AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಂಟರ್ ಹಿಂದಿಕ್ಕಲು ಹೋಗಿ ಡಿವೈಡರ್‌ ಹಾರಿದ ಬಸ್

ಖಾಸಗಿ ಬಸ್‌ವೊಂದು ಕ್ಯಾಂಟರ್ ಹಿಂದಿಕ್ಕಲು ಹೋಗಿ ನಿಯಂತ್ರಣ ತಪ್ಪಿ ಡಿವೈಡರ್ ಹಾರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮ ಬೊಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರೊಚ್ಚಿಗೆದ್ದ ಪ್ರಯಾಣಿಕರು ಬಸ್ಸಿಗೆ ಕಲ್ಲು ತೂರಿದ್ದಾರೆ. ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ ಕೊಪ್ಪಳ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಇಂದು 6 […]

ಕ್ಯಾಂಟರ್ ಹಿಂದಿಕ್ಕಲು ಹೋಗಿ ಡಿವೈಡರ್‌ ಹಾರಿದ ಬಸ್
ಸಾಧು ಶ್ರೀನಾಥ್​
|

Updated on: Dec 19, 2019 | 8:09 AM

Share

ಖಾಸಗಿ ಬಸ್‌ವೊಂದು ಕ್ಯಾಂಟರ್ ಹಿಂದಿಕ್ಕಲು ಹೋಗಿ ನಿಯಂತ್ರಣ ತಪ್ಪಿ ಡಿವೈಡರ್ ಹಾರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮ ಬೊಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಸ್ಸಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರೊಚ್ಚಿಗೆದ್ದ ಪ್ರಯಾಣಿಕರು ಬಸ್ಸಿಗೆ ಕಲ್ಲು ತೂರಿದ್ದಾರೆ.

ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಹಿನ್ನೆಲೆ ಕೊಪ್ಪಳ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಇಂದು 6 ರಿಂದ ನಾಳೆ ಸಂಜೆ 6 ಗಂಟೆವರೆಗೂ ನಿಷೇಧಾಜ್ನೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ನಿರ್ಲಕ್ಷ್ಯದಿಂದ ಟೈರ್ ಬ್ಲಾಸ್ಟ್‌ : ಕೆಎಸ್‌ಆರ್‌ಟಿಸಿ ಬಸ್ ಟೈರ್ ಬ್ಲಾಸ್ಟ್ ಆಗಿ ಮರಕ್ಕೆ ಬಸ್ ಡಿಕ್ಕಿ ಹೊಡೆದ 20ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಶಿವಮೊಗ್ಗದ ರಾ.ಹೆ 207 ರ ಹರಿಗೆ ಸಮೀಪ ನಡೆದಿದೆ. ಆರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಟ್ರೈರ್ ಡ್ಯಾಮೆಜ್‌ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ರೂ, ತಲೆಕೆಡಿಸಿಕೊಂಡಿರಲ್ವಿವಂತೆ.

ವಿಷದ ಬಾಟಲಿ ಹಿಡಿದ ಪ್ರೋಟೆಸ್ಟ್: ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಕುಟುಂಬವೊಂದು ವಿಷದ ಬಾಟಲಿ ಹಿಡಿದು ನ್ಯಾಯಕ್ಕಾಗಿ ಮೌನ ಪ್ರತಿಭಟನೆ ನಡೆಸಿದೆ. ಕೆಲ್ಲೋಡು ಗ್ರಾಮದ ಬಳಿ ವೇದಾವತಿ ನದಿ ಪಾತ್ರದಲ್ಲಿರುವ ಚಿಕ್ಕಣ್ಣ ಎಂಬುವರ ಜಮೀನಿಗೆ ನೀರು ನುಗ್ಗಿದ ಪರಿಣಾಮ2ಎಕರೆಯಲ್ಲಿನ ಬೆಳೆ ನಾಶವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದೆ.

ಹಾಳು ಬಿದ್ದ ಬೀಜೋತ್ಪಾದನೆ ಕೇಂದ್ರ: ಯಾದಗಿರಿ ಜಿಲ್ಲೆಯ ಬೀಜೋತ್ಪಾದನ ಕೇಂದ್ರ ಅಜ್ಞಾತ ಸ್ಥಳದಲ್ಲಿದ್ದು , ಸರ್ಕಾರ ಕೋಟಿ ಕೋಟಿ ಹಣ ಬಿಡುಗಡೆ ಮಾಡಿದ್ರೂ ರೈತರಿಗೆ ಪ್ರಯೋಜವಾಗುತ್ತಿಲ್ಲ. ವಿಚಾರ ತಿಳದ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಬೀಜೋತ್ಪಾದನ ಕೇಂದ್ರಕ್ಕೆ ಧಿಡೀರ್‌ ಭೇಟಿ ನೀಡಿ ಅಧಿಕಾರಿಗನ್ನ ತರಾಟೆಗೆ ತೆಗೆದುಕೊಂಡ್ರು.

ಸಂತ್ರಸ್ತರಿಗೆ ಪರಿಹಾರ ಯಾವಾಗ? ಎತ್ತಿನಹೊಳೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಹಾಸನ ಜಿಲ್ಲೆಯ ಸಂತ್ರಸ್ತರು ಪರಿಹಾರ ಸಿಗದೆ ಕಂಗಾಲಾಗಿದ್ದಾರೆ. ಹಾಸನದಲ್ಲಿ ನಡೆದ ಜಿಲ್ಲಾ ಮಟ್ಟದ ಪುನರ್ವಸತಿ ಮತ್ತು ಪುನರ್ನಿರ್ಮಾಣ ಸಮಿತಿ ಸಭೆಯಲ್ಲಿ ಶಾಸಕರು ಸಂಸದರ ಸಮ್ಮುಖದಲ್ಲೇ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿ, ಪರಿಹಾರಕ್ಕೆ ಆಗ್ರಹಿಸಿದ್ರು.

ಕಾಮಗಾರಿ ತಡೆದು ಮೀನುಗಾರರ ಆಕ್ರೋಶ: ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಲೆತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದನ್ನ ಮೀನುಗಾರರು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮೀನುಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಸಾಗರಮಾಲಾ ಯೋಜನೆಯಡಿ 125 ಕೋಟಿಯಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದ್ದು, ಮೀನುಗಾರರು ವಿರೋಧ ವಿದೆ.

ಚಿರತೆ ಕಾಟಕ್ಕೆ ಜನ ಕಂಗಾಲ್: ಮೈಸೂರಿನ ಹೂಟಗಳ್ಳಿಯಲ್ಲಿರುವ ಬಿಇಎಂಎಲ್ ಆವರಣದಲ್ಲಿ ಪದೇ ಪದೇ ಚಿರತೆಗಳು ಪ್ರತ್ಯಕ್ಷಪಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿವೆ. ಈಗಾಗ್ಲೇ ಹಲವು ಚಿರತೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದ್ದು, ಈಗ ಮತ್ತೆ ಒಟ್ಟಿಗೆ ಎರಡು ಚಿರತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಆದಷ್ಟು ಬೇಗ ಚಿರತೆ ಸೆರೆ ಹಿಡಿಯವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಸ ಹಾಕುವ ಜಾಗದಲ್ಲಿ ರಂಗೋಲಿ: ಕೊಪ್ಪಳ ನಗರವನ್ನ ಕಸ ಮುಕ್ತ ಮಾಡಲು ವಿದ್ಯಾರ್ಥಿಗಳು ಟೊಂಕ ಕಟ್ಟಿ ನಿಂತಿದ್ದಾರೆ.ವಿದ್ಯಾರ್ಥಿಗಳ ನಗರದ 30 ವಾರ್ಡ್ ಗಳಲ್ಲಿ ಕಸ ಹಾಕೋ ಜಾಗವನ್ನ ಕ್ಲೀನ್ ಮಾಡಿ ರಂಗೋಲಿ ಬಿಡಿಸುತ್ತಿದ್ದಾರೆ. ನಗರದ ರೇಲ್ವೆ ನಿಲ್ದಾಣ ಹಾಗೂ ಅಂಬೇಡ್ಕರ್ ಸರ್ಕಲ್ ಬಳಿ ಮಕ್ಕಳ ಸಹಾಯದೊಂದಿಗೆ ಕಸ ಹಾಕೋ ಜಾಗವನ್ನ ಕ್ಲೀನ್ ಮಾಡಿ ರಂಗೋಲಿ ಬಿಡಿಸುದ್ರು.

ಅವರೇ ಬೇಳೆ ಖಾದ್ಯಗಳ ಮೇಳ: ಚಿಕ್ಕಬಳ್ಳಾಪುರ ನಗರದ ವಾಸವಿ ಮಹಿಳಾ ಮಂಡಳಿ ವತಿಯಿಂದ ವಾಸವಿ ಕಲ್ಯಾಣ ಮಂಟಪದಲ್ಲಿ ಅವರೇಬೇಳೆ ಖಾದ್ಯಗಳ ಮೇಳ ನಡೆಸಲಾಯ್ತು. ಮೇಳದಲ್ಲಿ 40 ಕ್ಕೂ ಹೆಚ್ಚು ಅವರೇ ಬೇಳೆ ಖಾದ್ಯಗಳು ಗ್ರಹಕರ ಗಮನ ಸಳೆದ್ವು. ವಿವಿಧ ಬಗೆಯ ಖಾದ್ಯಗಳನ್ನ ಟೇಸ್ಟ್ ಮಾಡಿ ಗ್ರಾಹಕರು ಪುಲ್ ಎಂಜಾಯ್ ಮಾಡಿದ್ರು.