AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಅಪಘಾತದಲ್ಲಿ ಪ್ರತಿ ದಿನ ಸಾಯುವವರ ಸಂಖ್ಯೆ ಎಷ್ಟು? ಅಂಕಿ-ಸಂಖ್ಯೆ ನೋಡಿದ್ರೆ ದಿಗ್ಭ್ರಾಂತರಾಗುತ್ತೀರಿ!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ರಸ್ತೆ ಅಪಘಾತದಲ್ಲಿ ಪ್ರತಿದಿನ ಸಾವು, ನೋವುಗಳು ಸಂಭವಿಸುತ್ತವೆ. ಕರ್ನಾಟಕ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಬುಧವಾರ ಚರ್ಚೆ ನಡೆಯಿತು. ರಾಜ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ವಿಧಾನಪರಿಷತ್​ನಲ್ಲಿ ಸದಸ್ಯ ಕೆ.ಎಸ್.ನವೀನ್ ಪ್ರಶ್ನೆ ಕೇಳಿದರು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನೀಡಿದ್ದಾರೆ.

ಕರ್ನಾಟಕದಲ್ಲಿ ಅಪಘಾತದಲ್ಲಿ ಪ್ರತಿ ದಿನ ಸಾಯುವವರ ಸಂಖ್ಯೆ ಎಷ್ಟು? ಅಂಕಿ-ಸಂಖ್ಯೆ ನೋಡಿದ್ರೆ ದಿಗ್ಭ್ರಾಂತರಾಗುತ್ತೀರಿ!
ಕರ್ನಾಟಕ ವಿಧಾನ ಪರಿಷತ್​
ಪ್ರಸನ್ನ ಗಾಂವ್ಕರ್​
| Edited By: |

Updated on:Aug 13, 2025 | 4:24 PM

Share

ಬೆಂಗಳೂರು, ಆಗಸ್ಟ್​ 13: ರಾಜ್ಯ ಮುಂಗಾರು ಅಧಿವೇಶನದ (Monsoon Session) ಮೂರನೇ ದಿನದ ಕಲಾಪ ನಡೆಯುತ್ತಿದ್ದು, ಕರ್ನಾಟಕದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಬಗ್ಗೆ ಚರ್ಚೆ ನಡೆಯಿತು. ಬುಧವಾರ (ಆ.13) ವಿಧಾನ ಪರಿಷತ್​ನಲ್ಲಿ (Karnataka Legislative Council) ರಸ್ತೆ ಅಪಘಾತ ಬಗ್ಗೆ ಸದಸ್ಯರುಗಳು ಪ್ರಶ್ನೆಗಳನ್ನು ಕೇಳಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನೀಡಿದ್ದಾರೆ.

ರಾಜ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳ ಬಗ್ಗೆ ವಿಧಾನಪರಿಷತ್​ನಲ್ಲಿ ಸದಸ್ಯ ಕೆ.ಎಸ್.ನವೀನ್ ಪ್ರಶ್ನೆ ಕೇಳಿದರು. “ರಸ್ತೆ ಅಪಘಾತಗಳ ಬಗ್ಗೆ ಸರ್ಕಾರಿ ದಾಖಲೆ ನೋಡಿ ದಿಗ್ಭ್ರಾಂತನಾಗಿದ್ದೇನೆ. ರಾಜ್ಯದಲ್ಲಿ 2020ರಿಂದ ಈವರೆಗೆ 2,13,192 ಅಪಘಾತಗಳು ಸಂಭವಿಸಿವೆ. 2020ರಿಂದ ಈವರೆಗೆ ರಸ್ತೆ ಅಪಘಾತದಲ್ಲಿ 60,115 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಆಗಬೇಕು. ರಸ್ತೆ ಅಪಘಾತದಲ್ಲಿ ಪ್ರತಿ ದಿನ 40 ಜನರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ” ಎಂದು ಪರಿಷತ್​​ಗೆ ತಿಳಿಸಿದರು.

ಸದಸ್ಯ ಕೆ.ಎಸ್.ನವೀನ್ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿದರು. ” ಎಷ್ಟೇ ಬಿಗಿ ಕಾನೂನು ಕ್ರಮಗಳನ್ನು ಕೈಗೊಂಡರೂ ಅಪಘಾತ ಕಡಿಮೆ ಆಗುತ್ತಿಲ್ಲ. ಪ್ರತಿ ವರ್ಷ ಅಂದಾಜು 10,000 ಜನರು ಅಪಘಾತದಲ್ಲಿ ಸಾಯುತ್ತಿದ್ದಾರೆ. ಬ್ಲ್ಯಾಕ್ ಸ್ಪಾಟ್​ಗಳ ಬಗ್ಗೆ ವರ್ಷ ಪೂರ್ತಿ ಜಾಗೃತಿ ಮೂಡಿಸಲಾಗುತ್ತಿದೆ. ಱಷ್​ ಡ್ರೈವಿಂಗ್​ನಿಂದಲೇ ಹೆಚ್ಚು ಪ್ರಮಾಣದ ಸಾವು ಸಂಭವಿಸುತ್ತಿವೆ. ಅಪಘಾತದಲ್ಲಿ ಮೃತಪಡುತ್ತಿರುವವರಲ್ಲಿ ಯುವಕರೇ ಹೆಚ್ಚಿನವರಾಗಿದ್ದಾರೆ. ಇದುವರೆಗೆ 80,43,253 ಜನರಿಗೆ ದ್ವಿಚಕ್ರ ವಾಹನಗಳ ಲೈಸೆನ್ಸ್ ನೀಡಲಾಗಿದೆ. 1,17,34,448 ಜನರಿಗೆ ನಾಲ್ಕು ಚಕ್ರದ ವಾಹನಗಳಿಗೆ ಲೈಸೆನ್ಸ್ ನೀಡಲಾಗಿದೆ. 7,14,380 ಜನರು ಭಾರಿ ವಾಹನಗಳ ಲೈಸೆನ್ಸ್ ಪಡೆದಿದ್ದಾರೆ. 2,57,321 ಜನರು ಟ್ರ್ಯಾಕ್ಟರ್ ಲೈಸೆನ್ಸ್ ಪಡೆದಿದ್ದಾರೆ” ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶವು ದೇಶದ ನಂಬರ್ 1 ಅಪಘಾತದ ಹಾಟ್​ಸ್ಪಾಟ್​

ಅಥವಾ ಜೈಲು ಶಿಕ್ಷೆ ಆಗುವಂತೆ ಮಾಡಿ. ಶೇ 38 ರಷ್ಟು ಸಾವುಗಳು ಸೀಟ್ ಬೆಲ್ಟ್ ಧರಿಸದೇ ಇರುವುದರಿಂದ ಆಗುತ್ತಿದೆ. ಬರೀ ಟ್ಯಾಕ್ಸ್ ಸಂಗ್ರಹ ಮಾಡುವುದರಿಂದ ರಾಜ್ಯ ಅಭಿವೃದ್ಧಿ ಆಗುವುದಿಲ್ಲ” ಎಂದು ಸಲಹೆ ನೀಡಿದರು.

ಜೆಡಿಎಸ್ ಸದಸ್ಯ ಎಸ್​​.ಎಲ್​.ಭೋಜೇಗೌಡ: ಎಷ್ಟು ಜನ ರಾಜಕಾರಣಿಗಳು ಕಾರಿನಲ್ಲಿ ಮುಂದೆ ಕೂತಾಗ ಸೀಟ್ ಬೆಲ್ಟ್ ಹಾಕುತ್ತಾರಾ? ಬೆಂಗಳೂರು ಅಪಘಾತದ ಸಾವಿನಲ್ಲಿ ಇಡೀ ದೇಶಕ್ಕೆ ನಂಬರ್ ಒನ್ ಆಗಿದೆ” ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Wed, 13 August 25