
ಬೆಂಗಳೂರು, ಮೇ 12: ಆಪರೇಷನ್ ಸಿಂಧೂರ್ (Operation Sindoor) ಮೂಲಕ ಭಾರತೀಯ ಸೇನೆ ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ. ಭಾರತ-ಪಾಕ್ ಉದ್ವಿಗ್ನ ಸಂದರ್ಭದಲ್ಲಿ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಶಾಂತಿ ಮಂತ್ರ ಜಪಿಸಿತ್ತು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕರ್ನಾಟಕ ಕಾಂಗ್ರೆಸ್ನಿಂದ (Karnataka congress) ಮತ್ತೊಂದು ಎಡವಟ್ಟಾಗಿದೆ. ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಭರದಲ್ಲಿ ಕಾಶ್ಮೀರ ಪಾಕ್ಗೆ ಸೇರಿದ ಮ್ಯಾಪ್ ಹಾಕಿ ಪೋಸ್ಟ್ ಮಾಡಲಾಗಿದೆ. ಆ ಮೂಲಕ ಕಾಂಗ್ರೆಸ್ ಕಾಶ್ಮೀರವನ್ನ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದೆ. ಬಳಿಕ ಎಡವಟ್ಟು ಗೊತ್ತಾಗ್ತಿದ್ದಂತೆ ಕಾಂಗ್ರೆಸ್ ಪೋಸ್ಟ್ ಡಿಲೀಟ್ ಮಾಡಿದೆ.
ಭಾರತ-ಪಾಕಿಸ್ತಾನ ಕದನದ ನಡುವೆ ಕರ್ನಾಟಕ ಕಾಂಗ್ರೆಸ್ ಮತ್ತೊಂದು ವಿವಾದ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಟೀಕಿಸುವ ಭರದಲ್ಲಿ ಕಾಂಗ್ರೆಸ್ ಯಡವಟ್ಟು ಮಾಡಿಕೊಂಡಿದೆ. ಪಾಕಿಸ್ತಾನಕ್ಕೆ ಐಎಂಎಫ್ (IMF) ಲೋನ್ ನೀಡಿದ್ದನ್ನ ಟೀಕಿಸಿ ಪೋಸ್ಟ್ ಹಾಕಲಾಗಿದೆ.
ಇದನ್ನೂ ಓದಿ: ಅತ್ತ ಆಪರೇಷನ್ ಸಿಂಧೂರ್, ಇತ್ತ ಶಾಂತಿ ಮಂತ್ರ ಜಪಿಸಿದ ಕರ್ನಾಟಕ ಕಾಂಗ್ರೆಸ್ಗೆ ಜನ ತರಾಟೆ
ಆದರೆ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ ಮ್ಯಾಪ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಯಡವಟ್ಟು ಗೊತ್ತಾಗುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಅಷ್ಟರಲ್ಲಿ ಕರ್ನಾಟಕ ಕಾಂಗ್ರೆಸ್‌ನ ಎಡವಟ್ಟು ಡಿಸಿಎಂ ಡಿಕೆ ಶಿವಕುಮಾರ್ಗೆ ತಿಳಿದಿದ್ದು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಿಬ್ಬಂದಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಎಐಸಿಸಿಗೂ ರಾಜ್ಯ ಕಾಂಗ್ರೆಸ್ ಎಡವಟ್ಟು ತಲುಪಿದೆ.
ಇನ್ನು ಕರ್ನಾಟಕ ಕಾಂಗ್ರೆಸ್ ಯಡವಟ್ಟಿನ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಇದೆಲ್ಲಾ ಸುಳ್ಳು, ಸಣ್ಣ ತಪ್ಪು ಇತ್ತು. ಅದೆಲ್ಲಾ ಮ್ಯಾಪ್ ತೆಗೆಯೋದಕ್ಕೆ ಆಗಲ್ಲ, ಸರಿ ಪಡಿಸಿದ್ದೇವೆ. ಯಾರು ಕೆಲಸ ಮಾಡುತ್ತಿದ್ದರೋ, ಅವರನ್ನೆಲ್ಲಾ ತೆಗೆದು ಬೀಸಾಕಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 7 ದಿನದ ಕಂದಮ್ಮ, ಬಾಣಂತಿ ಹೆಂಡ್ತಿಯನ್ನು ಬಿಟ್ಟು ದೇಶ ಸೇವೆಗೆ ತೆರಳಿದ ಕಲಬುರಗಿ ಯೋಧ
ಭಾರತೀಯ ಸೇನೆ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತ್ತು. ಆ ಮೂಲಕ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿತ್ತು. ಈ ದಾಳಿ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಶಾಂತಿ ಮಂತ್ರ ಜಪಿಸಿತ್ತು. ಇದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಟ್ವೀಟ್ ಡಿಲೀಟ್ ಮಾಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:21 pm, Mon, 12 May 25