ಐಟಿ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ: ಮನೆಯಲ್ಲಿದ್ದ 2 ಕೋಟಿಗೂ ಹೆಚ್ಚು ನಗದು ಜಪ್ತಿ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಮನೆಯಲ್ಲಿ ಬರೋಬ್ಬರಿ 2 ಕೋಟಿ ರೂ. ಗೂ ಹೆಚ್ಚು ನಗದು ಜಪ್ತಿ ಮಾಡಲಾಗಿದೆ. ನಿಂಗಪ್ಪ ಜಟಾದ್ ಎಂಬುವವರ ಮನೆಯಲ್ಲಿ ಮತದಾರರಿಗೆ ಹಂಚಲು 2 ಕೋಟಿ ರೂ. ಹೆಚ್ಚು ನಗದು ಸಂಗ್ರಹಿಸಲಾಗಿತ್ತು.

ಐಟಿ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ: ಮನೆಯಲ್ಲಿದ್ದ 2 ಕೋಟಿಗೂ ಹೆಚ್ಚು ನಗದು ಜಪ್ತಿ
ಮನೆಯಲ್ಲಿ ಪತ್ತೆ ಆದ ನಗದು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Apr 15, 2024 | 7:22 PM

ಹುಬ್ಬಳ್ಳಿ, ಏಪ್ರಿಲ್​ 15: ಐಟಿ ಅಧಿಕಾರಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ಹಿನ್ನೆಲೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದ ಮನೆಯಲ್ಲಿ ಬರೋಬ್ಬರಿ 2 ಕೋಟಿ ರೂ. ಗೂ ಹೆಚ್ಚು ನಗದು ಜಪ್ತಿ (seized) ಮಾಡಲಾಗಿದೆ. ನಿಂಗಪ್ಪ ಜಟಾದ್ ಎಂಬುವವರ ಮನೆಯಲ್ಲಿ ಮತದಾರರಿಗೆ ಹಂಚಲು 2 ಕೋಟಿ ರೂ. ಹೆಚ್ಚು ನಗದು ಸಂಗ್ರಹಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಚುನಾವಣಾ ನೀತಿ ಸಂಹಿತೆ ಹಾಗೂ ಅಬಕಾರಿ ನಿಯಮ‌ ಉಲ್ಲಂಘಿಸಿದ ಹಿನ್ನೆಲೆ ಲಾರಿಯಲ್ಲಿದ್ದ 16 ಲಕ್ಷ ರೂ ಮೌಲ್ಯದ 9420 ಲೀಟರ ಬಿಯರ್ ಜಪ್ತಿ ಮಾಡಲಾಗಿದೆ.

ಕೆಎಸ್​ಬಿಸಿಎಲ್​​ ಡೀಪೋದಲ್ಲಿ ಲಾರಿಯೊಂದರಲ್ಲಿ ಇದ್ದ 650/500 ಎಂಎಲ್​​ನ 1100 ಬಿಯರ್ ಬಾಕ್ಸ ವಶಕ್ಕೆ ಪಡೆಯಲಾಗಿದೆ. ಬಾಗಲಕೋಟೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ದಾಳಿ ಮಾಡಿದ್ದು, ಮದ್ಯ ಮತ್ತು ಮದ್ಯಸಾರ ಸಾಗಿಸುವ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಸದೇ ಸುತ್ತೋಲೆ ಉಲ್ಲಂಘಿಸಿರುವ ಕಾರಣ ವಾಹನ ಸಮೇತ ಮದ್ಯ ವಶಕ್ಕೆ ಪಡೆಯಲಾಗಿದೆ.

ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 34 ಲಕ್ಷ ರೂ. ಹಣ ಜಪ್ತಿ

ಕೊಪ್ಪಳ: ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ 34 ಲಕ್ಷ ರೂ. ಹಣವನ್ನು ಪೊಲೀಸರು ಮತ್ತು ತಹಶಿಲ್ದಾರ್ ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಗಂಗಾವತಿ ತಾಲೂಕಿನ ಕೆಡೆಬಾಗಿಲು ಬಳಿ ಚೆಕ್ ಪೋಸ್ಟ್​​ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, ಕಾರ್​ನಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ದಾಖಲೆ ಇಲ್ಲದ 2.93 ಕೋಟಿ ರೂ. ಪತ್ತೆ: ಎಟಿಎಂಗೆ ಹಣ ತುಂಬುವ ವಾಹನ ಜಪ್ತಿ

ಬಳ್ಳಾರಿ ಜಿಲ್ಲೆಯ ಶಿರಗುಪ್ಪಾ ತಾಲೂಕಿನ ನಡವಿಯಿಂದ ಹೊಸಪೇಟ್​ಗೆ ಪೀರಸಾಭ್ ಅನ್ನೋರು ಹಣ ಸಾಗಿಸುತ್ತಿದ್ದರು. ಹಣಕ್ಕೆ ಯಾವುದೇ ದಾಖಲಾತಿಗಳು ಇಲ್ಲದೇ ಇರೋದರಿಂದ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

5 ಕೋಟಿ 60 ಲಕ್ಷ ರೂ. ನಗದು, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣವನ್ನ ವಶಕ್ಕೆ

ಬಳ್ಳಾರಿ: ನಗರದ ಬ್ರೂಸ್​ಪೇಟೆ ಠಾಣೆ ಪೊಲೀಸರು ನಿನ್ನೆ ಭರ್ಜರಿ ಬೇಟೆ ಆಡಿದ್ದರು. ಚಿನ್ನದ ವ್ಯಾಪಾರಿ ನರೇಶ್​ ಸೋನಿ ಮನೆಯಲ್ಲಿ, ದಾಖಲೆ ಇಲ್ಲದೆ ಇಟ್ಟಿದ್ದ 5 ಕೋಟಿ 60 ಲಕ್ಷ ರೂ. ನಗದು, 3 ಕೆಜಿ ಚಿನ್ನ, 68 ಕೆಜಿ ಬೆಳ್ಳಿ ಗಟ್ಟಿ, 103 ಕೆಜಿ ಬೆಳ್ಳಿ ಆಭರಣವನ್ನ ವಶಕ್ಕೆ ಪಡೆದಿದ್ದರು. ಹಣ ಚಿನ್ನಾಭರಣದ ಮೂಲ ಕೆದಕಿದ ಪೊಲೀಸರಿಗೆ, ಇದೆಲ್ಲ ಪ್ರಭಾವಿ ರಾಜಕಾರಣಿಗೆ ಸೇರಿದ್ದು ಸಂಶಯ ಕಾಡಿದೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾರೊಂದರಿಂದ ಕೋಟ್ಯಾಂತರ ಹಣ ಜಪ್ತು, ಹಣ ಸಾಗಿಸುತ್ತಿದ್ದವರು ಪರಾರಿ

ಚುನಾವಣೆ ಬಳಕೆಗಾಗಿ ರಾಜಕಾರಣಿಯು ಹಣ ಕೊಟ್ಟಿರುವ ಶಂಕೆ ಎದ್ದಿದೆ. ಮತದಾರರಿಗೆ ಹಂಚಲು, ಹವಾಲಾ ದಂಧೆಯಲ್ಲಿ ಬಳಸಲು ಹಣವನ್ನ ಸಂಗ್ರಹಿಸಿದ್ದ ಸಂಶಯ ಮೂಡಿದ್ದು ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:14 pm, Mon, 15 April 24