Karnataka Govt Holidays: 2026ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ
Karnataka Govt Holidays: ಕರ್ನಾಟಕ ಸರ್ಕಾರ 2026ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಇಂದಿನ ಸಚಿವ ಸಂಪುಟದಲ್ಲಿ ಅನುಮೋದಿಸಲಾಗಿದ್ದು, ಈ ಪಟ್ಟಿಯಲ್ಲಿ ರಾಷ್ಟ್ರೀಯ ಮತ್ತು ಪ್ರಮುಖ ಹಬ್ಬಗಳು ಸೇರಿದಂತೆ ಒಟ್ಟು 20 ರಜೆಗಳಿವೆ. 2026ನ ಸಾಲಿನ ಸಂಪೂರ್ಣ ಸರ್ಕಾರಿ ರಜೆ ಪಟ್ಟಿ ಇಲ್ಲಿದೆ.

ಬೆಂಗಳೂರು, ನವೆಂಬರ್ 13: ಕರ್ನಾಟಕ ಸರ್ಕಾರ 2026ನೇ ಸಾಲಿನ ಸರ್ಕಾರಿ ರಜಾ (Holidays) ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2026ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಯನ್ನು ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಅನುಮೋದಿಸಲಾಗಿದ್ದು, ರಾಷ್ಟ್ರೀಯ ಮತ್ತು ನಾಡ ಹಬ್ಬಗಳು ಸೇರಿದಂತೆ ಒಟ್ಟು 20 ದಿನಗಳು ಸರ್ಕಾರಿ ರಜೆ ಇರಲಿದೆ. ಸಾರ್ವತ್ರಿಕ ರಜೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ಗುರುವಾರ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವತ್ರಿಕ ರಜಾ ಪಟ್ಟಿಗೆ ಒಪ್ಪಿಗೆ ಸೂಚಿಸಲಾಗಿದೆ. ಆ ಮೂಲಕ ಮುಂದಿನ ವರ್ಷ ಶಾಲೆಗಳಿಗೆ, ಸರ್ಕಾರಿ ಕಚೇರಿಗಳಿಗೆ, ಸಂಸ್ಥೆಗಳಿಗೆ ಈ ರಜೆಗಳು ಅನ್ವಯವಾಗಲಿವೆ.
2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು
- 15.01.2026-ಗುರುವಾರ-ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
- 26.01.2026-ಸೋಮವಾರ-ಗಣರಾಜ್ಯೋತ್ಸವ
- 19.03.2026-ಗುರುವಾರ-ಯುಗಾದಿ ಹಬ್ಬ
- 21.03.2026-ಶನಿವಾರ-ಖುತುಬ್-ಎ-ರಂಜಾನ್
- 31.03.2026-ಮಂಗಳವಾರ-ಮಹಾವೀರ ಜಯಂತಿ
- 03.04.2026-ಶುಕ್ರವಾರ-ಗುಡ್ ಫ್ರೈಡೇ
- 14.04.2026-ಮಂಗಳವಾರ-ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ
- 20.04.2026-ಸೋಮವಾರ-ಬಸವ ಜಯಂತಿ, ಅಕ್ಷಯ ತೃತೀಯ
- 01.05.2026-ಶುಕ್ರವಾರ-ಕಾರ್ಮಿಕ ದಿನಾಚರಣೆ
- 28.05.2026-ಗುರುವಾರ-ಬಕ್ರೀದ್
- 26.06.2026-ಶುಕ್ರವಾರ-ಮೊಹರಂ ಕಡೆ ದಿನ
- 15.08.2026-ಶನಿವಾರ-ಸ್ವಾತಂತ್ರ್ಯ ದಿನಾಚರಣೆ
- 26.08.2026-ಬುಧವಾರ-ಈದ್-ಮಿಲಾದ್
- 14.09.2026-ಸೋಮವಾರ-ವರಸಿದ್ಧಿ ವಿನಾಯಕ ವ್ರತ
- 02.10.2026-ಶುಕ್ರವಾರ-ಗಾಂಧಿ ಜಯಂತಿ
- 20.10.2026-ಮಂಗಳವಾರ-ಮಹಾನವಮಿ, ಆಯುಧಪೂಜೆ
- 21.10.2026-ಬುಧವಾರ-ವಿಜಯದಶಮಿ
- 10.11.2026-ಮಂಗಳವಾರ-ಬಲಿಪಾಡ್ಯಮಿ, ದೀಪಾವಳಿ
- 27.11.2026-ಶುಕ್ರವಾರ-ಕನಕದಾಸ ಜಯಂತಿ
- 25.12.2026-ಶುಕ್ರವಾರ-ಕ್ರಿಸ್ ಮಸ್
ಭಾನುವಾರದಂದು ಬರುವ ಹಬ್ಬಗಳು
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಮಹಾ ಶಿವರಾತ್ರಿ (15.02.2026), ಮಹರ್ಷಿ ವಾಲ್ಮೀಕಿ ಜಯಂತಿ (25.10.2026), ಕನ್ನಡ ರಾಜ್ಯೋತ್ಸವ (01.11.2026) ಹಾಗೂ ನರಕ ಚತುರ್ದಶಿ (08.11.2026) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (10.10.2026) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
ಇದನ್ನೂ ಓದಿ: ಕಸ ಗುಡಿಸುವ ಯಂತ್ರಕ್ಕೆ ಕೋಟಿ ಕೋಟಿ ಬಾಡಿಗೆ: ರಾಜ್ಯ ಸರ್ಕಾರದಿಂದ ವಿವಾದಿತ ನಿರ್ಧಾರ
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬರದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
ದಿನಾಂಕ:03.09.2026 (ಗುರುವಾರ) ಕ್ರೈಲ್ ಮೂಹೂರ್ತ, ದಿನಾಂಕ:18.10.2026 (ಭಾನುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಗೆಲುವು, ತಮಿಳುನಾಡಿನ ಅರ್ಜಿ ವಜಾ
ಇನ್ನು ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:08 pm, Thu, 13 November 25




