AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ವಯಸ್ಕರಿಗೂ ಇಷ್ಟವಾಗುವ ಕೇಕ್​ ಉತ್ಪನ್ನಗಳನ್ನು ಬಿಡುಗಡೆ ಮಾಡಿದ KMF

ಅಂತಾರಾಷ್ಟ್ರೀಯ ಹಾಲು ದಿನಾಚರಣೆಯಂದು, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) 18 ಹೊಸ ಡೈರಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಫಿನ್ಸ್, ಕೇಕ್‌ಗಳು (ಸ್ಲೈಸ್, ಸ್ಪಾಂಜ್, ಬಾರ್) ಸೇರಿವೆ. ವಿವಿಧ ರುಚಿಗಳಲ್ಲಿ ಲಭ್ಯವಿರುವ ಈ ಉತ್ಪನ್ನಗಳು ಗ್ರಾಹಕರಿಗೆ ಹೊಸ ಅನುಭವ ನೀಡಲಿವೆ ಎಂದು ಕೆಎಂಎಫ್ ವಿಶ್ವಾಸ ವ್ಯಕ್ತಪಡಿಸಿದೆ. ಕೆಎಂಎಫ್ ಪನ್ನೀರ್ ಖಾದ್ಯ ಸ್ಪರ್ಧೆಯನ್ನೂ ಆಯೋಜಿಸಿತ್ತು.

ಎಲ್ಲ ವಯಸ್ಕರಿಗೂ ಇಷ್ಟವಾಗುವ ಕೇಕ್​ ಉತ್ಪನ್ನಗಳನ್ನು ಬಿಡುಗಡೆ ಮಾಡಿದ KMF
ಕೆಎಂಎಫ್​ ನಂದಿನಿ ಕೇಕ್​ಗಳು
ವಿವೇಕ ಬಿರಾದಾರ
|

Updated on:Jun 01, 2025 | 10:07 PM

Share

ಬೆಂಗಳೂರು, ಜೂನ್​ 01: ಅಂತರಾಷ್ಟ್ರೀಯ ಹಾಲು ದಿನಾಚರಣೆ (International Milk Day) ಪ್ರಯುಕ್ತ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (KMF) ಹೊಸ ಉತ್ಪನ್ನಗಳನ್ನು ಪರಿಚಯಿಸಿದೆ. ಹಾಲಿನ ಮಹತ್ವ ಹಾಗೂ ಅರಿವು ಮೂಡಿಸಲು ಮತ್ತು ಡೈರಿ ಕ್ಷೇತ್ರವನ್ನು ಉತ್ತೇಜಿಸಲು ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸುತ್ತದೆ. ಈ ಸಂಬಂಧ ಕೆಎಂಎಫ್​ ಕೂಡ ಹಾಲು ದಿನಾಚರಣೆ ಆಚರಿಸಿತು. ಇದೇ ವೇಳೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಮೂರು ಮಾದರಿಯ 18 ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಮಫಿನ್ಸ್, ಬಾರ್ ಕೇಕ್ ಮತ್ತು ಸ್ಲೈಸ್ ಕೇಕ್, ಸ್ಪಾಂಜ್ ವೆನಿಲ್ಲಾ ಕೇಕ್ ಉತ್ಪನ್ನಗಳ ಬಿಡುಗಡೆ ಮಾಡಿದ್ದಾರೆ.

ಸ್ಲೈಸ್ ಕೇಕ್​ ಫ್ರೂಟ್, ವೆನಿಲ್ಲಾ, ಪೈನಾಪಲ್ ಚಾಕೋ ಆರೆಂಜ್ ನಂತಹ ವಿಭಿನ್ನ ಫ್ಲೆವರ್ ಹೊಂದಿದೆ. ಸದ್ಯ 30 ಮತ್ತು 50 ಗ್ರಾಂ ತೂಕದ ಸ್ಲೈಸ್ ಕೇಕ್​ ಮಾತ್ರ ಮಾರುಕಟ್ಟೆಗೆ ಬಂದಿದೆ. ಸ್ಪಾಂಜಿ ವೆನಿಲ್ಲಾ ಕೇಕ್​ನ 25 ಗ್ರಾಂ ಪ್ಯಾಕೆಟ್​ಗೆ ಗರಿಷ್ಠ 10 ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನು ಮಕ್ಕಳು ಇಷ್ಟಪಡುವ ಮಫಿನ್ಸ್ ಕೇಕ್​ ವೆನಿಲ್ಲಾ, ಚಾಕಲೇಟ್, ಪೈನಾಪಲ್, ಸ್ಟ್ರಾಬೆರಿ ಮತ್ತು ಮಾವಾ ಫ್ಲೇವರ್​ನೊಂದಿಗೆ ಮಾರುಕಟ್ಟೆಗೆ ಬಂದಿದೆ. 150 ಗ್ರಾಂನ ಮಫಿನ್ಸ್ ಕೇಕ್​ಗೆ 50 ರೂಪಾಯಿ ದರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇನ್ನೂ ಸುಮಾರು ಎಂಟು ಮಾದರಿಯ ಕೇಕ್​ಗಳು ಮಾರುಕಟ್ಟೆಗೆ ಬರಲು ಸಜ್ಜಾಗಿವೆ.

ದೇಶ ಹಾಗೂ ವಿದೇಶದಲ್ಲಿ ಜನರ ವಿಶ್ವಾಸಾರ್ಹ ಬ್ರ್ಯಾಂಡ್​ ಆಗಿರುವ ನಂದಿನಿ ಕರುನಾಡಿನ ಪ್ರತಿಷ್ಠೆಯಾಗಿದೆ. ಕ್ವಾಲಿಟಿಯಲ್ಲಿ ರಾಜಿಯಾಗದೆ ಮಾರುಕಟ್ಟೆಗೆ ಬರುವ ನಂದಿನಿ ಉತ್ಪನ್ನಗಳು ಜನರ ಫೇವರೆಟ್ ಆಗಿವೆ. ಇದೇ ಕಾರಣಕ್ಕೆ ಕೆಎಂಎಫ್​ನ​ ಉತ್ಪನ್ನಗಳು ಖಾಸಗಿ ಉದ್ಯಮಗಳಿಗೆ ಠಕ್ಕರ್ ಕೊಡುತ್ತಿವೆ. ಇದರೊಂದಿಗೆ ಇವತ್ತು ನೂತನ ಉತ್ಪನ್ನಗಳು ಸೇರ್ಪಡೆ ಆಗಿವೆ.

ಇದನ್ನೂ ಓದಿ
Image
ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಇದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್
Image
ಮಲ್ಲಸಂದ್ರ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ, ಕ್ಯಾಮರಾ ಅಳವಡಿಕೆ
Image
ಗ್ರೇಟರ್ ಬೆಂಗಳೂರಿನ ಜನರಿಗೆ ಬೋಟ್ ಭಾಗ್ಯ: ಬಿಬಿಎಂಪಿಯಿಂದ ಹೊಸ ಕೊಡುಗೆ
Image
ಪ್ರಯಾಣಿಕರ ಗಮನಕ್ಕೆ: ಬೆಂಗಳೂರು ಸೇರಿ 10 ರೈಲುಗಳಿಗೆ ಹೆಚ್ಚುವರಿ ಬೋಗಿ

ಇದನ್ನೂ ಓದಿ: ವಿಧಾನಸೌಧ ಪ್ರವಾಸ ಇಂದಿನಿಂದ ಆರಂಭ: ಟಿಕೆಟ್​ ಬುಕ್ಕಿಂಗ್​ ಎಲ್ಲಿ ಮಾಡಬೇಕು, ದರ ಎಷ್ಟು? ಇಲ್ಲಿದೆ ವಿವರ

ಅಂತರಾಷ್ಟ್ರೀಯ ಹಾಲು ದಿನಾಚರಣೆ ಪ್ರಯುಕ್ತ ಕೆಎಂಎಫ್​ ಪನ್ನೀರ್ ಖಾದ್ಯ ಸ್ಪರ್ಧೆ ನಡೆಸಿತು. ಈ ಸ್ಪರ್ಧೆಗೆ ಅತಿಥಿಗಳಾಗಿ ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ ಮತ್ತು ಅವರ ಪತ್ನಿ ಸುಚಿತ್ರಾ ತೀರ್ಪುಗಾರರಾಗಿದ್ದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ವರದಿ: ಲಕ್ಷ್ಮೀ ನರಸಿಂಹ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Sun, 1 June 25