ಬಜೆಟ್‌ನಲ್ಲಿ ರಾಜ್ಯಕ್ಕೆ ದೋಖಾ, ಕೋಚ್ ಫ್ಯಾಕ್ಟರಿ ಇಲ್ಲವಾಯಿತು.. ರಿಪೇರಿ ಫ್ಯಾಕ್ಟರಿಯಷ್ಟೇ ಭಾಗ್ಯ!
ಕೋಲಾರ: 2020-21ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ದೋಖಾ ಆಗಿದೆ. UPA ಅವಧಿಯಲ್ಲಿ ಘೋಷಿಸಿದ್ದ ಯೋಜನೆಗೆ ಬಜೆಟ್‌ನಲ್ಲಿ ಕೊಕ್ ನೀಡಲಾಗಿದೆ. ಕೆ.ಹೆಚ್.ಮುನಿಯಪ್ಪ ರೈಲ್ವೆ ಖಾತೆ ರಾಜ್ಯ ಮಂತ್ರಿಯಾಗಿದ್ದಾಗ ಯುಪಿಎ ಅವಧಿಯಲ್ಲಿ ಕೋಲಾರ ಜಿಲ್ಲೆಗೆ ರೈಲ್ವೆ ಕೋಚ್ ಫ್ಯಾಕ್ಟರಿ ಮಂಜೂರು ಮಾಡಿಸಿಕೊಂಡಿದ್ದರು. ಇದಕ್ಕಾಗಿ ಈಗಾಗಲೇ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ 530 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದ್ರೆ ಪ್ರಸಕ್ತ ಸಾಲಿನಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ, ಹಿಂದಿನ ಯೋಜನೆಯನ್ನು ರೈಲ್ವೆ ರಿಪೇರಿ ಕಾರ್ಯಾಗಾರವಾಗಿ ಬದಲಾವಣೆ ಮಾಡಲಾಗಿದೆ. ರೈಲ್ವೆ ಕೋಚ್ […]
ಕೋಲಾರ: 2020-21ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ದೋಖಾ ಆಗಿದೆ. UPA ಅವಧಿಯಲ್ಲಿ ಘೋಷಿಸಿದ್ದ ಯೋಜನೆಗೆ ಬಜೆಟ್‌ನಲ್ಲಿ ಕೊಕ್ ನೀಡಲಾಗಿದೆ. ಕೆ.ಹೆಚ್.ಮುನಿಯಪ್ಪ ರೈಲ್ವೆ ಖಾತೆ ರಾಜ್ಯ ಮಂತ್ರಿಯಾಗಿದ್ದಾಗ ಯುಪಿಎ ಅವಧಿಯಲ್ಲಿ ಕೋಲಾರ ಜಿಲ್ಲೆಗೆ ರೈಲ್ವೆ ಕೋಚ್ ಫ್ಯಾಕ್ಟರಿ ಮಂಜೂರು ಮಾಡಿಸಿಕೊಂಡಿದ್ದರು. ಇದಕ್ಕಾಗಿ ಈಗಾಗಲೇ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ 530 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದ್ರೆ ಪ್ರಸಕ್ತ ಸಾಲಿನಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ, ಹಿಂದಿನ ಯೋಜನೆಯನ್ನು ರೈಲ್ವೆ ರಿಪೇರಿ ಕಾರ್ಯಾಗಾರವಾಗಿ ಬದಲಾವಣೆ ಮಾಡಲಾಗಿದೆ.
ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣವಾಗಿದ್ದರೆ ಕೋಲಾರ ಜಿಲ್ಲೆಯಲ್ಲಿ 5 ಸಾವಿರ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಪ್ರತಿ ವರ್ಷ ಒಂದು ಸಾವಿರ ರೈಲ್ವೆ ಕೋಚ್ ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಈಗ ಕೇವಲ ರಿಪೇರಿ ಕಾರ್ಯಾಗಾರವಾಗಿ ಬದಲಿಸಿದ್ದಾರೆ. ಬಜೆಟ್‌ನಲ್ಲಿ 495 ಕೋಟಿ ರೂಪಾಯಿ ಹಣ ಘೋಷಣೆ ಮಾಡಿದ್ದಾರೆ. ರೈಲ್ವೆ ರಿಪೇರಿ ಕಾರ್ಯಾಗಾರದಲ್ಲಿ ರೈಲ್ವೆ ಕೋಚ್ ನಿರ್ವಹಣೆ, ರಿಪೇರಿ ಕೆಲಸ ಮಾತ್ರ ನಡೆಯಲಿದೆ. ಈ ಹಿನ್ನೆಲೆ ರಿಪೇರಿ ಕಾರ್ಯಾಗಾರದಿಂದ ಕೇವಲ 2,000 ಉದ್ಯೋಗ ಸೃಷ್ಟಿಯಾಗುತ್ತೆ. ಹೀಗಾಗಿ ರಾಜ್ಯದಲ್ಲಿ 3 ಸಾವಿರ ಉದ್ಯೋಗಗಳಿಗೆ ಕತ್ತರಿ ಬಿದ್ದಂತಾಗಿದೆ.