ಬಾಗಿಲಿಗೆ ಬೀಗ ಹಾಕಿ, ಬೆಂಕಿಯಿಟ್ಟು ಏಳು ಜನರನ್ನು ಕೊಂದ‌ ವ್ಯಕ್ತಿ ಆತ್ಮಹತ್ಯೆ; ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಆರು ಜನರನ್ನ ಬೆಂಕಿ ಹಚ್ಚಿ ಅಮಾನುಷವಾಗಿ ಕೊಂದ ಬಳಿಕ ಆರೋಪಿ ಬೋಜ ತನ್ನ ಮಗಳಿಗೆ ಕರೆ ಮಾಡಿ ಮಾತನಾಡಿದ ಆಡಿಯೋ ಇದೀಗ ವೈರಲ್ ಆಗಿದೆ. ರಾತ್ರಿ ತನ್ನ ಪತ್ನಿ ಮಲಗಿದ್ದ ಅಳಿಯನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆತ ರಾತ್ರಿಯೇ ಮಗಳು ಸುಜಾಳಿಗೆ ಕರೆ ಮಾಡಿದ್ದಾನೆ.

  • TV9 Web Team
  • Published On - 12:06 PM, 6 Apr 2021
ಬಾಗಿಲಿಗೆ ಬೀಗ ಹಾಕಿ, ಬೆಂಕಿಯಿಟ್ಟು ಏಳು ಜನರನ್ನು ಕೊಂದ‌ ವ್ಯಕ್ತಿ ಆತ್ಮಹತ್ಯೆ; ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಎರವರ ಬೋಜ

ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ನಾಕೂರು ಸಮೀಪದ ಮುಗುಟಕೇರಿ ಗ್ರಾಮದಲ್ಲಿ ಮೊನ್ನೆ ಏಪ್ರಿಲ್ 3ಕ್ಕೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆರು ಜನರನ್ನು ಕೊಲೆ ಮಾಡಿದ್ದ ಆರೋಪಿ ಎರವರ ಬೋಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಕೂರು ನರೇಶ್ ಎಂಬುವರ ಕಾಫಿ ತೋಟದಲ್ಲಿ ಇಂದು ಬೆಳಗ್ಗೆ ಬೋಜನ ಮೃತ ದೇಹ ಪತ್ತೆಯಾಗಿದೆ. ಘಟನೆ ಬಳಿಕ ಈತ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅಳಿಯನ‌ ಮನೆಯಲ್ಲಿ ಮಲಗಿದ್ದ ತನ್ನ ಪತ್ನಿ ಮತ್ತು ಇತರ ಐವರನ್ನು ಪೆಟ್ರೋಲ್ ಸುರಿದು ಈತ ಬರ್ಬರವಾಗಿ ಕೊಂದಿದ್ದ. ಘಟನೆ ಬಳಿಕ ಬೋಜ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಕೊಡಗು ಪೊಲೀಸ್ ಕಾರ್ಯಾಚರಣೆ ನಡೆಸಿತ್ತು. ಇದರ ಮಧ್ಯೆಯೇ ಬೋಜನ ದೇಹ ಪತ್ತೆಯಾಗಿದೆ. ದೇಹ ಕೊಳೆತ ಸ್ಥಿತಿಯಲ್ಲಿದ್ದು ಘಟನೆ ನಡೆದ ದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.

ಕೊಲೆ‌ಪಾತಕಿಯ ಲಾಸ್ಟ್ ಆಡಿಯೋ ಕಾಲ್ ವೈರಲ್
ಆರು ಜನರನ್ನ ಬೆಂಕಿ ಹಚ್ಚಿ ಅಮಾನುಷವಾಗಿ ಕೊಂದ ಬಳಿಕ ಆರೋಪಿ ಬೋಜ ತನ್ನ ಮಗಳಿಗೆ ಕರೆ ಮಾಡಿ ಮಾತನಾಡಿದ ಆಡಿಯೋ ಇದೀಗ ವೈರಲ್ ಆಗಿದೆ. ರಾತ್ರಿ ತನ್ನ ಪತ್ನಿ ಮಲಗಿದ್ದ ಅಳಿಯನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಆತ ರಾತ್ರಿಯೇ ಮಗಳು ಸುಜಾಳಿಗೆ ಕರೆ ಮಾಡಿದ್ದಾನೆ. ” ನಿನ್ನ ಅಮ್ಮ ಎರಡು ವಾರ ಕರೆದರೂ ಬಂದಿಲ್ಲ, ಅದಕ್ಕೆ ಅವಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇನೆ, ಈಗ ಅವಳ ಗೋಳಾಟ ನೋಡು ಹೋಗು” ಎಂದು ಹೇಳಿದ್ದಾನೆ. ಈ ಆಡಿಯೋ ಇದೀಗ ಸಾಮಾಜಿಕ‌ ಜಾಲ‌ತಾಣದಲ್ಲಿ ವೈರಲ್ ಆಗಿದೆ.

ಮತ್ತೋರ್ವ ಗಾಯಾಳು ಸಾವು, ಏಳಕ್ಕೇರಿದ ಸಾವಿನ‌ಸಂಖ್ಯೆ
ಜೀವಂತ ದಹನ ಪ್ರಕರಣದಲ್ಲಿ ತೀವ್ರ ಗಾಯಗೊಂಡಿದ್ದ ಭಾಗ್ಯ(40) ಮತ್ತು ಪಾಚೆ(60) ಎಂಬುವವರನ್ನು ಮೈಸೂರಿನ‌ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ ಭಾಗ್ಯ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಇಬ್ಬರು ಮಕ್ಕಳು ಘಟನೆ ನಡೆದ ದಿನವೇ ಸಾವನ್ನಪ್ಪಿದ್ದರು. ಇದೀಗ ಪತ್ನಿ‌ ಮತ್ತು ಇಬ್ಬರು ಮಕ್ಕಳನ್ನು ಕಳೆದುಕೊಂಡು‌ ಅನಾಥವಾಗಿರುವ ಪತಿ ತೋಲನ ಗೋಳು ಮುಗಿಲು ಮುಟ್ಟಿದೆ.

ಇದನ್ನೂ ಓದಿ:

ಪಾನಮತ್ತ ವ್ಯಕ್ತಿಯಿಂದ ಮನೆಗೆ ಬೀಗ ಹಾಕಿ ಬೆಂಕಿ; 6 ವರ್ಷದ ಬಾಲಕಿ ಸೇರಿ ಆರು ಜನರು ಬೆಂಕಿಗೆ ಆಹುತಿ

ಆಸ್ಪತ್ರೆಗೆ ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದರೂ.. ರೋಗಿಯನ್ನು ಬಿಟ್ಟು ಹೊರ ಬಾರದ ವೈದ್ಯರು; ಜೀವವನ್ನೇ ಪಣಕ್ಕಿಟ್ಟು ಸರ್ಜರಿ ನಡೆಸಿದರು

(Man Committed suicide after he killed 7 people in Kodagu