AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KCET Result: ಇನ್ನೂ ಕೂಡ ತಿಳಿಯದ ಸಿಇಟಿ ಫಲಿತಾಂಶ: ಕೆಇಎ ಬೋರ್ಡ್​​ ಮುಂದೆ ವಿದ್ಯಾರ್ಥಿ ಹಾಗೂ ಪೋಷಕರ ಆಕ್ರೋಶ

ಸಿಇಟಿ ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಇನ್ನೂ ಕೂಡ ಕೆಲ ವಿದ್ಯಾರ್ಥಿಗಳಿಗೆ ಸಿಇಟಿ ಫಲಿತಾಂಶ ತಲುಪಿಲ್ಲ. ಹೀಗಾಗಿ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.

KCET Result: ಇನ್ನೂ ಕೂಡ ತಿಳಿಯದ ಸಿಇಟಿ ಫಲಿತಾಂಶ: ಕೆಇಎ ಬೋರ್ಡ್​​ ಮುಂದೆ ವಿದ್ಯಾರ್ಥಿ ಹಾಗೂ ಪೋಷಕರ ಆಕ್ರೋಶ
KEA
ವಿವೇಕ ಬಿರಾದಾರ
|

Updated on:Jun 26, 2023 | 3:11 PM

Share

ಬೆಂಗಳೂರು: ಸಿಇಟಿ (KCET) ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ ಇನ್ನೂ ಕೂಡ ಕೆಲ ವಿದ್ಯಾರ್ಥಿಗಳಿಗೆ (Students) ಸಿಇಟಿ ಫಲಿತಾಂಶ ತಲುಪಿಲ್ಲ. ಹೀಗಾಗಿ ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ. ವಾರ ಕಳೆದರೂ ನಮ್ಮ ಫಲಿತಾಂಶ ಪ್ರಕಟವಾಗಿಲ್ಲವೆಂದು ಕರ್ನಾಟಕ ಪರಿಕ್ಷಾ ಪ್ರಾಧಿಕಾರದ (KEA) ಮುಂದೆ ಪೋಷಕರು ಹಾಗೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂದಲ್ಲಿರುವ ಕೆಇ ಬೋರ್ಡ್ ಕಚೇರಿ ಮುಂದೆ ವಿದ್ಯಾರ್ಥಿಗಳು ಮತ್ತು ಪೋಷಲರು ಜಮಾಯಿಸಿದ್ದಾರೆ. ಅಧಿಕಾರಿಗಳನ್ನು ವಿಚಾರಿಸಿದರೇ ರ್ಯಾಂಕ್ ಬರುತ್ತೆ ಅಂತ ಹೇಳುತ್ತಿದ್ದಾರೆ. ಆದರೆ ಇನ್ನೂ ರ್ಯಾಂಕ್ ಬಂದಿಲ್ಲ. ನಾಳೆಯೇ ಡಾಕುಮೆಂಟ್ ವೆರಿಫಿಕೇಶನ್ ಇದೆ. ಈಗ ನಾವು ಏನು ಮಾಡಬೇಕೆಂದು ತಿಳಿಯದಂತಾಗಿದೆ. ಅಲ್ಲದೇ ಕೆಲವೆ ವಿದ್ಯಾರ್ಥಿಗಳ ರ್ಯಾಂಕ್ ಲಿಸ್ಟ್ ಬಂದಿದ್ದು, ಇನ್ನೂ ಕೆಲವು ವಿದ್ಯಾರ್ಥಿಗಳ ರ್ಯಾಂಕ್​ ಲಿಸ್ಟ್​​ ಬಂದಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: CUET UG 2023 ಫಲಿತಾಂಶವನ್ನು ಶೀಘ್ರದಲ್ಲೇ ಬಿಡುಗಡೆಯಾಗಲಿದೆ; ಉತ್ತರ ಕೀ, ಸ್ಕೋರ್‌ಕಾರ್ಡ್ ನೋಡಲು ಇಲ್ಲಿದೆ ನೇರ ಲಿಂಕ್

ನಾವು ಪಿಯು ಸಪ್ಲಿಮೆಂಟರಿ ಎಕ್ಸಾಂ ಬಳಿಕ ಸಿಇಟಿ ಫಲಿತಾಂಶ ಲಿಂಕ್ ಕ್ಲೋಸ್ ಮಾಡಿದ್ದೇವೆ. ಹೀಗಾಗಿ ಸಪ್ಲಿಮೆಂಟರಿ ವಿದ್ಯಾರ್ಥಿಗಳು ಬಂದಿದ್ದಾರೆ. ಇನ್ನೂ ಹಲವಾರು ಫ್ರೆಶರ್ಸ್ ವಿದ್ಯಾರ್ಥಿಗಳು ಲಿಂಕ್ ಒಪನ್ ಇದ್ದಾಗ ಟ್ರೈ ಮಾಡಿಲ್ಲ. ಲಿಂಕ್ ಕ್ಲೋಸ್ ಮಾಡಿದ ಮೇಲೆ ಟ್ರೈ ಮಾಡಿದ್ದಾರೆ. ಹೀಗಾಗಿ ಅವರ ಸಿಇಟಿ ರ್ಯಾಂಕ್ ಹೋಲ್ಡ್ ಆಗಿದೆ ಎಂದು KEA ನಿರ್ದೇಶಕಿ ರಮ್ಯ ಹೇಳಿದ್ದಾರೆ.

ಇನ್ನೂ ಕೆಲವರು ಪರೀಕ್ಷೆ ಬರೆಯದೆ ಇರುವವರು ಇಲ್ಲಿ ಬಂದಿದ್ದಾರೆ. ಹೀಗಾಗಿ ಪೋಷಕರು ಇಲ್ಲಿ‌ ಬಂದಿದ್ದಾರೆ. ಎಲ್ಲಾ ಸರಿಪಡಿಸುವ ಕೆಲಸ ಮಾಡುತ್ತೇವೆ. ಯಾರು ಭಯಪಡುವ ಅಗತ್ಯ ಇಲ್ಲ. ನಿಮ್ಮ ಮಕ್ಕಳ ಲಿಸ್ಟ್ ಸಿಗಲಿದೆ. ಈ ತರಹ ಮೊದಲ ಬಾರಿ ಸಮಸ್ಯೆಯಾಗಿದೆ ಎಂದು ನಿರ್ದೇಶಕಿ ರಮ್ಯ ಪೋಷಕರಿಗೆ ಭರವಸೆ ನೀಡಿದರು.

ಡಾಕುಮೆಂಟ್ ವೆರಿಫಿಕೇಶನ್ ವಿಚಾರವಾಗಿ ಮಾತನಾಡಿದ ಅವರು ಬಿಇಓ ಆಫೀಸ್​ನಲ್ಲಿ ವೇರಿಫೀಕೆಷನ್ ಮಾಡುವಂತೆ ತಿಳಿಸಿದ್ದೇವೆ. ಬೆಂಗಳೂರಿನ‌ ವಿದ್ಯಾರ್ಥಿಗಳ ವೆರಿಫಿಕೇಶನ್ ಕೆಇಎ ಬೋರ್ಡ್​ನಲ್ಲಿ ನಡೆಯಲಿದೆ. ಉಳಿದ ಜಿಲ್ಲೆಯ ವಿದ್ಯಾರ್ಥಿಗಳ ಡಾಕುಮೆಂಟ್​​ ವೆರಿಫಿಕೇಶನ್ ತಾಲ್ಲೂಕು ಬಿಇಓ ಆಫೀಸ್​​ನಲ್ಲಿ ನಡೆಯುತ್ತದೆ ಎಂದು ತಿಳಿಸಿದರು.

ಮತ್ತಷ್ಟು ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:10 pm, Mon, 26 June 23