ಕರ್ನಾಟಕ ಸಾರಿಗೆ ನಿಗಮಗಳ ನೌಕರರಿಗೆ ಪಿಎಫ್​​​ ಸಂಕಷ್ಟ! ಎರಡುವರೆ ಸಾವಿರ ಕೋಟಿ ಹಣ ಎಲ್ಲೋಯ್ತು?

ಆರ್ಥಿಕ ಸಂಕಷ್ಟ ಮತ್ತು ಡೀಸೆಲ್ ಕೊರತೆಯಿಂದ ಬಳಲುತ್ತಿದ್ದ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ 593.99 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಶಕ್ತಿ ಯೋಜನೆ , ವಿದ್ಯಾರ್ಥಿಗಳ ಬಸ್ ಪಾಸ್ ಬಾಕಿ ಹಾಗೂ ಎಚ್‌ಪಿಸಿಎಲ್ ಸಂಸ್ಥೆಯ ಇಂಧನ ಬಾಕಿ ಪಾವತಿಗೆ ಹಣ ನೀಡಲಾಗಿದೆ. ಆದ್ರೆ, ಸಾರಿಗೆ ನೌಕರರ ಪಿಎಫ್​ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹಾಗಾದ್ರೆ, ಎರಡುವರೆ ಸಾವಿರ ಕೋಟಿ.ರೂ. ಎಲ್ಲೋಯ್ತು?

ಕರ್ನಾಟಕ ಸಾರಿಗೆ ನಿಗಮಗಳ ನೌಕರರಿಗೆ ಪಿಎಫ್​​​ ಸಂಕಷ್ಟ! ಎರಡುವರೆ ಸಾವಿರ ಕೋಟಿ ಹಣ ಎಲ್ಲೋಯ್ತು?
Karnataka Transport Departmnet
Edited By:

Updated on: Oct 13, 2026 | 4:23 PM

ಬೆಂಗಳೂರು, (ಅಕ್ಟೋಬರ್ 13): ಕರ್ನಾಟಕದ ನಾಲ್ಕು ಸಾರಿಗೆ ನಿಗಮಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕೆಲ ನಿಗಮಗಳಲ್ಲಿ ಸರಿಯಾಗಿ ಡೀಸೆಲ್ ಪೂರೈಕೆಯಾಗುತ್ತಿಲ್ಲ. ಇನ್ನೊಂದೆಡೆ ಸಾರಿಗೆ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ. ಇದರ ಮಧ್ಯೆ ಸಾರಿಗೆ ನೌಕರರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಡ್ರೈವರ್, ಕಂಡಕ್ಟರ್, ಸೇರಿದಂತೆ 1 ಲಕ್ಷದ 10 ಸಾವಿರ ಸಾರಿಗೆ ನೌಕರರ ಪಿಎಫ್ ಹಣವನ್ನು ಗುಳಂ ಆಗಿರುವ ಆರೋಪ ಕೇಳಿಬಂದಿದೆ. ನಿಗಮಗಳು ತನ್ನ ಸ್ವಂತ ಖರ್ಚಿಗೆ ಡಿಸೇಲ್, ನೌಕರರ ಸಂಬಳಕ್ಕೆ ಬಳಕೆ ಮಾಡಿಕೊಂಡಿದ್ಯಂತೆ. ಇನ್ನೊಂದೆಡೆ ನೌಕರರ ಸಂಬಳದಲ್ಲಿ ಕಟ್ ಮಾಡುವ 12% ರಷ್ಟು ಪಿಎಫ್ ಹಣವನ್ನು ಪಿಎಫ್ ಟ್ರಸ್ಟ್ ಪಾವತಿ ಮಾಡಿಲ್ಲ. ಹೀಗಾಗಿ ನೌಕರರ ಪಿಎಫ್ ಹಣ ನಿಗಮಕ್ಕೆ ಬಳಕೆ ಆಗಿದೆಯಾ ಅಥವಾ ಅಧಿಕಾರಿಗಳ ಜೇಬು ಸೇರಿದೆಯಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಸಾರಿಗೆ ನೌಕರರಿಗೆ ಪಿಎಫ್​​​ ಹಣ ಎಲ್ಲೋಯ್ತು?

ನೌಕರರ ಸಂಬಳದಲ್ಲಿ ಕಟ್ ಮಾಡುವ 12% ರಷ್ಟು ಬರೋಬ್ಬರಿ ಎರಡೂವರೆ ಸಾವಿರ ಕೋಟಿ ರೂ. ಪಾವತಿ  ಪಿಎಫ್ ಹಣವನ್ನು ಪಿಎಫ್ ಟ್ರಸ್ಟ್ ಪಾವತಿ ಮಾಡಿಲ್ಲ. ಸಾವಿರಾರು ಕೋಟಿ ರುಪಾಯಿ ಪಿಎಫ್ ಬಾಕಿ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ಸಾರಿಗೆ ನೌಕರರಿಗೆ ಪಿಎಫ್ ಹಣವೇ ಕ್ಲೈಮ್ ಆಗಿಲ್ಲ.  ಮಕ್ಕಳ ಸ್ಕೂಲ್ ಫಿಸ್ ಕಟ್ಟಲು, ಅನಾರೋಗ್ಯದ ಸಮಸ್ಯೆ, ಮಕ್ಕಳ ಮದುವೆ ಹೀಗೆ ಸಾಕಷ್ಟು ಸಮಸ್ಯೆಗಳ ಹಿನ್ನೆಲೆ ಪಿಎಫ್ ಅಪ್ಲೈ ಮಾಡುತ್ತಿದ್ದಾರೆ. ಆದರೆ ಆಗಸ್ಟ್ ನಿಂದ ನೌಕರರ ಹಣ ಬರುತ್ತಿಲ್ಲ. ಹೀಗಾಗಿ ನೌಕರರ ಪಿಎಫ್​​ ಹಣ ಎಲ್ಲೊಯ್ತು ಎನ್ನುವುದೇ ಪ್ರಶ್ನೆಗಯಾಗಿದೆ.

ಇದನ್ನೂ ಓದಿ: ಕೊಪ್ಪಳ ಆಯ್ತು, ಈಗ ವಿಜಯಪುರದಲ್ಲೂ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಡೀಸೆಲ್ ಅಭಾವ!

ಈಗಾಗಲೇ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಕ್ಕೆ ನೌಕರರ ಪಿಎಫ್ ಹಣವನ್ನು ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ಆದರೆ ಸಾರಿಗೆ ನಿಗಮದಲ್ಲಿ ಹಣವಿಲ್ಲದೆ 1.10 ಲಕ್ಷ ನೌಕರರ ಎರಡೂವರೆ ಸಾವಿರ ಕೋಟಿ ರೂ. ಪಾವತಿ ಮಾಡಿಲ್ಲ. ಇದರಿಂದ ಸಾರಿಗೆ ನೌಕರರ ಮುಖಂಡರು ಆಕ್ರೋಶಗೊಂಡಿದ್ದ, ಕೂಡಲೇ ನೌಕರರ ಹಣ ಪಾವತಿ ಮಾಡಿ ಎಂದು ಆಗ್ರಹಿಸಿದ್ದಾರೆ.

ನಾಲ್ಕೂ ನಿಗಮಗಳಿಗೆ 593.99 ಕೋಟಿ ಬಿಡುಗಡೆ

ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ ರಾಜ್ಯ ಸರ್ಕಾರ ವಿವಿಧ ಸಹಾಯಧನದ ಅಡಿ 593.99 ಕೋಟಿ ಬಿಡುಗಡೆ ಮಾಡಿ ಆದೇಶಿಸಿದೆ. ಡೀಸೆಲ್‌ ಬಾಕಿ ಇರುವ ಕಾರಣ ಕೆಲ ದಿನಗಳ ಹಿಂದೆ ಕೆಎಸ್‌ಆರ್‌ಟಿಸಿಯ ಕೆಲ ಡಿಪೋಗಳಲ್ಲಿ ಡೀಸೆಲ್‌ ಕೊರತೆ ಉಂಟಾಗಿ ಬಸ್‌ ಸೇವೆ ವ್ಯತ್ಯವಾಗಿತ್ತು. ಅದರ ಜತೆ ನಾಲ್ಕೂ ಸಾರಿಗೆ ನಿಗಮಗಳು ಡೀಸೆಲ್‌ ಬಾಕಿ, ಸಾಲ ಸೇರಿ ಇನ್ನಿತರ ಕಾರಣಗಳಿಂದಾಗಿ 5 ಸಾವಿರ ಕೋಟಿಗೂ ಹೆಚ್ಚಿನ ಹೊಣೆಗಾರಿಕೆ ಹೊಂದಿವೆ. ಹೀಗಾಗಿ ನಿಗಮಗಳಿಗೆ ಸರ್ಕಾರದಿಂದ ನೀಡಬೇಕಾಗಿರುವ ಬಾಕಿಯಲ್ಲಿ 593.99 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:20 pm, Tue, 13 October 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us