ಕೋಲಾರ: ಶ್ರೀರಾಮನ ಬಗ್ಗೆ ಅವಹೇಳನ: ವಿಡಿಯೋ ಹರಿಬಿಟ್ಟಿದ್ದ ಇಬ್ಬರು ಯುವಕರು ವಶಕ್ಕೆ
ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದ ಇಬ್ಬರು ಯುವಕರನ್ನು ಜಿಲ್ಲೆಯ KGF ತಾಲೂಕಿನ ಬೇತಮಂಗಲ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುಂದರಪಾಳ್ಯ ಗ್ರಾಮದ ಜುಬೇರ್, ಮುಬಾರಕ್ ವಶಕ್ಕೆ ಪಡೆದ ಯುವಕರು. ಅಶ್ಲೀಲವಾಗಿ ಕಮೆಂಟ್ ಮಾಡಿ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳನ್ನು ಪೊಲೀಸರಿಗೆ ಹಿಂದೂ ಸಂಘಟನೆ ಮುಖಂಡರು ಒಪ್ಪಿಸಿದ್ದಾರೆ.
ಕೋಲಾರ, ಜನವರಿ 18: ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದ ಇಬ್ಬರು ಯುವಕರನ್ನು ಜಿಲ್ಲೆಯ KGF ತಾಲೂಕಿನ ಬೇತಮಂಗಲ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುಂದರಪಾಳ್ಯ ಗ್ರಾಮದ ಜುಬೇರ್, ಮುಬಾರಕ್ ವಶಕ್ಕೆ ಪಡೆದ ಯುವಕರು. ಶ್ರೀರಾಮನ ಮತ್ತು ಗುಂಬಜ್ ಫೋಟೋ ಹಾಕಿ ಅಶ್ಲೀಲವಾಗಿ ಕಮೆಂಟ್ ಮಾಡಿ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳನ್ನು ಪೊಲೀಸರಿಗೆ ಹಿಂದೂ ಸಂಘಟನೆ ಮುಖಂಡರು ಒಪ್ಪಿಸಿದ್ದಾರೆ. ಹಿಂದೂ ಪರ ಸಂಘಟನೆ ಕಾರ್ಯಕರ್ತರ ದೂರಿನ ಮೇರೆಗೆ ಇಬ್ಬರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ.
ಮುಳಬಾಗಿಲಿನಲ್ಲಿ ಕೆಲ ಕಿಡಿಗೇಡಿಗಳು ಮರ್ಯಾದಾ ಪುರುಷೋತ್ತಮನ ಕಟೌಟ್ ಮತ್ತು ಫ್ಲೆಕ್ಸ್‌ಗಳನ್ನ ಹರಿದು ಹಾಕಿದ್ದರು. ಜನವರಿ 21ರಂದು ನಗರದಲ್ಲಿ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಅದಕ್ಕಾಗಿ ನಗರದ ಹಲವೆಡೆ ಶ್ರೀರಾಮನ ಫ್ಲೆಕ್ಸ್ ಹಾಕಲಾಗಿತ್ತು. ಆದರೆ ಕಳೆದ ರಾತ್ರಿ ಕೆಲ ಕಿಡಿಗೇಡಿಗಳು, ವಿಠಲೇಶ್ವರಪಾಳ್ಯ ಮತ್ತು ಗುನುಗುಂಟೆಪಾಳ್ಯದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ಹರಿದಿದ್ದರು.
ಇದನ್ನೂ ಓದಿ: ಕೋಲಾರ: ಶ್ರೀರಾಮನ ಕಟೌಟ್, ಪ್ಲೆಕ್ಸ್ನ್ನು ಬ್ಲೇಡ್ನಿಂದ ಹರಿದ ದುಷ್ಕರ್ಮಿಗಳು, ಇಬ್ಬರ ಬಂಧನ
ವಿಷಯ ತಿಳಿಯುತ್ತಿದಂತೆ, ಕೋಲಾರ ಸಂಸದ ಎಸ್ ಮುನಿಸ್ವಾಮಿ ನೇತೃತ್ವದಲ್ಲಿ ಪ್ರತಿಭಟ ಕೂಡ ಮಾಡಲಾಗಿದೆ. ಕೂಡಲೇ ಆರೋಪಿಗಳನ್ನ ಬಂಧಿಸಬೇಕು. ಆರೋಪಿಗಳಿಂದಲೇ ಫ್ಲೆಕ್ಸ್ ಹಾಕಿಸಿ, ಅವರೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.
ವಾತಾವರಣ ಬಿಗುವಿನಿಂದ ಕೂಡಿದಾಗಲೇ, ಸ್ಥಳಕ್ಕೆ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಆಗಮಿಸಿದ್ದರು. ಆಗ ಸಂಸದ ಮತ್ತು ಶಾಸಕರ ಮಧ್ಯೆ ಮಾತಿನ ಚಕಮಕಿ ಉಂಟಾಗಿತ್ತು.
ಹಿಂದೂಗಳಿಗೆ ಘಾಸಿ ಮಾಡುವ ಷಡ್ಯಂತ್ರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಕೆಲವು ಸಮಾಜಘಾತುಕ ಶಕ್ತಿಗಳು. ಸಂಚು ರೂಪಿಸಿ ರಾಮಭಕ್ತರಿಗೆ ಮತ್ತು ಹಿಂದೂಗಳಿಗೆ ಘಾಸಿ ಮಾಡುವ ಷಡ್ಯಂತ್ರ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದ್ದರು.
ಇದನ್ನೂ ಓದಿ: ಹನುಮ ಜನ್ಮ ಸ್ಥಳ ಗಂಗಾವತಿ ತಾಲೂಕಿನಲ್ಲೂ ಇದೆ ಅಯೋಧ್ಯೆ ಗ್ರಾಮ; ಕುತೂಹಲ ಕೆರಳಿಸಿದೆ ಇಲ್ಲಿರುವ ಪುರಾತನ ರಾಮ ಮಂದಿರ
ಶ್ರೀರಾಮನ ಫ್ಲೆಕ್ಸ್ ಹರಿದ ಘಟನೆ ಹಿಂದುಗಳಿಗೆ ಘಾಸಿ ಮಾಡುವ ಷಡ್ಯಂತ್ರಗಳನ್ನು ರೂಪಿಸಿದಂತೆ ತೋರುತ್ತಿದೆ. ಪೊಲೀಸ್ ಇಲಾಖೆ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಿ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:14 pm, Thu, 18 January 24