ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಶುಭ ಸುದ್ದಿ: ಹೊಸ ರೇಷನ್ ಕಾರ್ಡ್​​​ಗೆ ಅರ್ಜಿ ಸಲ್ಲಿಸಲು ಅವಕಾಶ

ಒಂದು ವರ್ಷದ ಬಳಿಕ ಆಹಾರ ಇಲಾಖೆ ಹೊಸ ಬಿಪಿಎಲ್ ಕಾರ್ಡ್​​​ಗಳಿಗೆ ಅರ್ಜಿ ಸಲ್ಲಿಸಲು ಒಪ್ಪಿಗೆ ನೀಡಿದೆ. ಹೀಗಾಗಿ ಬಿಪಿಎಲ್ ಕಾರ್ಡ್​​​ಗಳಿಗೆ ಅರ್ಜಿಸಲ್ಲಿಸಲು ಜನ ಮುಗಿಬೀಳುತ್ತಿದ್ದಾರೆ. ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು? ಎಷ್ಟು ಗಂಟೆಯಿಂದ ಎಷ್ಟು ಗಂಟೆಯ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ? ಇತ್ಯಾದಿ ವಿವರ ಇಲ್ಲಿದೆ.

ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಶುಭ ಸುದ್ದಿ: ಹೊಸ ರೇಷನ್ ಕಾರ್ಡ್​​​ಗೆ ಅರ್ಜಿ ಸಲ್ಲಿಸಲು ಅವಕಾಶ
ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಶುಭ ಸುದ್ದಿ: ಹೊಸ ರೇಷನ್ ಕಾರ್ಡ್​​​ಗೆ ಅರ್ಜಿ ಸಲ್ಲಿಸಲು ಅವಕಾಶ
Follow us
Poornima Agali Nagaraj
| Updated By: Ganapathi Sharma

Updated on: Jul 11, 2024 | 8:26 AM

ಬೆಂಗಳೂರು, ಜುಲೈ 11: ಒಂದು ವರ್ಷದ ಬಳಿಕ ಆಹಾರ ಇಲಾಖೆ ಬಿಪಿಎಲ್ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಹೊಸ ಬಿಪಿಎಲ್ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಸಲು ಆಹಾರ ನಾಗರೀಕ ಸರಬರಾಜು ಇಲಾಖೆ ಅನುಮತಿ ನೀಡಿದೆ. ಸದ್ಯ ಆಹಾರ ನಾಗಾರೀಕ ವೆಬ್​ಸೈಟ್ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್​​ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ರೇಷನ್ ಕಾರ್ಡ್​​ಗಳ ತಿದ್ದುಪಡಿಗೂ ಇದೆ ಅವಕಾಶ

ಇನ್ನು ಬಿಪಿಎಲ್, ಎಪಿಎಲ್, ತುರ್ತು ಆರೋಗ್ಯ ಸಂಬಂಧ ಬಿಪಿಎಲ್ ಕಾರ್ಡ್ ಅರ್ಜಿಗೆ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಅರ್ಜಿ ಸಲ್ಲಿಕೆ ಅವಕಾಶ ನೀಡಿದೆ. ಇದರ ಜೊತೆಗೆ ರೇಷನ್ ಕಾರ್ಡ್​​ಗಳ ತಿದ್ದುಪಡಿಗೂ ಅವಕಾಶ ನೀಡಿದ್ದು‌, ಬೆಂಗಳೂರು ಒನ್ ಸೆಂಟರ್​​ಗಳಿಗೆ ಫಾಲನುಭವಿಗಳು ಆಗಮಿಸುತ್ತಿದ್ದಾರೆ.

ಒಪನ್ ಆಗದ ವೆಬ್​​ಸೈಟ್

ಒಂದು ವರ್ಷದ ಬಳಿಕ ರೆಷಾನ್ ಕಾರ್ಡ್​​ಗಳಿಗೆ ಅರ್ಜಿ ಸಲ್ಲಿಸಲು ಅನುಮತಿ ಕೊಟ್ಟಿರುವ ಕಾರಣ ಫಲಾನುಭವಿಗಳು ಬೆಂಗಳೂರು ಒನ್ ಸೆಂಟರ್​​ಗಳಿಗೆ ಧಾವಿಸುತ್ತಿದ್ದಾರೆ. ಆದರೆ ವೆಬ್​ಸೈಟ್ ಒಪನ್ ಆಗುತ್ತಿದ್ದು, ಅರ್ಜಿ‌ ಮಾತ್ರ ರವಾನೆಯಾಗುತ್ತಿಲ್ಲ.‌ ಹೀಗಾಗಿ ಆಹಾರ ನಾಗಾರೀಕ ಸರಬರಾಜು ಇಲಾಖೆಯ ವಿರುದ್ದ ಫಾಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕದಾದ್ಯಂತ ಬೆಳ್ಳಂಬೆಳಗ್ಗೆಯೇ 56 ಕಡೆ ಲೋಕಾಯುಕ್ತ ದಾಳಿ

ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದೇವೆ ಎಂದು ಹೇಳಿ ಜನರನ್ನ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಏನಯ ಮಾಡುತ್ತಿದ್ದಾರೆ. ಪರ್ಮಿಷನ್ ಕೊಟ್ಟಿದ್ದಾರೆ ಅಂತ ಎಸಿ ರೋಮ್‌ನಲ್ಲಿ ಸುಮ್ಮನೆ ಕುಳಿತುಕೊಂಡರೆ ಇಲ್ಲಿನ ಸಮಸ್ಯಗಳನ್ನು ಬಗೆಹರಿಸುವುದು ಯಾರು? ತಿದ್ದಪಡಿಗೆ ಒಂದು ವಾರ ಅಲೆದಿದ್ದೇವೆ. ಇದೀಗ ಅರ್ಜಿ ಸಲ್ಲಿಸಲು ಅಲೆದಾಡುವ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಮ್ಮ ಸಮಸ್ಯೆಗಳನ್ನು ಯಾರು ಆಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ಮಜಾ ಟಾಕೀಸ್​: ಉಗ್ರಂ ಮಂಜು ಇಂಗ್ಲಿಷ್ ಕೇಳಿ ಬಿದ್ದು ಬಿದ್ದು ನಕ್ಕ ಗೌತಮಿ
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸತೀಶ್ ಜಾರಕಿಹೊಳಿಯದ್ದೇ ಫುಲ್ ಹವಾ..!
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ರಾಜ್ಯಾಧ್ಯಕ್ಷ ರೇಸ್​ನಲ್ಲಿ ಸೋಮಣ್ಣ ಇದ್ದಾರಾ? ಸಿದ್ದೇಶ್ವರ್ ಏನಂದ್ರು ನೋಡಿ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಬಿಗ್ ಬಾಸ್​ನಿಂದ 50 ಲಕ್ಷ ಇನ್ನೂ ಬಂದಿಲ್ಲ: ವೇದಿಕೆಯಲ್ಲೇ ಹೇಳಿದ ಹನುಮಂತ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಗುಡ್ಡದ ತುತ್ತ ತುದಿಯಲ್ಲಿ ಕಾಡ್ಗಿಚ್ಚು: ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
ಜಮ್ಮು-ಕಾಶ್ಮೀರದ ಸೋನಾಮಾರ್ಗ್​ ಮಾರುಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Weekly Horoscope: ಫೆಬ್ರವರಿ 10 ರಿಂದ 16ರವರೆಗಿನ ವಾರ ಭವಿಷ್ಯ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Devotional: ಗುರು ನೇರ ಸಂಚಾರ ಈ ರಾಶಿಯವರಿಗೆ ಅದೃಷ್ಟ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
Daily Horoscope: ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಕಲಹ ಸಾಧ್ಯತೆ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ
ಸೆಲೆಬ್ರಿಟಿ ಕ್ರಿಕೆಟ್ ಲೀಗ್: ಕಿಚ್ಚ ಸುದೀಪ್ ನಾಯಕತ್ವದ ಪಡೆ ಹೇಗಿದೆ ನೋಡಿ