ದೇವರ ಹೆಸರಲ್ಲಿ ದೇವರಿಗೆ ಮಕ್ಮಲ್ ಟೋಪಿ, ಚೆಕ್ ನಕಲು ಮಾಡಿ ಲಕ್ಷ ಲಕ್ಷ ಲೂಟಿ

ಚಿಕ್ಕಬಳ್ಳಾಪುರ: ಅದೇನ್ ಕಲಿಯುಗವೋ.. ಅದೆಂತಾ ಕಾಲ ಬಂತೋ.. ದೇವರಿದ್ದಾನೆ ಅಂತ ಭಕ್ತರು ಅದೆಷ್ಟು ನಂಬ್ತಿದ್ದಾರೋ, ದೇವರಿಗೇ ಕನ್ನ ಹಾಕೋರು ಹುಟ್ಟಿಕೊಳ್ತಿದ್ದಾರೆ.. ಹಣದಾಹಕ್ಕಿಳಿದಿರೋ ಕ್ರಿಮಿಗಳು ಭಗವಂತನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.. ಆಡಳಿತಾಧಿಕಾರಿ, ಸಿಬ್ಬಂದಿ ಮಾಡಿದ್ರು ಭಗವಂತನ ಹಣ ಲೂಟಿ! ಯೆಸ್.. ದೇವರು ಎಲ್ಲೆಡೆ ಇದ್ದಾನೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ಹರಕೆ.. ಕಾಣಿಕೆ ಸೇರಿ ನಾನಾ ರೀತಿಯ ಸೇವೆ ಮಾಡ್ತಾರೆ. ಆದ್ರೆ, ಇಲ್ಲಾಗಿರೋದು ಬೇಲಿಯೇ ಎದ್ದು ಹೊಲ ಮೆಯ್ದ ಕಥೆ. ಅಂದಹಾಗೆ ಇದು ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿರೋ […]

ದೇವರ ಹೆಸರಲ್ಲಿ ದೇವರಿಗೆ ಮಕ್ಮಲ್ ಟೋಪಿ, ಚೆಕ್ ನಕಲು ಮಾಡಿ ಲಕ್ಷ ಲಕ್ಷ ಲೂಟಿ
Follow us
ಸಾಧು ಶ್ರೀನಾಥ್​
|

Updated on:Dec 19, 2019 | 7:03 AM

ಚಿಕ್ಕಬಳ್ಳಾಪುರ: ಅದೇನ್ ಕಲಿಯುಗವೋ.. ಅದೆಂತಾ ಕಾಲ ಬಂತೋ.. ದೇವರಿದ್ದಾನೆ ಅಂತ ಭಕ್ತರು ಅದೆಷ್ಟು ನಂಬ್ತಿದ್ದಾರೋ, ದೇವರಿಗೇ ಕನ್ನ ಹಾಕೋರು ಹುಟ್ಟಿಕೊಳ್ತಿದ್ದಾರೆ.. ಹಣದಾಹಕ್ಕಿಳಿದಿರೋ ಕ್ರಿಮಿಗಳು ಭಗವಂತನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ..

ಆಡಳಿತಾಧಿಕಾರಿ, ಸಿಬ್ಬಂದಿ ಮಾಡಿದ್ರು ಭಗವಂತನ ಹಣ ಲೂಟಿ! ಯೆಸ್.. ದೇವರು ಎಲ್ಲೆಡೆ ಇದ್ದಾನೆ ಅನ್ನೋದು ಭಕ್ತರ ನಂಬಿಕೆ. ಹೀಗಾಗಿ ಹರಕೆ.. ಕಾಣಿಕೆ ಸೇರಿ ನಾನಾ ರೀತಿಯ ಸೇವೆ ಮಾಡ್ತಾರೆ. ಆದ್ರೆ, ಇಲ್ಲಾಗಿರೋದು ಬೇಲಿಯೇ ಎದ್ದು ಹೊಲ ಮೆಯ್ದ ಕಥೆ. ಅಂದಹಾಗೆ ಇದು ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿರೋ ವಿಧುರಾಶ್ವತ್ಥ ಅಮರ ನಾರಾಯಣಸ್ವಾಮಿ ದೇವಸ್ಥಾನ.

ಇಲ್ಲಿ ನಾಗರಕಲ್ಲು ಪ್ರತಿಷ್ಠಾಪಿಸೋದು ಸಿಕ್ಕಾಪಟ್ಟೆ ಫೇಮಸ್. ಅಲ್ಲದೇ ಕಾಣಿಕೆ, ಸೇವೆ ಅಂತ ಕೋಟಿ ಕೋಟಿ ಹಣ ಭಕ್ತರು ದಾನವಾಗಿ ನೀಡ್ತಾರೆ. ಆದ್ರೆ, ಈ ಹಣದ ಆಡಳಿತಾಧಿಕಾರಿ ಗುರುಪ್ರಸಾದ್, ಲೇಡಿ ಕಂಪ್ಯೂಟರ್ ಆಪರೇಟರ್ ಶೃತಿ ಹಾಗೂ ಸುರೇಶ್ ಕೆಂಗಣ್ಣು ಬೀರಿದೆ. ಈ ಮೂವರು ಸೇರ್ಕೊಂಡು ದೇಗುಲದ ಹೆಸರಲ್ಲಿದ್ದ ಬರೋಬ್ಬರಿ 68 ಲಕ್ಷ ರೂಪಾಯಿ ಲಪಟಾಯಿಸಿದ್ದಾರೆ. ದೇವರ ಹೆಸರಲ್ಲಿ ಲಕ್ಷ ಲಕ್ಷ ಹಣ ಲೂಟು ಹೊಡೆದಿದ್ದು ತಹಶೀಲ್ದಾರ್ ತನಿಖೆಯಲ್ಲಿ ಬಯಲಾಗಿದೆ.

ಇನ್ನು, ಮುಜರಾಯಿ ಇಲಾಖೆಗೆ ಸೇರಿರೋ ವಿಧುರಾಶ್ವತ್ಥ ದೇವಸ್ಥಾನದ ಹಣವನ್ನೆಲ್ಲಾ ಕರ್ನಾಟಕ ಗ್ರಾಮೀಣ ಬ್ಯಾಂಕ್​​ನಲ್ಲಿರೋ​ ಖಾತೆಗೆ ಜಮೆ ಮಾಡ್ತಾರೆ. ಅಲ್ದೇ, ನಾಗರಕಲ್ಲು ಪ್ರತಿಷ್ಠಾಪಿಸೋಕೆ ಬರೋ ಭಕ್ತರ ಅನುಕೂಲಕ್ಕೆ ತಲಾ 800 ರೂಪಾಯಿ ಖರ್ಚು ಮಾಡ್ಬೋದು. ಹೀಗೆ ಏಪ್ರಿಲ್ 1, 2019ರಿಂದ ಆಗಸ್ಟ್ 31ರವರೆಗೆ 363 ನಾಗರಕಲ್ಲು ಪ್ರತಿಷ್ಠಾಪಿಸಲಾಗಿದೆ.

ಈ ಖರ್ಚು ವೆಚ್ಚ ಅಂತ 2 ಲಕ್ಷದ 90 ಸಾವಿರದ 400 ರೂಪಾಯಿ ಆಗಿದೆ. ಆದ್ರೆ, ಈ ಮೂವರು ಸೇರ್ಕೊಂಡು 500 ರೂಪಾಯಿ ಚೆಕ್​​ಗಳನ್ನ 500 ಸಾವಿರ, 5 ಸಾವಿರ ರೂಪಾಯಿ ಚೆಕ್​​ನ್ನ 50 ಸಾವಿರ, 50 ಸಾವಿರ ರೂಪಾಯಿ ಚೆಕ್​​ನ್ನ 5 ಲಕ್ಷ ಎಂದು ತಿದ್ದಿ ಹಗಲು ದರೋಡೆ ಮಾಡಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ ದೇಗುಲದ ಆಡಳಿತ ಮಂಡಳಿಯವ್ರಿಗೆ ಗೊತ್ತೇ ಇಲ್ವಂತೆ. ಇದೀಗ ತಹಶೀಲ್ದಾರ್ ಸಾಹೇಬ್ರು ಅಕ್ರಮವನ್ನ ಬಯಲಿಗೆಳೆದಿದ್ದು ದಾಖಲೆಗಳನ್ನ ಮುಜರಾಯಿ ಇಲಾಖೆ ಆಯುಕ್ತರಿಗೆ ನೀಡಿದ್ದಾರೆ.

Published On - 7:02 am, Thu, 19 December 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ