AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇನಲ್ಲಿ ಸರಣಿ ಅಪಘಾತ: ಇಬ್ಬರು ದುರ್ಮರಣ, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

Series Accidents: ಕೋಲಾರ ಜಿಲ್ಲೆಯ ಬಂಗಾರಪೇಟೆ ಬಳಿಯ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇಯಲ್ಲಿ ಸರಣಿ ಭೀಕರ ರಸ್ತೆ ಅಪಘಾತ ಸಂಭವಿಸಿರುವಂತಹ ಘಟನೆ ನಡೆದಿದೆ. ಈ ಅಪಘಾತ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಬಂಗಾರಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇನಲ್ಲಿ ಸರಣಿ ಅಪಘಾತ: ಇಬ್ಬರು ದುರ್ಮರಣ, 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಸರಣಿ ಅಪಘಾತ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Oct 06, 2025 | 8:37 PM

Share

ಕೋಲಾರ, ಅಕ್ಟೋಬರ್​ 06: ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಸರಣಿ ಭೀಕರ ರಸ್ತೆ ಅಪಘಾತ (Serial accident) ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಬಂಗಾರಪೇಟೆ, ಕೆಜಿಎಫ್ ಹಾಗೂ ಕೋಲಾರ ಆಸ್ಪತ್ರೆಗೆ ರವಾಸಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು-ಚೆನೈ ಎಕ್ಸ್‌ಪ್ರೆಸ್‌ ವೇನಲ್ಲಿ ಟೆಂಪೋ ವಾಹನಕ್ಕೆ ಈಚರ್ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ, ಆ್ಯಂಬುಲೆನ್ಸ್​​ಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಆ್ಯಂಬುಲೆನ್ಸ್ ಚಾಲಕ ವಿಕ್ರಮ್ ಪಾಲ್ ಮತ್ತು ಟೆಂಪೋ ಚಾಲಕ ಶಿವರಾಜ್ ಮೃತರು.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಬೈಕ್​​ಗೆ ಟಿಟಿ ವಾಹನ ಡಿಕ್ಕಿಯಾಗಿ ದಂಪತಿ ಸಾವು; ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ದುರ್ಮರಣ

ಟೆಂಪೋದಲ್ಲಿ ಬೆಂಗಳೂರಿನ ಎಸ್​​ಕೆಸಿ ಕ್ಯಾಟರಿಂಟ್​​ನ 15 ಜನ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಸುಮಾರು ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಸದ್ಯ ಸ್ಥಳಕ್ಕೆ ಎಸ್​ಪಿ ಶಿವಾಂಶು ರಜಪೂತ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ತುಂಗಭದ್ರಾ ಡ್ಯಾಮ್​ನ​ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಸಾವು

ತುಂಗಭದ್ರಾ ಡ್ಯಾಮ್​ನ​ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆಯ ತುಂಗಭದ್ರಾ ಡ್ಯಾಮ್​ನ​ ಹಿನ್ನೀರಿನಲ್ಲಿ ನಡೆದಿದೆ. ಗ್ರಾಮಲೆಕ್ಕಿಗ ಇಮಾಮ್​(24) ಮತ್ತು ಕೂಲಿ ಕಾರ್ಮಿಕ ರಾಜಾಭಕ್ಷಿ(25) ಮೃತರು.

ಇದನ್ನೂ ಓದಿ: ತುಮಕೂರು: ಕಾರಿಗೆ ಖಾಸಗಿ ಬಸ್ ಡಿಕ್ಕಿ; ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮೂವರು ದುರ್ಮರಣ

ಮೃತರು ಹೊಸಪೇಟೆ ತಾಲೂಕಿನ ಹಂಪಿನಕಟ್ಟೆ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ.

ಟ್ರ್ಯಾಕ್ಟರ್​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ವಿದ್ಯಾರ್ಥಿ ಸಾವು 

ಬೈಕ್​​ಗೆ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಬಳ್ಳಾಪುರದ ಕೊತ್ತನೂರು ಗೇಟ್ ಬಳಿ ನಡೆದಿದೆ. ದೇವನಹಳ್ಳಿ ಮೂಲದ ಸುದೀಪ್ ಮೃತ ಎಸ್​ಜೆಸಿಐಟಿ ಕಾಲೇಜು ವಿದ್ಯಾರ್ಥಿ. ಸದ್ಯ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:17 pm, Mon, 6 October 25

ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?
ಮಕರ ಸಂಕ್ರಾಂತಿ ಆಚರಣೆಯ ಸರಿಯಾದ ದಿನಾಂಕ, ಮಹತ್ವ ಏನು?