Karnataka Unlock: 3ನೇ ಹಂತದ ಅನ್‌ಲಾಕ್; ಸೋಮವಾರದಿಂದಲೇ ಮಾಲ್ ಓಪನ್ ಸಾಧ್ಯತೆ, ಷರತ್ತುಗಳು ಅನ್ವಯ
ಅನ್‌ಲಾಕ್ 3.O ನಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬಂದಲ್ಲಿ ಮಾಲ್ಗಳ ತೆರವು ಸಮಯದಲ್ಲಿ ಕೆಲವೊಂದು ಬದಲಾವಣೆಯಾಗಲಿದೆ. ಅದರಂತೆ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾಲ್ಗಳು ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ.
ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಹಂತ ಹಂತವಾಗಿ ಅನ್‌ಲಾಕ್ ಪ್ರಕ್ರಿಯೆ ಪ್ರಾರಂಭಿಸಿದೆ. ತಜ್ಞರ ಸಲಹೆಗೆ ಅನುಸಾರವಾಗಿ ಈಗಾಗಲೇ ಅನ್‌ಲಾಕ್ 2.0 ಆರಂಭವಾಗಿದ್ದು, ಇದೀಗ ಜುಲೈ 5 ರಿಂದ ಅನ್‌ಲಾಕ್ 3.O ಜಾರಿಯಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರ ಮಾಲ್ಗೆ ರಿಲೀಫ್ ನೀಡಲು ನಿರ್ಧರಿಸಿದೆ. ಇನ್ನು ಥಿಯೇಟರ್, ಪಬ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್ಗಳಿಗೂ ರಿಲೀಫ್ ನೀಡುವ ಸಾಧ್ಯತೆ ಇದೆ.
ಅನ್‌ಲಾಕ್ 3.O ನಲ್ಲಿ ನೈಟ್ ಕರ್ಫ್ಯೂ ಜಾರಿಗೆ ಬಂದಲ್ಲಿ ಮಾಲ್ಗಳ ತೆರವು ಸಮಯದಲ್ಲಿ ಕೆಲವೊಂದು ಬದಲಾವಣೆಯಾಗಲಿದೆ. ಅದರಂತೆ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾಲ್ಗಳು ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ. ಸಾಮಾನ್ಯವಾಗಿ 10 ಗಂಟೆಗೆ ಓಪನ್ ಆಗುತ್ತಿದ್ದ ಮಾಲ್ಗಳು. ನೈಟ್ ಕರ್ಫ್ಯೂ ಜಾರಿಗೆ ಬಂದರೆ, ಬೆಳಗ್ಗೆ ಬೇಗನೆ ಓಪನ್ ಮಾಡಲು ಯೋಜನೆ ರೂಪಿಸಲಾಗಿದೆ.
ಕೊರೊನಾ ಪಾಸಿಟಿವ್ ರೇಟ್ ಕಡಿಮೆ ಇದ್ದಲ್ಲಿ ಅನ್‌ಲಾಕ್ 3.O ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ ರಾಜ್ಯದ ಪಾಸಿಟಿವ್ ರೇಟ್ ಗಮನದಲ್ಲಿರಿಸಿಕೊಂಡು ಮಾಲ್ ಓಪನ್ಗೆ ಮುಂದಾಗಿದೆ. ಇನ್ನು ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿದ್ದ ಥಿಯೇಟರ್, ಪಬ್, ಬಾರ್, ಕ್ಲಬ್, ಸ್ವಿಮ್ಮಿಂಗ್ ಪೂಲ್ಗಳಿಗೆ ಅನುಮತಿ ಕೊಡುವ ಸಾಧ್ಯತೆಯಿದೆ.
ಬಾರ್ಗಳಿಗೂ ಕೊಂಚ ರಿಲೀಫ್ ಸಿಗುವ ಸಾಧ್ಯತೆ ಹೋಟೆಲ್ಗಳಿಗೆ ಸಿಕ್ಕ ವಿನಾಯಿತಿಯಂತೆ,ಬಾರ್ಗೂ ವಿನಾಯಿತಿ ಸಿಗುವ ಸಾಧ್ಯತೆ ಇದೆ. ಶೇ.50% ರಷ್ಟು ಗ್ರಾಹಕರಿಗೆ ಬಾರ್ನಲ್ಲಿ ಕೂತು ಕುಡಿಯಲು ಅವಕಾಶ ನೀಡುವ ಸಾಧ್ಯತೆ ಇದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಬಾರ್ನಲ್ಲಿ ಟೇಬಲ್ ಸರ್ವಿಸ್ ಆರಂಭಿಸಲು ಚಿಂತನೆ ನಡೆಸಲಾಗಿದೆ.
ಕ್ಲಬ್, ಕ್ಲಬ್ ಹೌಸ್ಗಳಿಗೂ ಅವಕಾಶ ನೀಡುವ ಸಾಧ್ಯತೆ. ಆದರೆ ಪಾರ್ಟಿ, ಹೆಚ್ಚು ಜನ ಸೇರುವ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಅನ್‌ಲಾಕ್ 3.O ನಲ್ಲಿ ದೇವಸ್ಥಾನಗಳು ರಿಲೀಫ್ ಸಿಗುವ ಸಾಧ್ಯತೆ ಇದ್ದು, ವಿಶೇಷ ಆಚರಣೆ, ಪ್ರಸಾದ ವಿತರಣೆ, ಗುಂಪು ಸೇರುವುದು ಸೇರಿದಂತೆ ಇನ್ನಿತರ ನಿರ್ಬಂಧ ಹೇರುವ ಮೂಲಕ ದೇವಸ್ಥಾನಗಳನ್ನ ಓಪನ್ ಮಾಡಲು ಅವಕಾಶ ನೀಡುವ ಸಾಧ್ಯತೆ ಇದೆ.
ಆದರೆ ಅನ್‌ಲಾಕ್ 3.O ನಲ್ಲಿ ಥಿಯೇಟರ್ಗಳಿಗೆ ರಿಲೀಫ್ ಸಿಗುವುದು ಅನುಮಾನವಾಗಿದೆ. ಸಧ್ಯಕ್ಕೆ ಥಿಯೇಟರ್ಗಳನ್ನು ಓಪನ್ ಮಾಡದಿರಲು ಕೆಲ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಜುಲೈ 15 ವರೆಗೂ ಥಿಯೇಟರ್ಗಳು ಓಪನ್ ಆಗುವುದು ಬಹುತೇಕ ಅನುಮಾನವಾಗಿದೆ.
ಜುಲೈ 5ರ ನಂತರ ನೈಟ್ ಕರ್ಫ್ಯೂ ಮುಂದುವರಿಯಬಹುದು. ಸದ್ಯ ನೈಟ್ ಕರ್ಫ್ಯೂ ಸಂಜೆ 6 ಗಂಟೆಯಿಂದ ಜಾರಿಯಲ್ಲಿದೆ. ಆದರೆ ಜುಲೈ 5ರಿಂದ ಸಂಜೆ 7 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಯಿದೆ. ವಿಕೇಂಡ್ ಕರ್ಫ್ಯೂ ಯಥಾಸ್ಥಿತಿ ಮುಂದುವರಿಯುತ್ತದೆ.
ಇದನ್ನೂ ಓದಿ:
ಅನ್‌ಲಾಕ್ 2.Oನಲ್ಲಿ ಕೊರೊನಾ ರೂಲ್ಸ್ ಕಂಪ್ಲೀಟ್ ಬ್ರೇಕ್.. ಕೊರೊನಾ ಮರೆತು ನಿರ್ಲಕ್ಷ್ಯದಲ್ಲಿರುವ ಜನ
Published On - 9:31 am, Fri, 2 July 21