: ಜಯಪ್ರಕಾಶ್ ಹೆಗ್ಡೆ

Updated on: Apr 17, 2025 | 3:00 PM

ಬೆಂಗಳೂರು, ಏಪ್ರಿಲ್ 17: ಹಿಂದೂಗಳಲ್ಲಿ ಯಾವ ರೀತಿಯಲ್ಲಿ ಬೇರೆ ಬೇರೆ ಜಾತಿ ಇದೆಯೋ ಅದೇ ರೀತಿಯಲ್ಲಿ ಮುಸ್ಲಿಮರಲ್ಲೂ (Muslims) ನಮಗೆ ಒಂದು 93 ಜಾತಿ ಹಾಗೂ ಉಪಜಾತಿ ಸಿಕ್ಕಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash Hegde) ತಿಳಿಸಿದರು. ಜಾತಿ ಗಣತಿ ವರದಿ (Caste Census Report) ವಿಚಾರವಾಗಿ ‘ಟಿವಿ9’ ಜತೆ ಮಾತನಾಡಿದ ಅವರು, ಮುಸ್ಲಿಮರಲ್ಲಿಯೂ ಜಾತಿ, ಉಪ ಜಾತಿಗಳಿವೆ. ಅವರ ಮನವಿಯ ಮೇಲೆ ಅವುಗಳನ್ನೆಲ್ಲ ಪರಿಶೀಲಿಸಿ ನಾವು ತೀರ್ಮಾನ ತಗೊಂಡಿದ್ದೇವೆ ಎಂದರು.

ಮುಸ್ಲಿಮರ ಉಪಜಾತಿಗಳನ್ನು ಒಂದೇ ಕಡೆ ತೋರಿಸಲಾಗಿದೆ, ಹಿಂದೂಗಳನ್ನು ಬೇರೆ ಬೇರೆ ತೋರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರನ್ನು ಒಂದೇ ಕಡೆಯಲ್ಲಿ ಸೇರಿಸಿದ್ದೇವೆ. ಕೆಲವು ಬೇರೆ ಬೇರೆಯೂ ಇವೆ. ಕೆಲವರನ್ನು ಅಲೆಮಾರಿಯಲ್ಲೂ ಸೇರಿಸಲಾಗಿದೆ. ಈಗ ಪಿಂಜಾರ, ಪಿಂಜಾರ ಜಪ್ಪರ್ ಇವರೆಲ್ಲ ಇದ್ದಾರೆ ಎಂದು ಹೇಳಿದರು.

ಜಾತಿ ಗಣತಿ ವರದಿಯಲ್ಲಿ ಶೇಕಡಾ 50ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಇದು ನ್ಯಾಯಾಲಯದಲ್ಲಿ ಸಿಂಧುವಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಹೆಚ್ಚಾಗಿ ಆಗಿದೆ. ಎಸ್​​ಸಿ, ಎಸ್​ಟಿ ಪಂಗಡಗಳಿಗೆ ಜಾಸ್ತಿ ಮಾಡಿ ಆಗಿದೆ. ಅದು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕು ಅಷ್ಟೇ ಎಂದರು. ಕೇಂದ್ರ ಸರ್ಕಾರದವರು ಇಡಬ್ಲ್ಯುಎಸ್ (ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿ) ಶೇ 10 ರಷ್ಟು ಜಾಸ್ತಿ ಮಾಡಿ ಆಗಿದೆ. ಅದನ್ನು ಸಾಂವಿಧಾನಿಕ ತಿದ್ದುಪಡಿ ಮಾಡಿ ನ್ಯಾಯಾಲಯ ಸಮ್ಮತಿ ನೀಡಿದೆ. ಹಾಗಾಗಿ ಆ ವಿಚಾರದಲ್ಲಿ ಮುಂದೆ ಏನು ತೀರ್ಮಾನ ಆಗುತ್ತದೆಯೋ ಗೊತ್ತಿಲ್ಲ. ಅದು ನ್ಯಾಯಾಂಗದ ಪರಾಮರ್ಶೆಗೆ ಒಳಪಟ್ಟ ವಿಚಾರ ಎಂದರು.

ಇದನ್ನೂ ಓದಿ: ಜಾತಿ ಗಣತಿ ವಿರುದ್ಧ ಸಿಡಿದೆದ್ದ ಒಕ್ಕಲಿಗರು, ಲಿಂಗಾಯತರು: ವರದಿ ಜಾರಿಯಾದರೆ ಸರ್ಕಾರ ಬೀಳಿಸುವ ಎಚ್ಚರಿಕೆ

ಇದನ್ನೂ ಓದಿ
ಜಾತಿ ಗಣತಿ ಜಾರಿ ಮಾಡಿದ್ರೆ ಸರ್ಕಾರ ಬೀಳಿಸುತ್ತೇವೆ: ಒಕ್ಕಲಿಗರಿಂದ ಎಚ್ಚರಿಕೆ
ಜಾತಿಗಣತಿ ಜಟಾಪಟಿ: ನಾಳೆ ಒಕ್ಕಲಿಗ ಶಾಸಕರ ಸಭೆ ಕರೆದ ಡಿಕೆ ಶಿವಕುಮಾರ್​
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಜಾತಿ ಗಣತಿ ವರದಿ ಹಿಂಪಡೆದು, ವೈಜ್ಞಾನಿಕ ವರದಿ ರೂಪಿಸಿ: ಅಶೋಕ್ ಆಗ್ರಹ

ಜಾತಿ ಗಣತಿ ವಿಚಾರವಾಗಿ ರಾಜಕೀಯ ನಿಲುವಿನ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡಲಾರೆ. ಆದರೆ, ನನ್ನ ಪ್ರಕಾರ ಇದು ಒಳ್ಳೆಯ ವರದಿ. ಸಮೀಕ್ಷೆಯು ಸಾಧಾರಣ ಶೇ 95 ರಷ್ಟು ಸರಿಯಾಗಿ ಇದೆ. ಆದ್ದರಿಂದ ಇದನ್ನು ಸರ್ಕಾರ ಅಂಗೀಕರಿಸಿದರೆ ಒಳ್ಳೆಯದು ಎಂದರು.

ಅಷ್ಟೆಲ್ಲ ಉಪಪಂಗಡ ನಮ್ಮಲ್ಲಿ ಇಲ್ಲ: ಶಾಸಕ ಹ್ಯಾರಿಸ್

ಜಯಪ್ರಕಾಶ್ ಹೆಗ್ಡೆ ಹೇಳಿಕೆ ಬಗ್ಗೆ ಕಾಂಗ್ರೆಸ್ ಶಾಸಕ ಎನ್​ಎ ಹ್ಯಾರಿಸ್ ಪ್ರತಿಕ್ರಿಯಿಸಿದ್ದು, ಅಷ್ಟೆಲ್ಲ ಉಪಪಂಗಡ ನಮ್ಮಲ್ಲಿ ಇಲ್ಲ ಎಂದಿದ್ದಾರೆ. ನಮ್ಮಲ್ಲಿ ಇನ್ನೂ ಜನಸಂಖ್ಯೆ ಹೆಚ್ಚು ಇರಬಹುದು ಎಂದು ಬುಧವಾರ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ, ಎಷ್ಟಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ