AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌರಿ ಹಬ್ಬದ ದಿನದಂದೇ ಕರ್ನಾಟಕದಲ್ಲಿ ರಸ್ತೆ ಅಪಘಾತದಲ್ಲಿ 12 ಸಾವು

ಗೌರಿ ಹಬ್ಬದ ಸಂಭ್ರಮ, ಸಡಗರ ಕರ್ನಾಟಕದಲ್ಲಿ ಮನೆ ಮಾಡಿದೆ. ಆದರೆ, ಸಂಭ್ರಮ ದಿನದಂದೇ ರಾಜ್ಯದ ಹಲವು ಕಡೆ ರಸ್ತೆ ಅಪಘಾತಗಳು ಸಂಭವಿಸಿದ್ದು ಒಟ್ಟು 12 ಜನರು ಮೃತಪಟ್ಟಿದ್ದಾರೆ. ವಿಜಯಪುರ, ಬಾಗಲಕೋಟೆ, ರಾಮನಗರ, ಮಂಗಳೂರಿನಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಮೃತರ ಕುಟುಂಬಸ್ಥರ ಪಾಲಿಗೆ ಕಾರಳ ದಿನವಾಗಿದೆ.

ಗೌರಿ ಹಬ್ಬದ ದಿನದಂದೇ ಕರ್ನಾಟಕದಲ್ಲಿ ರಸ್ತೆ ಅಪಘಾತದಲ್ಲಿ 12 ಸಾವು
ರಾಮನಗರ: ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಒಂದೇ ಕುಟುಂಬದ ಐವರು ದುರ್ಮರಣ
ವಿವೇಕ ಬಿರಾದಾರ
|

Updated on:Sep 06, 2024 | 1:03 PM

Share

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ. ವಿಜಯಪುರ (Vijayapura), ಬಾಗಲಕೋಟೆ (Bagalkot), ರಾಮನಗರ (Ramnagar) ಮತ್ತು ಮಂಗಳೂರಿನಲ್ಲಿ ಅಪಘಾತಗಳು ಸಂಭವಿಸಿವೆ. ಬೈಕ್ ವ್ಹೀಲಿಂಗ್ ಹುಚ್ಚಾಟಕ್ಕೆ ನಾಲ್ವರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಗುರುವಾರ (ಸೆ.06) ತಡರಾತ್ರಿ ನಡೆದಿದೆ. ನಿಂಗರಾಜ ಚೌಧರಿ (22), ಅನೀಲ ಖೈನೂರ (23), ಉದಯಕುಮಾರ ಪ್ಯಾಟಿ (19), ರಾಯಪ್ಪ ಬಾಗೇವಾಡಿ (24) ಮೃತ ದುರ್ದೈವಿಗಳು.

ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಮತ್ತು ರಸ್ತೆ ಬದಿ ನಿಂತಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ.

ರಾಮನಗರ ಜಿಲ್ಲೆಯ ತಾಲೂಕಿನ ಮಾಯಗಾನಹಳ್ಳಿ ಗ್ರಾಮದ ಬಳಿ ಬೈಕ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುಮೂರ್ತಿ (39), ಶೇಖ್ ಆಸೀಫ್ (45), ವೆಂಕಟೇಶ್ (50)‌ ಮೃತ ದುರ್ದೈವಿಗಳು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮತ್ತೋರ್ವ ಸಾವೀಗಿಡಾಗಿದ್ದಾನೆ.

ಬಾಗಲಕೋಟೆ ನಗರದ ಹೆಲಿಪ್ಯಾಡ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬಾಗಲಕೋಟೆ ಬಿವಿವಿಯ ಶ್ರುತಿ ಒಂದಕುದರಿ (32), ಡೆಂಟಲ್ ಕಾಲೇಜ್ ಉಪನ್ಯಾಸಕಿ, ರಜನಿ ಒಂದಕುದರಿ (34), ಸಾಪ್ಟವೇರ್ ಇಂಜಿನಿಯರ್ ಅಭಿಷೇಕ್ ದೋತ್ರಿ (20) ಮೃತರು.

ಇದನ್ನೂ ಓದಿ: ದರ್ಶನ ಪರ ಬರಹ ಇದ್ದ ಲಾರಿ ಬೈಕ್​ಗೆ ಡಿಕ್ಕಿ, ಮೂವರು ಸಾವು

ಸ್ಕೂಟಿಯಲ್ಲಿದ್ದ ಮಹಿಳೆಯರು ಡಿವೈಡರ್ ಕ್ರಾಸ್​ ಮಾಡಿ ಅಡ್ಡ ಬಂದು ವೇಗವಾಗಿ ಹೊರಟಿದ್ದ ಯಮಹಾ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ರಭಸಕ್ಕೆ ಬೈಕ್​​ಗಳು ಪೀಸ್​ ಪೀಸ್​ ಆಗಿವೆ. ಸ್ಥಳಕ್ಕೆ ಬಾಗಲಕೋಟೆ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಯೆಯ್ಯಾಡಿ ಎಂಬಲ್ಲಿ ನಿಯಂತ್ರಣ ತಪ್ಪಿ ಬೈಕ್​ ಮೇಲಿನ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಉಪ್ಪಿನಂಗಡಿಯ ಚೇತನ್ (24), ಕೋಡಿಕಲ್​​ನ ಕಾಶಿನಾಥ್ (17) ಮೃತರು. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:58 pm, Fri, 6 September 24