ಬದುಕು ಬದಲಿಸಿತು ಪುಸ್ತಕ, ಕಾಡು ಕೃಷಿಯಿಂದ ಪಡೆದ ಮರು ಜೀವ!
ಕೋಲಾರ: ಆತನಿಗೆ ಚಿಕ್ಕ ವಯಸ್ಸಿನಲ್ಲೇ ಹಲವು ಕಾಯಿಲೆಗಳು ಹೆಗಲೇರಿ ಕಾಡುತ್ತಿದ್ದವು. ಕೈಯಲ್ಲಿ ಸರ್ಕಾರಿ ಉದ್ಯೋಗ, ಕೈತುಂಬ ಸಂಬಳವಿದ್ದರೂ ಆರೋಗ್ಯವಿಲ್ಲದೆ ಸಾವು ಮನೆಯಂಗಳದಲ್ಲೇ ಕೂತಿತ್ತು. ಹೀಗೆ ಸಾವಿನ ಮನೆಯ ಬಾಗಿಲು ತಟ್ಟಿ ಬಂದವರಿಗೆ ಮರು ಜೀವಕೊಟ್ಟ ಕಾಡು ಕೃಷಿಯೆಂಬ, ಪ್ರಕೃತಿ ಜೊತೆಗಿನ ಬದುಕು ಅನಾರೋಗ್ಯವಂತ ನನ್ನು ಆರೋಗ್ಯವಂತನ್ನಾಗಿಸಿದೆ. ನಿರ್ಜನ ಪ್ರದೇಶದಲ್ಲೊಂದು ಕಾಡುಕೃಷಿ: ಅದೊಂದು ಊರ ಹೊರಗಿರುವ ನಿರ್ಜನ ಪ್ರದೇಶದಲ್ಲಿರುವ ಸುಂದರವಾದ ತೋಟ. ಎಲ್ಲಿ ನೋಡಿದ್ರು ಹಚ್ಚ-ಹಸಿರಿನ ವನಸಿರಿ. ಆಕಾಶದೆತ್ತರಕ್ಕೆ ಬೆಳೆದಿರುವ ಬೃಹತ್ತಾದ ಬಗೆ ಬಗೆಯ ಮರಗಳು. ಅಲ್ಲೇ ಪ್ರಕೃತಿ […]
ಕೋಲಾರ: ಆತನಿಗೆ ಚಿಕ್ಕ ವಯಸ್ಸಿನಲ್ಲೇ ಹಲವು ಕಾಯಿಲೆಗಳು ಹೆಗಲೇರಿ ಕಾಡುತ್ತಿದ್ದವು. ಕೈಯಲ್ಲಿ ಸರ್ಕಾರಿ ಉದ್ಯೋಗ, ಕೈತುಂಬ ಸಂಬಳವಿದ್ದರೂ ಆರೋಗ್ಯವಿಲ್ಲದೆ ಸಾವು ಮನೆಯಂಗಳದಲ್ಲೇ ಕೂತಿತ್ತು. ಹೀಗೆ ಸಾವಿನ ಮನೆಯ ಬಾಗಿಲು ತಟ್ಟಿ ಬಂದವರಿಗೆ ಮರು ಜೀವಕೊಟ್ಟ ಕಾಡು ಕೃಷಿಯೆಂಬ, ಪ್ರಕೃತಿ ಜೊತೆಗಿನ ಬದುಕು ಅನಾರೋಗ್ಯವಂತ ನನ್ನು ಆರೋಗ್ಯವಂತನ್ನಾಗಿಸಿದೆ.
ನಿರ್ಜನ ಪ್ರದೇಶದಲ್ಲೊಂದು ಕಾಡುಕೃಷಿ: ಅದೊಂದು ಊರ ಹೊರಗಿರುವ ನಿರ್ಜನ ಪ್ರದೇಶದಲ್ಲಿರುವ ಸುಂದರವಾದ ತೋಟ. ಎಲ್ಲಿ ನೋಡಿದ್ರು ಹಚ್ಚ-ಹಸಿರಿನ ವನಸಿರಿ. ಆಕಾಶದೆತ್ತರಕ್ಕೆ ಬೆಳೆದಿರುವ ಬೃಹತ್ತಾದ ಬಗೆ ಬಗೆಯ ಮರಗಳು. ಅಲ್ಲೇ ಪ್ರಕೃತಿ ಮದ್ಯದಲ್ಲಿ ನಿರ್ಮಾಣವಾಗಿರುವ ಪರಿಸರ ಸ್ನೇಹಿ ಕಟ್ಟಡ ಇದೆಲ್ಲವೂ ಕಂಡು ಬಂದಿದ್ದು ಕೋಲಾರ ತಾಲೂಕಿನ ಚಾಮರಹಳ್ಳಿ ಬಳಿಯ ಆರ್.ರಾಜಶೇಖರ್ ಅನ್ನೋರ ಪ್ರಾಕೃತಿಕ ಮಡಿಲಲ್ಲಿ.
ಹೌದು ಚಾಮರಹಳ್ಳಿಯಲ್ಲಿ ರಾಜಶೇಖರ್ ರವರು ಮೂಲತಹ ಒಬ್ಬ ಕ್ಲಾಸ್ ಒನ್ ಸರ್ಕಾರಿ ಉದ್ಯೋಗಿ. ಆದ್ರೆ ಇವರಿಗೆ ಚಿಕ್ಕವಯಸ್ಸಿನಲ್ಲೇ ಕಾಡಲಾರಂಭಿಸಿದ ಹಲವು ಬಗೆಯ ಕಾಯಿಲೆಗಳಿಂದ ಬೇಸತ್ತು ಹೋಗಿದ್ದರು. ಕೇವಲ 20ನೇ ವಯಸ್ಸಿಗೆ ಸಾಯುವ ದಿನಗಳನ್ನು ಎಣಿಸುತ್ತಿದ್ದ ರಾಜಶೇಖರ್ಗೆ ಕೆಲವು ಸ್ನೇಹಿತರ ಸಲಹೆ ಮೇರೆಗೆ ಪ್ರಕೃತಿ ಚಿಕಿತ್ಸೆ ಅಂದ್ರೆ ನಿಸರ್ಗ ಜೀವನ ಅನ್ನೋ ನಿಯಮದಂತೆ ಬದುಕುವಂತೆ ತಿಳಿಸಿದ್ರು. ಅದರಂತೆ ತನ್ನ 20ನೇ ವಯಸ್ಸಿಗೆ ಜೀವನದ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಕಳೆದುಕೊಂಡಿದ್ದ ರಾಜಶೇಖರ್ ಮತ್ತೆ ಭೂಮಿ ತಾಯಿಯ ಮಡಿಲಲ್ಲಿ ಮತ್ತೊಮ್ಮೆ ಜನಿಸಿದರು.
ಬದುಕು ಬದಲಿಸಿತ್ತೊಂದು ಪುಸ್ತಕ: ಆತ ಮೈಸೂರು ವಿಶ್ವವಿದ್ಯಾಲಯದಲ್ಲಿ ಮೊದಲ ಱಂಕ್ ಪಡೆದ ಎಂಜಿಯರ್ ಪದವೀಧರ. ಜೊತೆಗೆ ಸಾರಿಗೆ ಇಲಾಖೆಯಲ್ಲಿ ಉನ್ನತ ಉದ್ಯೋಗ. ಕೈ ತುಂಬಾ ಸಂಬಳ ಇಷ್ಟೆಲ್ಲಾ ಇದ್ರು, ಇದನ್ನು ಅನುಭವಿಸಲು ಆತನಿಗೆ ಆರೋಗ್ಯವೇ ಇಲ್ಲ. ತನ್ನ 18ನೇ ವಯಸ್ಸಿಗೆ ಇಲ್ಲದ ಕಾಯಿಲೆಗಳೆಲ್ಲಾ ಆತನ ಹೆಗಲೇರಿ ಕುಳಿತಿದ್ದವು. ಕೆಮ್ಮು, ನೆಗಡಿ, ಗಂಟಲು ಬೇನೆ, ಉಸಿರಾಟದ ತೊಂದರೆ, ಹೃದಯ ಬೇನೆ, ಬಿಪಿ ಹೀಗೆ ಒಂದಲ್ಲಾ ಎರಡಲ್ಲಾ ಹಲವು ಕಾಯಿಲೆಗಳು ಆತನನ್ನು ಕಾಡಲಾರಂಭಿಸಿದ್ದವು.
ಆ ವಯಸ್ಸಿಗೆ ಯಾವಾಗ ಏನಾಗುತ್ತದೋ ಎಂಬ ಭಯದಲ್ಲೇ ಜೀವನ ಕಳೆಯುತ್ತಿದ್ದ ಪರಿಸ್ಥಿತಿ ಅವರದ್ದು. ಬದುಕೇ ಸಾಕೆನ್ನುವಷ್ಟರ ಮಟ್ಟಿಗೆ ಆತನಿಗೆ ಜೀವನ ಬೇಸರವಾಗಿಹೋಗಿತ್ತು. ಆಗ ಆತನಿಗೆ ಸಿಕ್ಕ ನಿಸರ್ಗ ಜೀವನ ಅನ್ನೋ ಪುಸ್ತಕ ಜೀವನದಲ್ಲಿ ಮತ್ತೆ ಬದುಕುವ ಆಸೆಯನ್ನು ಚಿಗುರೊಡೆಯುವಂತೆ ಮಾಡಿತ್ತು. ಬದುಕುವ ಆತ್ಮವಿಶ್ವಾಸ ಕಳೆದುಕೊಂಡಿದ್ದ ಆತನಿಗೆ ಮರುಜೀವ ಸಿಕ್ಕಂತಾಗಿತ್ತು. ಪ್ರಕೃತಿಯ ಪರವಾಗಿ ಪ್ರಕೃತಿಗೆ ಹೊಂದಿಕೊಂಡಂತೆ ಬದುಕು ಕಟ್ಟಿಕೊಂಡು ಮರು ಜೀವ ಪಡೆದವರು.
ಕಾಡು ಕೃಷಿಗಾಗಿ ಮಾಡಿದ್ದಾದರು ಏನು? ಅದಾದ ನಂತರವೇ ಅವರು ತಮ್ಮ 40 ಎಕರೆ ಭೂಮಿಯಲ್ಲಿ ಕಾಡುಕೃಷಿ ಮಾಡಲು ಆರಂಭಿಸಿ ಬಹಳಷ್ಟು ಅದ್ಬುತಗಳನ್ನು ಮಾಡಿದ್ರು. ತಾವು ಒಬ್ಬ ಕೃಷಿಕನಾಗಬೇಕೆಂದು ಬಯಸಿ, ತಾನು ಪ್ರಕೃತಿಯ ಮಡಿಲಲ್ಲಿ ಬದುಕಬೇಕೆಂದುಕೊಂಡ್ರು. ಹಾಗಾಗಿ ರಾಜಶೇಖರ್ 19 ವರ್ಷಗಳ ಸೇವೆ ಸಲ್ಲಿಸಿದ್ದ ಸರ್ಕಾರಿ ಉದ್ಯೋಗಕ್ಕೆ 2010 ರಲ್ಲಿ ರಾಜೀನಾಮೆ ನೀಡಿ, ತಮ್ಮ ತೋಟದಲ್ಲಿ ಬಂದು ನೆಲೆಸಿದ್ರು.
ತನ್ನ 40 ಎಕರೆ ಭೂಮಿಯಲ್ಲಿ ಮಾವು, ಬೇವು, ಸೀತಾಫಲ, ಸಪೋಟ, ಸೀಬೆ, ನೇರಳೆ, ಹಲಸು, ನೆಲ್ಲಿಕಾಯಿ ಸೇರಿದಂತೆ ಅಪರೂಪದ ಮರಗಳಾದ ಅರಳಿ ಹತ್ತಾರು ಬಗೆಯ ಸುಮಾರು 6000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಇಡೀ ಜಮೀನಿಗೆಲ್ಲಾ ಕೊರೆಸಿದ್ದ ಒಂದೇ ಕೊಳವೆ ಬಾವಿ ಜೊತೆಗೆ ಮಳೆ ನೀರು ಸಂಗ್ರಹ, ಕೃಷಿ ಹೊಂಡಗಳನ್ನು ಮಾಡಿಕೊಂಡು ಸಾವಯವ ಕೃಷಿ ಮಾಡಿ ಕೊಂಡು ಪ್ರಕೃತಿಯ ಜೊತೆಗೆ ಬದುಕು ಕಟ್ಟಿಕೊಂಡಿದ್ದಾರೆ.
ಹನಿ ನೀರಾವರಿ, ಮಳೆ ನೀರು ಸಂಗ್ರಹ: ತಮ್ಮ ಭೂಮಿಯಲ್ಲಿ ನೆಡಲಾಗಿದ್ದ ವಿವಿಧ ಜಾತಿಯ ಸಾವಿರಾರು ಸಸಿಗಳಿಗೆ ಹನಿ ನೀರಾವರಿ ಮೂಲಕ, ಸಾವಯವ ಕೃಷಿ, ವಿಧಾನ ಪಾತಿಗಳು, ಹಿಂಗು ಗುಂಡಿಗಳ ಮೂಲಕ ತಮ್ಮ ಭೂಮಿಯಲ್ಲಿ ತೇವಾಂಶ ಕಾಯ್ದುಕೊಳ್ಳುವಂತೆ ಮಾಡಿದರು. ತಮ್ಮ ಭೂಮಿಯಲ್ಲಿ ನೆಡಲಾಗಿದ್ದ ಯಾವ ಒಂದು ಸಸಿಯೂ ಒಣಗದಂತೆ ನೋಡಿಕೊಂಡರು. ಪರಿಣಾಮ ಈಗ ತಮ್ಮ ಭೂಮಿಯಲ್ಲಿ ಸಾವಿರಾರು ಅಪರೂಪದ ಮರಗಳನ್ನು ಬೆಳೆಸಿರುವ ರಾಜಶೇಖರ್ ತಮ್ಮ 40 ಎಕರೆ ಭೂಮಿಯನ್ನೇ ದೈವಿಕ ಆಹಾರ ಮತ್ತು ಆರೋಗ್ಯ ಕೇಂದ್ರವನ್ನಾಗಿ ಮಾರ್ಪಡಿಸಿದ್ದಅರೆ.
ನಿಸರ್ಗದಿಂದ ದೂರ ಉಳಿದು ನಾವು ಬದುಕಲಾರೆವು ಅನ್ನೋ ವಿಷಯವನ್ನು ಜನರಿಗೆ ಅರ್ಥಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಾವಿನ ಮನೆಯ ಬಾಗಿಲು ತಟ್ಟಿಬಂದವರಿಗೆ ಪ್ರಕೃತಿ ಜೊತೆಗಿನ ಬದುಕಿನಿಂದ ಮರು ಜೀವ ಸಿಕ್ಕಿದ್ದು, ಪ್ರಕೃತಿ ಇಲ್ಲದೆ ಬದುಕಿಲ್ಲ ಅನ್ನೋ ಸತ್ಯ ಅರಿವಾಗಿದೆ. ಅಲ್ಲದೆ ಆ ಸತ್ಯವನ್ನು ಜನರಿಗೆ ಹೇಳೋ ಮೂಲಕ ನೀವು ಬದುಕಿ ಪ್ರಕೃತಿಯನ್ನು ಉಳಿಸಿ ಅನ್ನೋ ಸಂದೇಶ ರಾಜಶೇಖರ್ ಅವರದ್ದು. ಎಲ್ಲರೂ ಅವರಂತೆ ಬದುಕಿದ್ರೆ ನಿಜಕ್ಕೂ ಎಲ್ಲರೂ ನೆಮ್ಮದಿಯಿಂದ ಬದುಕಬಹುದು ಅನ್ನೋದ್ರಲ್ಲಿ ಎರಡು ಮಾತಿಲ್ಲ.
Published On - 6:35 pm, Thu, 4 June 20