ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋಪಾಲ್ ಜೋಶಿಗೆ ಬಿಗ್​ ರಿಲೀಫ್

ಗೋಪಾಲ್ ಜೋಶಿ ಅವರನ್ನು ಲೋಕಸಭಾ ಟಿಕೆಟ್‌ಗಾಗಿ ಹಣ ಪಡೆದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದರೆ, ಹೈಕೋರ್ಟ್‌ನ ಏಕಸದಸ್ಯ ಪೀಠವು ಎಫ್‌ಐಆರ್ ಮತ್ತು ನಂತರದ ಕ್ರಮಗಳಿಗೆ ತಡೆಯಾಜ್ಞೆ ನೀಡಿದೆ. ಹಣಕಾಸಿನ ವಿವಾದಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದರಿಂದ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋಪಾಲ್ ಜೋಶಿಗೆ ಬಿಗ್​ ರಿಲೀಫ್
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋಪಾಲ್ ಜೋಶಿಗೆ ಬಿಗ್​ ರಿಲೀಫ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 28, 2024 | 5:58 PM

ಬೆಂಗಳೂರು, ಅಕ್ಟೋಬರ್​ 28: ಲೋಕಸಭಾ ಟಿಕೆಟ್ ಕೊಡಿಸಲು ಹಣ ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಗೋಪಾಲ್ ಜೋಶಿಗೆ (Gopal Joshi) ಎಫ್ಐಆರ್ ಹಾಗೂ ನಂತರದ ಕ್ರಮಗಳಿಗೆ ಹೈಕೋರ್ಟ್ ಏಕಸದಸ್ಯ ಪೀಠದಿಂದ ತಡೆಯಾಜ್ಞೆ ನೀಡಿದೆ. ಹಣದ ವಿವಾದವೆಂಬ ಕಾರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ.

ಗೋಪಾಲ ಜೋಶಿ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿದ್ದು, ಹಣವನ್ನು ಹಿಂದಿರುಗಿಸಲು ಅರ್ಜಿದಾರರು ಒಪ್ಪಿದ್ದರು. ಹಣಕಾಸಿನ ವ್ಯವಹಾರಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಗೋಪಾಲ ಜೋಶಿಗೆ ಹೈಕೋರ್ಟ್​​ನಿಂದ ಮಧ್ಯಂತರ ರಿಲೀಫ್ ನೀಡಲಾಗಿದೆ.

ಇದನ್ನೂ ಓದಿ: ವಂಚನೆ ಪ್ರಕರಣದಲ್ಲಿ ಪ್ರಲ್ಹಾದ್ ಜೋಶಿ ಪಾತ್ರ ಏನೂ ಇಲ್ಲ: ದೂರುದಾರೆ ಸುನೀತಾ ಚೌಹಾಣ್ ಸ್ಪಷ್ಟನೆ

ಗೋಪಾಲ್ ಜೋಶಿ ವಿರುದ್ದ ಸುನೀತಾ ಚವ್ಹಾಣ್​ ಎನ್ನುವವರು ದೂರು ನೀಡಿದ್ದರು. ಹೀಗಾಗಿ ಅವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಲೋಕಸಭಾ ಟಿಕೆಟ್ ಕೊಡಿಸುತ್ತೇನೆ ಎಂದು ಗೋಪಾಲ್​ ಜೋಶಿ 2 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದು, 25 ಲಕ್ಷ ರೂ. ಪಡೆದಿದ್ದರು. ಆದರೆ ಯಾವಾಗ ಟಿಕೆಟ್ ಸಿಗದಿದ್ದಾಗ ನಾವು ಕೊಟ್ಟ ಹಣ ವಾಪಸ್ ಕೇಳಿದ್ದು, ನೀಡಿರಲಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ದೂರು ನೀಡಿದ್ದೇವು ಎಂದು ಸುನೀತಾ ಚವ್ಹಾಣ್​ ಹೇಳಿದ್ದರು.

ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರು ಪಾತ್ರ ಏನೂ ಇಲ್ಲ. ಇದರಲ್ಲಿ ಹೈಕಮಾಂಡ್ ಹೆಸರನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೂಡ ಅವರು ಹೇಳಿದ್ದರು.

ಎಸಿಪಿ ಚಂದನ್ ನೇತೃತ್ವದಲ್ಲಿ ಬೆಂಗಳೂರಿನಿಂದ ಆಗಮಿಸಿದ ತಂಡ ಹುಬ್ಬಳ್ಳಿಯ ಇಂದಿರಾ ಕಾಲೋನಿಯಲ್ಲಿನ ಗೋಪಾಲ ಜೋಶಿ ಮನೆಗೆ ಸುನೀತಾ ಚವ್ಹಾಣ್​ರನ್ನು ಕರೆತಂದಿದ್ದರು. ಅಶೋಕನಗರ ಪೊಲೀಸರ ತಂಡ ಮನೆಯಲ್ಲಿ ಪಂಚನಾಮೆ ಮಾಡಿದ್ದರು.

ಇದನ್ನೂ ಓದಿ: ಹಳೇ ಹುಬ್ಬಳ್ಳಿ ಕೇಸ್​ ಹಿಂಪಡೆದಿದ್ದಕ್ಕೆ ಜೋಶಿ ವಾಗ್ದಾಳಿ: ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಬಿಜೆಪಿ

ಬಳಿಕ ಅವರನ್ನು ಸುನೀತಾ ಚವ್ಹಾಣ್​ರನ್ನು ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಿದ್ದರು. ಈ ವೇಳೆ ನಾನು ಯಾವದೇ ಮಾಹಿತಿ ನೀಡಲ್ಲ. ಪ್ರಕರಣ ತನಿಖೆ ಹಂತದಲ್ಲಿದೆ ಮಾತಾಡಲ್ಲ ಎಂದು ಯಾವದೇ ಪ್ರತಿಕ್ರಿಯೆ ನೀಡದೆ ತೆರಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ವಿಶೇಷಚೇತನ ಮಹಿಳೆ ಕಂಡು ಮಾತನಾಡಿಸಿದ ಮೋದಿ
ವಿಶೇಷಚೇತನ ಮಹಿಳೆ ಕಂಡು ಮಾತನಾಡಿಸಿದ ಮೋದಿ
ಚನ್ನಪಟ್ಟಣದ ಹುಣಸನಹಳ್ಳಿಯಲ್ಲಿ ಮತಯಾಚನೆ ಮಾಡಿದ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣದ ಹುಣಸನಹಳ್ಳಿಯಲ್ಲಿ ಮತಯಾಚನೆ ಮಾಡಿದ ನಿಖಿಲ್ ಕುಮಾರಸ್ವಾಮಿ
ಅಕ್ರಮದ ದಾಖಲೆ ಬಿಡುಗಡೆ ಮಾಡಿ ಎಂದಿದ್ದಕ್ಕೆ ಸುರೇಶ್ ಹಾರಿಕೆ ಉತ್ತರ ನೀಡಿದರು
ಅಕ್ರಮದ ದಾಖಲೆ ಬಿಡುಗಡೆ ಮಾಡಿ ಎಂದಿದ್ದಕ್ಕೆ ಸುರೇಶ್ ಹಾರಿಕೆ ಉತ್ತರ ನೀಡಿದರು
ನನ್ನನ್ನು ಕೆಣಕುವ ಹೇಳಿಕೆಗಳನ್ನು ಕಾಂಗ್ರೆಸ್ ನೀಡುತ್ತಿದೆ: ಕುಮಾರಸ್ವಾಮಿ
ನನ್ನನ್ನು ಕೆಣಕುವ ಹೇಳಿಕೆಗಳನ್ನು ಕಾಂಗ್ರೆಸ್ ನೀಡುತ್ತಿದೆ: ಕುಮಾರಸ್ವಾಮಿ
ಸೂಕ್ತ ಪರಿಹಾರ ನೀಡದಿದ್ದರೆ ವಿಧಾನಸೌಧದ ಮುಂದೆ ಧರಣಿ, ರೈತನ ಎಚ್ಚರಿಕೆ
ಸೂಕ್ತ ಪರಿಹಾರ ನೀಡದಿದ್ದರೆ ವಿಧಾನಸೌಧದ ಮುಂದೆ ಧರಣಿ, ರೈತನ ಎಚ್ಚರಿಕೆ
ಹಾಸನಾಂಬ ದರ್ಶನಕ್ಕೆ ನಾಲ್ಕನೇ ದಿನವೂ ಭಕ್ತ ಸಾಗರ
ಹಾಸನಾಂಬ ದರ್ಶನಕ್ಕೆ ನಾಲ್ಕನೇ ದಿನವೂ ಭಕ್ತ ಸಾಗರ
ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್​ಡಿಎ ಗೆಲ್ಲಲಿದೆ: ಪ್ರತಾಪ್ ಸಿಂಹ
ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಎನ್​ಡಿಎ ಗೆಲ್ಲಲಿದೆ: ಪ್ರತಾಪ್ ಸಿಂಹ