AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಬಿಎಂಪಿಗೆ ಹಿಡಿದಿದ್ದ ಗ್ರಹಣಕ್ಕೆ ಕೊನೆಗೂ ಮುಕ್ತಿ: ಗ್ರೇಟರ್ ಬೆಂಗಳೂರು ಪಾಲಿಕೆಗೆ ನವೆಂಬರ್​ನಲ್ಲಿ ಚುನಾವಣೆ

ಬಿಬಿಎಂಪಿಯ ಬದಲು ಗ್ರೇಟರ್ ಬೆಂಗಳೂರಿನ ಜಪ ಮಾಡುತ್ತಿದ್ದ ಕರ್ನಾಟಕ ಸರ್ಕಾರ ಇದೀಗ ನವೆಂಬರ್​​ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುತ್ತೇವೆಂದು ಸುಪ್ರೀಂಕೋರ್ಟ್​ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಆ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಿಡಿದಿದ್ದ ಗ್ರಹಣಕ್ಕೆ ಕೊನೆಗೂ ಮುಕ್ತಿ ಸಿಗಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಬಿಎಂಪಿಗೆ ಹಿಡಿದಿದ್ದ ಗ್ರಹಣಕ್ಕೆ ಕೊನೆಗೂ ಮುಕ್ತಿ: ಗ್ರೇಟರ್ ಬೆಂಗಳೂರು ಪಾಲಿಕೆಗೆ ನವೆಂಬರ್​ನಲ್ಲಿ ಚುನಾವಣೆ
ಬಿಬಿಎಂಪಿ, ಸುಪ್ರೀಂಕೋರ್ಟ್
ಮಹೇಶ್ ಇ, ಭೂಮನಹಳ್ಳಿ
| Edited By: |

Updated on:Aug 01, 2025 | 1:46 PM

Share

ಬೆಂಗಳೂರು, ಆಗಸ್ಟ್​ 01: 2020ರಿಂದ ಬಿಬಿಎಂಪಿ ಚುನಾವಣೆ (BBMP elections) ನಡೆದಿಲ್ಲ. ಈಗೊಮ್ಮೆ, ಆಗೊಮ್ಮೆ ಮಾಡುವುದಾಗಿ ಹೇಳಿ ಮುಂದೂಡಿಕೊಂಡು ಬರಲಾಗುತ್ತಿತ್ತು. ಇದೀಗ ಬಿಬಿಎಂಪಿಗೆ ಹಿಡಿದಿದ್ದ ಗ್ರಹಣಕ್ಕೆ ಕೊನೆಗೂ ಮುಕ್ತಿ ಸಿಗಲಿದೆ. ಏಕೆಂದರೆ ಗ್ರೇಟರ್ ಬೆಂಗಳೂರು ಪಾಲಿಕೆಗೆ ನವೆಂಬರ್​ನಲ್ಲಿ ಚುನಾವಣೆ ನಡೆಸುತ್ತೇವೆಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್​ಗೆ (Supreme Court) ಅಫಿಡವಿಟ್ ಸಲ್ಲಿಸಿದೆ.

ಹೌದು. ನವೆಂಬರ್​​ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ. ಅಗತ್ಯವಿದ್ದರೆ ನವೆಂಬರ್ ಒಳಗೂ ಪ್ರಕ್ರಿಯೆ ಮುಗಿಸಲಾಗುವುದು. ವಾರ್ಡ್​ ವಿಂಗಡಣೆ, ಮೀಸಲಾತಿ ಪ್ರಕ್ರಿಯೆ ಅಂತ್ಯಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್​ಗೆ ಕರ್ನಾಟಕ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ನಡೆಸಲು ಮುಂದಾದ ಸರ್ಕಾರ: 5 ಭಾಗಗಳಾಗಿ ವಿಂಗಡಿಸಲು ತೀರ್ಮಾನ

ಇದನ್ನೂ ಓದಿ
Image
ಸ್ವಚ್ಛ ಬೆಂಗಳೂರು ಕಾರ್ಯಕ್ರಮ ಶೀಘ್ರದಲ್ಲಿ ಜಾರಿಗೊಳ್ಳಲಿದೆ: ಶಿವಕುಮಾರ್
Image
ಸರ್ವಪಕ್ಷ ಸಭೆ ಕರೆಯಲಿದ್ದೇನೆ, ಪಾಲಿಕೆ ಎಲ್ಲರಿಗೂ ಸೇರಿದ್ದು: ಶಿವಕುಮಾರ್
Image
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
Image
BBMP ಚುನಾವಣೆ ನಡೆಸಲು ಮುಂದಾದ ಸರ್ಕಾರ: 5 ಭಾಗಗಳಾಗಿ ವಿಂಗಡಿಸಲು ತೀರ್ಮಾನ

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದ್ದು, ಅಷ್ಟರಲ್ಲಿ ಲಿಖಿತ ದಾಖಲೆಯನ್ನು ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್​​ಮಾಲ್ಯ ಬಾಗ್ಚಿ ಅವರಿರುವ ಪೀಠವು ಹಿರಿಯ ವಕೀಲ ಎ.ಎಂ ಸಿಂಘ್ವಿ ಮತ್ತು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಸೂಚಿಸಿದೆ.

ಬಿಬಿಎಂಪಿ ವಾರ್ಡ್​​ ವಿಭಜನೆ, ಗಡಿ ನಿರ್ಣಯ, ಪರಿಷ್ಕರಣೆ, ಮೀಸಲಾತಿ ಮತ್ತು ಮತದಾರರ ಪಟ್ಟಿಯ ಸಿದ್ಧತೆಗೆ ಸಂಬಂಧಿಸಿದಂತೆ ದಾಖಲೆಗಳು ಒಳಗೊಂಡಿವೆ. ಕರ್ನಾಟಕ ಸರ್ಕಾರ ಸಲ್ಲಿರುವ ಅಫಿಡವಿಟ್​​ನಲ್ಲಿ, ನವೆಂಬರ್ ವೇಳೆಗೆ ಎಲ್ಲ ಪ್ರಕ್ರಿಯೆ ಮುಗಿಸುವುದಾಗಿ ಮಾಹಿತಿ ನೀಡಿದ್ದು, ಈಗಾಗಲೇ ಶೇ. 50 ರಷ್ಟು ಕ್ರಮಗಳು ಪೂರ್ಣಗೊಂಡಿವೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ಈ ವರ್ಷ ಕಳೆಯುವುದರೊಳಗೆ ನಡೆಯಲಿವೆ: ಡಿಕೆ ಶಿವಕುಮಾರ್

ಈ ಹಿಂದಿನ ಬಿಬಿಎಂಪಿಯ ಸದಸ್ಯರ ಅಧಿಕಾರ ಅವಧಿ 2020 ಸೆಪ್ಟೆಂಬರ್ 10ರಂದು ಮುಕ್ತಾಯಗೊಂಡಿತ್ತು.  ಡಿಸೆಂಬರ್ 18ರಂದು ಬೆಂಗಳೂರು ಆಡಳಿತಕ್ಕೆ ಅಂಗೀಕರಿಸಲಾದ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ, 2020 ರ ಅಡಿಯಲ್ಲಿ ಕಡ್ಡಾಯವಾಗಿ 243 ವಾರ್ಡ್‌ಗಳ ಬದಲಿಗೆ 198 ವಾರ್ಡ್‌ಗಳಿಗೆ ಬಿಬಿಎಂಪಿ ಚುನಾವಣೆ ನಡೆಸಬೇಕೆಂಬ ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:14 pm, Fri, 1 August 25

Follow Us
ಪಂಚಮಸಾಲಿ ಪೀಠ ಸಂಘರ್ಷ: 3 ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ
ಪಂಚಮಸಾಲಿ ಪೀಠ ಸಂಘರ್ಷ: 3 ಟ್ರಸ್ಟಿಗಳ ಉಚ್ಚಾಟನೆ; ಸೋಮನಗೌಡ ಸ್ಫೋಟಕ ಹೇಳಿಕೆ
ನನ್ನ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಐರನ್ ಲೇಡಿ
ನನ್ನ ಅಕ್ಕ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕದ ಐರನ್ ಲೇಡಿ
ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ
ಉಲ್ಟಾ ಹೊಡೆದ ಚೇತನ್ ಅಹಿಂಸ ವಿರುದ್ಧ ಸಾರಾ ಗೋವಿಂದು ವಾಗ್ದಾಳಿ
ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು
ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು
ಅಭಿಮಾನಿ ಸಂಘದ ಹೆಸರಲ್ಲಿ ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ: ಚೇತನ್
ಅಭಿಮಾನಿ ಸಂಘದ ಹೆಸರಲ್ಲಿ ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ: ಚೇತನ್
ದೊಣ್ಣೆ ಹಿಡಿದು ಕಾರಿನ ಗಾಜು ಒಡೆಯಲು ಬಂದ ವ್ಯಕ್ತಿ
ದೊಣ್ಣೆ ಹಿಡಿದು ಕಾರಿನ ಗಾಜು ಒಡೆಯಲು ಬಂದ ವ್ಯಕ್ತಿ
ಬೇಸಿಗೆ ಧಗೆ ಹೆಚ್ಚಾಗುತ್ತಿದ್ದಂತೆ ಚಿಲ್ ಬಿಯರ್‌ಗೆ ಭಾರಿ ಡಿಮ್ಯಾಂಡ್
ಬೇಸಿಗೆ ಧಗೆ ಹೆಚ್ಚಾಗುತ್ತಿದ್ದಂತೆ ಚಿಲ್ ಬಿಯರ್‌ಗೆ ಭಾರಿ ಡಿಮ್ಯಾಂಡ್
ಪ್ರತಿಕೃತಿ ಸುಡುವಾಗ ಬಿಜೆಪಿ ಶಾಸಕಿ ಕೂದಲಿಗೆ ಹೊತ್ತಿದ ಬೆಂಕಿ
ಪ್ರತಿಕೃತಿ ಸುಡುವಾಗ ಬಿಜೆಪಿ ಶಾಸಕಿ ಕೂದಲಿಗೆ ಹೊತ್ತಿದ ಬೆಂಕಿ
ಡಾ. ರಾಜ್ ಸಮಾಧಿ ವಿವಾದ: ನಾನು ಹೇಳಿದ ವಿಚಾರ ಸುಳ್ಳಲ್ಲ ಎಂದ ಚೇತನ್ ಅಹಿಂಸಾ
ಡಾ. ರಾಜ್ ಸಮಾಧಿ ವಿವಾದ: ನಾನು ಹೇಳಿದ ವಿಚಾರ ಸುಳ್ಳಲ್ಲ ಎಂದ ಚೇತನ್ ಅಹಿಂಸಾ
ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಮಹಿಳೆ
ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡ ಮಹಿಳೆ