Karnataka Weather Forecast: ಉಡುಪಿ, ಉತ್ತರ ಕನ್ನಡಕ್ಕೆ ರೆಡ್​​ ಅಲರ್ಟ್​​, ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ

Monsoon 2026: ಕರ್ನಾಟಕದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಹವಾಮಾನ ಇಲಾಖೆಯು ನಾಳೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಹಾಗೂ ಬೆಂಗಳೂರು ಸೇರಿದಂತೆ 18 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ. ಜುಲೈ 11ರ ವರೆಗೂ ರಾಜ್ಯದ ಹಲವೆಡೆ ಭಾರಿ ಮಳೆಯ ಎಚ್ಚರಿಕೆನ್ನು ನೀಡಲಾಗಿದ್ದು, ಆ ಕುರಿತ ಮಾಹಿತಿ ಇಲ್ಲಿದೆ.

Karnataka Weather Forecast: ಉಡುಪಿ, ಉತ್ತರ ಕನ್ನಡಕ್ಕೆ ರೆಡ್​​ ಅಲರ್ಟ್​​, ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ
ಮಳೆ
Image Credit source: Tv9 Kannada

Updated on: Jul 06, 2026 | 6:58 PM

ಮುಖ್ಯಾಂಶಗಳು

  • ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟ
  • ಉಡುಪಿ, ಉತ್ತರ ಕನ್ನಡಕ್ಕೆ ನಾಳೆ ರೆಡ್​​ ಅಲರ್ಟ್​​ ಘೋಷಣೆ
  • 18 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೊಷಿಸಿದ ಹವಾಮಾನ ಇಲಾಖೆ

ಬೆಂಗಳೂರು, ಜುಲೈ 06: ಕರ್ನಾಟಕದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವಿಪರೀತ ವರ್ಷಧಾರೆಯಾಗುತ್ತಿದೆ. ಈ ನಡುವೆ ಜುಲೈ 9ರಿಂದ 11ರ ವರೆಗೆ ಕರಾವಳಿಯಲ್ಲಿ, ಜುಲೈ 9ರಂದು ದಕ್ಷಿಣ ಒಳನಾಡು ಭಾಗದಲ್ಲಿ ಮತ್ತು ಜುಲೈ 8ರಂದು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಪೈಕಿ ಉತ್ತರ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿಪರೀತ ಮಳೆಯ ಜೊತೆಗೆ ಗಂಟೆಗೆ 50-60 ಕಿಲೋ ಮೀಟರ್​​ ವೇಗದಲ್ಲಿ ಗಾಳಿಯ ಅಬ್ಬರವೂ ಇರಲಿದೆ ಎಂದು ಇಲಾಖೆ ಎಚ್ಚರಿಸಿದೆ.

ಎರಡು ಜಿಲ್ಲೆಗಳಿಗೆ ನಾಳೆ ರೆಡ್​​ ಅಲರ್ಟ್​​

ಕರಾವಳಿ ಭಾಗದ ಉತ್ತರ ಕನ್ನಡ ಮತ್ತು ಉಡುಪಿಗೆ ನಾಳೆ ರೆಡ್​​ ಅಲರ್ಟ್​​ ನೀಡಲಾಗಿದ್ದು, ರಾಜ್ಯದ 18 ಜಿಲ್ಲೆಗಳಿಗೆ ಆರೆಂಜ್​​ ಅಲರ್ಟ್​​ ಘೋಷಿಸಲಾಗಿದೆ. ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಮಳೆಯಬ್ಬರದ ನಿರೀಕ್ಷೆ ಇದೆ.

ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ ಕರ್ನಾಟಕ ಯಾವ ಭಾಗದಲ್ಲಿ ಅತಿ ಹೆಚ್ಚು ಮಳೆ?

ಕೆಲ ಜಿಲ್ಲೆಗಳಲ್ಲಿ ವಿಪರೀತ ಗಾಳಿ

ಚಾಮರಾಜನಗರ, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಿಪರೀತ ಗಾಳಿ ಇರಲಿದ್ದು, ಗಾಳಿಯ ವೇಗ ಗಂಟೆಗೆ 40-50 ಕಿಲೋ ಮೀಟರ್​​ ಇರಬಹುದೆಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರಕ್ಕೂ ಆರೆಂಜ್​​ ಅಲರ್ಟ್​​

ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಕಂಡುಬರುತ್ತಿರುವ ಬೆಂಗಳೂರು ನಗರದಲ್ಲಿಯೂ ನಾಳೆ ಭಾರಿ ಮಳೆಯ ನಿರೀಕ್ಷೆ ಇದ್ದು, ಆರೆಂಜ್​​ ಅಲರ್ಟ್​​ ನೀಡಲಾಗಿದೆ. ಗಂಟೆಗೆ 30-40 ಕಿಲೋ ಮೀಟರ್​​ ಗಾಳಿಯ ವೇಗದ ಜೊತೆಗೆ ವರುಣಾರ್ಭಟದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:36 pm, Mon, 6 July 26

Follow Us