ಕೋಲಾರ: ರಸ್ತೆ ಅಗಲೀಕರಣ ವೇಳೆ ಕೆಜಿಎಫ್ ಶಾಸಕಿ ಮೇಲೆ ಕಲ್ಲು ತೂರಲು ಯತ್ನ
ರಸ್ತೆ ಅಗಲೀಕರಣ ವೇಳೆ ಹೈ ಡ್ರಾಮಾ ನಡೆದಿದ್ದು, ಕೆಜಿಎಫ್ ಶಾಸಕಿ ರೂಪಕಲಾ ಮೇಲೆ ಆಕ್ರೋಶಗೊಂಡು ಸ್ಥಳೀಯರು ಕಲ್ಲು ಎಸೆಯಲು ಮುಂದಾಗಿದ್ದ ಘಟನೆ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ನಡೆದಿದೆ
ಕೋಲಾರ ಅ.14: ರಸ್ತೆ ಅಗಲೀಕರಣ ವೇಳೆ ಹೈ ಡ್ರಾಮಾ ನಡೆದಿದ್ದು, ಕೆಜಿಎಫ್ (KGF) ಶಾಸಕಿ ರೂಪಕಲಾ (Roopkala) ಮೇಲೆ ಆಕ್ರೋಶಗೊಂಡು ಸ್ಥಳೀಯರು ಕಲ್ಲು ಎಸೆಯಲು ಮುಂದಾಗಿದ್ದ ಘಟನೆ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ನಡೆದಿದೆ. ಪೊಲೀಸರ (Police) ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸದ್ಯ ಪೊಲೀಸರು ಕಲ್ಲು ತೂರಲು ಮುಂದಾದ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೇತಮಂಗಲದಿಂದ ವಿ. ಕೋಟೆ ತೆರಳುವ ಹಳೆ ಮದ್ರಾಸ್ ರಸ್ತೆ ಕಾಮಗಾರಿ ಪುನಃ ಆರಂಭವಾಗಿದೆ. ಹೀಗಾಗಿ ಇಂದು ಶಾಸಕಿ ರೂಪಕಲಾ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಅಗಲೀಕರಣಕ್ಕೆ ಮನೆಗಳ ತೆರವು ಮಾಡುತ್ತಿದ್ದರು. ಇದಕ್ಕೆ ಮನೆ ಮಾಲಿಕರು ವಿರೋಧ ವ್ಯಕ್ತಪಡಿಸಿ ಸಖತ್ ಹೈ ಡ್ರಾಮಾ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆಜಿಎಫ್ ಬಾಬು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಐಟಿ ದಾಳಿ
ಅಲ್ಲದೆ ಓರ್ವ ವ್ಯಕ್ತಿ ಶಾಸಕಿ ರೂಪಕಲಾ ಹಾಗೂ ಜೆಸಿಬಿ ಮೇಲೆ ಕಲ್ಲು ತೂರಲು ಮುಂದಾಗಿದ್ದನು. ಕೂಡಲೆ ಬೇತಮಂಗಲ ಪೊಲೀಸರು ಆತನನ್ನು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Sat, 14 October 23