Kail Murtha ಕೊಡಗಿನಲ್ಲಿ ಕೈಲ್ ಮುಹೂರ್ತ; ಕೃಷಿ ಪರಿಕರ, ಬಂದೂಕು ಕಿಡಿದು ಸಂಭ್ರಮಿಸಿದ ಕೊಡವರು
ಹಬ್ಬ ಅಂದ್ರೆ ಸಡಗರ ಇರುತ್ತೆ ಇಡೀ ಕುಟುಂಬ ಒಂದ್ಕಡೆ ಸೇರುತ್ತೆ. ಫುಲ್ ಖುಷಿಯಿಂದ ಕಾಲನೂ ಕಲೀತಾರೆ. ಆದ್ರೆ, ಅವರು ಮಾತ್ರ ಕೈಯಲ್ಲಿ ಕೋವಿ ಹಿಡ್ಕೊಂಡು ಸಂಭ್ರಮದಲ್ಲಿ ಮುಳುಗಿದ್ರು. ಕುಣಿದು ಕುಪ್ಪಳಿಸಿ ಕಾಲ ಕಳೆದ್ರು.
ಮಡಿಕೇರಿ: ಈಗ ಕೊಡಗಿನ ಮೂಲನಿವಾಸಿಗಳ ಸುಗ್ಗಿ ಹಬ್ಬದ ಸಂಭ್ರಮ. ಗದ್ದೆ ಕೆಲಸಗಳು ಮುಗಿದ ಬಳಿಕ ಕುಟುಂಬಸ್ಥರು ಒಂದೆಡೆ ಸೇರಿ ಕೈಲ್ ಮುಹೂರ್ತ ಅನ್ನೋ ಹಬ್ಬವನ್ನು ಆಚರಿಸ್ತಾರೆ. ಇದರಲ್ಲಿ ಕೃಷಿ ಪರಿಕರಗಳನ್ನು ಮತ್ತು ಬಂದೂಕುಗಳನ್ನು ವಿಶೇಷವಾಗಿ ಪೂಜಿಸ್ತಾರೆ. ಇಂತಹ ಒಂದು ಹಬ್ಬದ ಆಚರಣೆಯನ್ನು ಕೊಡವ ಸಾಹಿತ್ಯ ಅಕಾಡೆಮಿ, ವಿರಾಜಪೇಟೆಯ ಪೆಗ್ಗಡೆ ಸಮಾಜದಲ್ಲಿ ಆಯೋಜಿಸಿತ್ತು. ಕೊಡಗಿನ ಮೂಲ ನಿವಾಸಿಗಳಾದ, ಕೋಯವ, ಐರಿ, ಪೆಗ್ಗಡೆ, ಕೆಂಬಟ್ಟಿ ಸೇರಿದಂತೆ 21 ಮೂಲ ನಿವಾಸಿಗಳು ಈ ಉತ್ಸವದಲ್ಲಿ ಒಂದಾಗಿ ಸಂಭ್ರಮಿಸುತ್ತಾರೆ.
ಇನ್ನು, ಕೊಡಗು ಜಿಲ್ಲೆಯ ಮೂಲನಿವಾಸಿಗಳು ಪ್ರಕೃತಿಯ ಆರಾಧಾಕರು. ಹಬ್ಬ ಹರಿದಿನಗಳು ಪ್ರಕೃತಿಯೊಂದಿಗೇ ನಂಟು ಹಿಂದಿರುತ್ತವೆ. 3 ದಿನಗಳ ಹಿಂದೆ ನೆರವೇರಿದ ಕೈಲ್ ಮುಹೂರ್ತ ಹಬ್ಬ ಕೂಡ ಕೃಷಿ ಹಬ್ಬವಾಗಿದೆ. ಇದರ ಬೆನ್ನಲ್ಲೇ ಇದೀಗ ಬಂದೂಕು ಪೂಜಿಸಿ ದೇವರನ್ನು ಸ್ತುತಿಸಿ ಹಬ್ಬಕ್ಕೆ ತೆರೆ ಎಳೆದ್ರು. ಅಲ್ದೆ, ಜಿಲ್ಲೆಯ ಎಲ್ಲಾ ಮೂಲ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಖತ್ ಆಗಿ ಡ್ಯಾನ್ಸ್ ಮಾಡಿದ್ರು. ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿದ್ರು.
ಸದ್ಯ, ಕೊಡಗಿನ ಮೂಲ ನಿವಾಸಿಗಳು ಕೈಲ್ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಆ ಕೆಲಸ ಈ ಕೆಲಸ ಅಂತಾ ತಲೆ ಕೆಡಿಸಿಕೊಳ್ತಿದ್ದವರು ಕುಟುಂಬಸ್ಥರ ಜೊತೆ ಸೇರಿ ಖುಷಿ ಕಾಲ ಕಳೀತಿದ್ದಾರೆ.
ವರದಿ: ಗೋಪಾಲ್ ಸೋಮಯ್ಯ
ಇದನ್ನೂ ಓದಿ: ಕೊಡಗು: ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ; ವಿವರ ಇಲ್ಲಿದೆ
ಕೊಡಗು: ಕೋಳಿ ಮೊಟ್ಟೆಯಲ್ಲಿ ಕಬ್ಬಿಣದ ಚೂರು ಪತ್ತೆ; ಗ್ರಾಹಕನಿಂದ ಆಹಾರ ಇಲಾಖೆಗೆ ದೂರು