ಅಕ್ಟೋಬರ್ ಮೊದಲ ವಾರ ಕರ್ನಾಟಕದಲ್ಲಿ ವ್ಯಾಪಕ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನವೇ ಮಳೆ ಆರಂಭವಾಗಿತ್ತು. ತುಂತುರು ಮಳೆಗೆ ವಾಹನ ಸವಾರರು ಪರದಾಡಿದ್ದರು. ಇನ್ನು ಈ ಮಧ್ಯೆ ಅಕ್ಟೋಬರ್ 9ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದಿನಿಂದ ಅ.7ರವರೆಗೆ ಬೆಂಗಳೂರಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ.
ಬೆಂಗಳೂರು, ಅಕ್ಟೋಬರ್ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಮಳೆ (Rain) ಆಗುತ್ತಿದೆ. ಇಂದು ಮಧ್ಯಾಹ್ನ ಆಗುತ್ತಿದ್ದಂತೆ ಸಿಟಿ ಮಂದಿಗೆ ವರುಣನ ದರ್ಶನವಾಗಿತ್ತು. ಅಕ್ಟೋಬರ್ ಮೊದಲ ವಾರದಲ್ಲೇ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದ್ದು, ಅಕ್ಟೋಬರ್ 9ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ಬಗ್ಗೆ ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದು, ಇಂದಿನಿಂದ ಅ.7ರವರೆಗೆ ಬೆಂಗಳೂರಲ್ಲಿ ಸಾಧಾರಣ ಮಳೆ ಇರಲಿದೆ. ಅ.4, 5ರಂದು ಬೆಂಗಳೂರು, ರಾಮನಗರ, ದಾವಣಗೆರೆ, ಮಂಡ್ಯ, ಚಿಕ್ಕಮಗಳೂರು, ಕೋಲಾರ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 9ರವರೆಗೆ ಕರಾವಳಿಯ ಕೆಲವೆಡೆ ಮಳೆ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಮಟ ಮಟ ಮಧ್ಯಾಹ್ನವೇ ಕಾಡಿದ ವರುಣರಾಯ
ಇಂದು ದಿಢೀರ್ ಎಂಟ್ರಿಕೊಟ್ಟ ಮಳೆ ತುಂತುರು ಹನಿ ಸಿಡಿಸಿ ಮರೆಯಾಗಿತ್ತು. ಆದರೆ ಸಣ್ಣ ಮಳೆಗೂ ನಗರದಲ್ಲಿನ ರಸ್ತೆಗಳು ಮಿನಿ ಕೆರೆಗಳಾಗಿ ಮಾರ್ಪಟ್ಟಿದ್ದವು. ಕೆ.ಆರ್.ಸರ್ಕಲ್ನ ರಸ್ತೆಯಲ್ಲಿ ಮಳೆ ನೀರು ಹೊಳೆಯಂತೆ ಹರೆದಿದೆ.
ಹವಾಮಾನ ಇಲಾಖೆ ಟ್ವೀಟ್
Rainfall Warning : 06th October to 09th October 2024 वर्षा की चेतावनी : 06th अक्टूबर से 09th अक्टूबर 2024#rainfallwarning #IMDWeatherUpdate #stayalert #staysafe #assam #meghalaya #nagaland #manipur #mizoram #tripra #kerala #Tamilnadu #arunachalpradesh #Kerala #WestBengal… pic.twitter.com/oB74BT0JxP
— India Meteorological Department (@Indiametdept) October 3, 2024
ಹೆಬ್ಬಾಳದಲ್ಲೂ ರಸ್ತೆಯಲ್ಲಿ ನೀರು ನಿಂತು ಸವಾರರು ಪರದಾಡಿದ್ದಾರೆ. ಕೆ.ಆರ್.ಮಾರ್ಕೆಟ್, ಜಯನಗರ, ಶಾಂತಿನಗರ, ಮತ್ತಿಕೆರೆ, ಹಲಸೂರು, ಕೆ.ಆರ್.ಪುರಂ ಸುತ್ತಮುತ್ತ ಮಳೆಯ ಸಿಂಚನವಾಗಿದೆ.
ಇದನ್ನೂ ಓದಿ: Bengaluru Rians: ಬೆಂಗಳೂರಿನಲ್ಲಿ ಮಟ ಮಟ ಮಧ್ಯಾಹ್ನವೇ ಮಳೆ ಶುರು
ಬೆಂಗಳೂರಿನ ಶೆಟ್ಟಿಹಳ್ಳಿ ಶ್ರೀದೇವಿ ಬಡಾವಣೆಯಲ್ಲಿ 15ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮನೆಗಳಲ್ಲಿ ನೀರು, ಕೆಸರು ತುಂಬಿದ್ದು, ಮನೆಗಳನ್ನು ಸ್ವಚ್ಛಗೊಳಿಸಲು ಮನೆ ಮಾಲೀಕರ ಹರಸಾಹಸ ಪಟ್ಟಿದ್ದಾರೆ. ಮನೆಯಲ್ಲಿರುವ ಸಂಪ್ಗಳು ಮಳೆ ನೀರಿಗೆ ಭರ್ತಿಯಾಗಿ ನಿವಾಸಿಗಳು ಗೋಳಾಡಿದ್ದಾರೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಟಿವಿ9 ಮುಖಾಂತರ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.