AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾವಿನಹಣ್ಣು ಮಾರಾಟಕ್ಕೆ ಕೊರೊನಾ ಕಾಕದೃಷ್ಟಿ, ಬೆಳೆಗಾರ ಮಾರುವುದು ಹೇಗೆ?

ಕೋಲಾರ: ಅದು ರಾಜ್ಯದ ಮಾವಿನ ನಗರ ಎಂದೇ ಪ್ರಖ್ಯಾತಿ ಹೊಂದಿರುವ ಜಿಲ್ಲೆ, ಸದ್ಯ ಕೊರೊನಾ ಮಾಹಾಮಾರಿಯಿಂದ ಈ ವರ್ಷ ಮಾವು ಮಾರಾಟ ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದವರಿಗೊಂದು ಹೊಸ ದಾರಿ ಹುಡುಕಿಕೊಟ್ಟಿದೆ, ಈ ಬಾರಿ ರಾಜ್ಯದ ಮಾವಿನ ನಗರಿಯ ಮಾವು ಬಹುತೇಕ ಆನ್​ಲೈನ್​ನಲ್ಲೇ ಸೇಲ್​ ಆಗಲಿದೆ. ಏಷ್ಯಾದಲ್ಲೇ ದೊಡ್ಡದಾದ ಮಾವು ಮಾರುಕಟ್ಟೆ: ಕೋಲಾರ ಜಿಲ್ಲೆಯಲ್ಲಿ ಸುಮಾರು 50ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾನಾ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತೆ. ಹಾಗಾಗಿ ಶ್ರೀನಿವಾಸಪುರ ತಾಲೂಕಿನಲ್ಲಿ ಏಷ್ಯಾದಲ್ಲೇ ದೊಡ್ಡದಾದ […]

ಮಾವಿನಹಣ್ಣು ಮಾರಾಟಕ್ಕೆ ಕೊರೊನಾ ಕಾಕದೃಷ್ಟಿ, ಬೆಳೆಗಾರ ಮಾರುವುದು ಹೇಗೆ?
ಸಾಧು ಶ್ರೀನಾಥ್​
|

Updated on:May 22, 2020 | 9:27 PM

Share

ಕೋಲಾರ: ಅದು ರಾಜ್ಯದ ಮಾವಿನ ನಗರ ಎಂದೇ ಪ್ರಖ್ಯಾತಿ ಹೊಂದಿರುವ ಜಿಲ್ಲೆ, ಸದ್ಯ ಕೊರೊನಾ ಮಾಹಾಮಾರಿಯಿಂದ ಈ ವರ್ಷ ಮಾವು ಮಾರಾಟ ಹೇಗೆ ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದವರಿಗೊಂದು ಹೊಸ ದಾರಿ ಹುಡುಕಿಕೊಟ್ಟಿದೆ, ಈ ಬಾರಿ ರಾಜ್ಯದ ಮಾವಿನ ನಗರಿಯ ಮಾವು ಬಹುತೇಕ ಆನ್​ಲೈನ್​ನಲ್ಲೇ ಸೇಲ್​ ಆಗಲಿದೆ.

ಏಷ್ಯಾದಲ್ಲೇ ದೊಡ್ಡದಾದ ಮಾವು ಮಾರುಕಟ್ಟೆ: ಕೋಲಾರ ಜಿಲ್ಲೆಯಲ್ಲಿ ಸುಮಾರು 50ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾನಾ ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತೆ. ಹಾಗಾಗಿ ಶ್ರೀನಿವಾಸಪುರ ತಾಲೂಕಿನಲ್ಲಿ ಏಷ್ಯಾದಲ್ಲೇ ದೊಡ್ಡದಾದ ಮಾವು ಮಾರುಕಟ್ಟೆ ಇಲ್ಲಿದೆ. ಪ್ರತೀ ವರ್ಷ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ನಾಲ್ಕೈದು ಲಕ್ಷ ಟನ್​ನಷ್ಟು ಮಾವು ವಹಿವಾಟು ನಡೆಯುತ್ತೆ. ಆದ್ರೆ ಈ ವರ್ಷ ಕೊರೊನಾ ವೈರಸ್​ ಭೀತಿಯಿಂದ ಮಾವು ಮಾರುಕಟ್ಟೆಯನ್ನೇ ರದ್ದುಗೊಳಿಸಬೇಕು ಅನ್ನೋ ಕೂಗು ದೊಡ್ಡದಾಗಿ ಕೇಳಿಬರುತ್ತಿದೆ.

ಹೀಗಾಗಲೇ ಕೊರೊನಾ ವೈರಸ್ ಹರಡುವ ಭೀತಿ ಮಾವು ಮಾರುಕಟ್ಟೆಗೂ ಎದುರಾಗಿದೆ. ಮೇ ತಿಂಗಳಾಂತ್ಯಕ್ಕೆ ಮಾವು ಮಾರುಕಟ್ಟೆಯ ಸುಗ್ಗಿ ಶುರುವಾದ್ರೆ ಎರಡುವರೆ ತಿಂಗಳ ಕಾಲ ಮಾವು ವಹಿವಾಟು ನಡೆಯುತ್ತೆ. ಮಾರುಕಟ್ಟೆಯಲ್ಲಿ ಹಗಲಿರುಳು ಐದಾರು ಸಾವಿರ ಜನ ವರ್ತಕರು, ವ್ಯಾಪಾರಿಗಳು ದೇಶದ ನಾನಾ ರಾಜ್ಯಗಳಿಂದ ಬರುತ್ತಾರೆ.

ರೆಡ್​ ಜೋನ್​ಗಳಿಂದಲೂ ಕಾರ್ಮಿಕರು ಬರ್ತಾರೆ: ಮಾವು ಮಂಡಿಯಲ್ಲಿ ಕೆಲಸ ಮಾಡಲು ನೆರೆಯ ಆಂಧ್ರ ಮತ್ತು ತಮಿಳುನಾಡಿನಿಂದಲೂ ಕಾರ್ಮಿಕರು ಬರುತ್ತಾರೆ. ಹಾಗಾಗಿ ಕೊರೊನಾ ರೆಡ್ ಜೋನ್​ಗಳಿಂದಲೂ ಇಲ್ಲಿಗೆ ಕಾರ್ಮಿಕರು, ವರ್ತಕರು ಬರುವುದರಿಂದ ಅಪಾಯ ಗ್ಯಾರಂಟಿ ಅನ್ನೋದೆ ಸದ್ಯದ ಆತಂಕಕ್ಕೆ ಕಾರಣವಾಗಿದೆ. ಜನರ ಆತಂಕವನ್ನು ಅರ್ಥ ಮಾಡಿಕೊಂಡಿರುವ ಎಪಿಎಂಸಿ ಆಡಳಿತ ಮಂಡಳಿ ಕೂಡ ಸರ್ಕಾರದ ನಿರ್ಧಾರವನ್ನು ಪಾಲಿಸಲು ಸಿದ್ಧರಿದ್ದಾರೆ.

ಇನ್ನೂ ಪರಿಸ್ಥಿತಿಯನ್ನರಿತು ಈ ವರ್ಷ ಮಾವು ಮಾರುಕಟ್ಟೆಯನ್ನು ತೆರೆಯೋದೆ ಬೇಡ. ಇದಕ್ಕೆ ಬದಲಾಗಿ ರೈತರ ತೋಟಗಳಿಂದಲೇ ಮಾವು ವಿಲೇವಾರಿ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಎಪಿಎಂಸಿ ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಸ್ಪಷ್ಟ ನಿಲುವನ್ನ ಪ್ರಕಟಮಾಡಿಲ್ಲ. ಹಾಗಾಗಿ ಮಾವು ಮಾರುಕಟ್ಟೆ ಇನ್ನೂ ಗೊಂದಲವಾಗಿಯೇ ಇದೆ.

ಆನ್​ಲೈನ್​ನಲ್ಲಿ ಮಾವು ಮಾರಾಟ: ಈ ಮಧ್ಯೆ ರೈತರ ನೆರವಿಗೆ ನಿಂತಿರುವ ಕೋಲಾರ ತೋಟಗಾರಿಕೆ ಇಲಾಖೆ ಆನ್​ಲೈನ್ ವ್ಯಾಪಾರಕ್ಕೆ ರೈತರನ್ನ ಪ್ರೇರೇಪಿಸುತ್ತಿದೆ. ಹೊಸ ಆ್ಯಪ್​ನೊಂದಿಗೆ ರೈತರನ್ನ ನೋಂದಣಿ ಮಾಡಿಸಿ, ಮಾವು ಖರೀದಿದಾರರಿಗೆ ಬೇಕಾದ ಎಲ್ಲಾ ಮಾಹಿತಿ ಅಂದ್ರೆ ರೈತರ ಹೆಸರು, ಯಾವ ಬಗೆಯ ಮಾವು, ಎಷ್ಟು ಮಾವು, ಬೆಲೆ ಎಲ್ಲವನ್ನೂ ನಿಗದಿ ಮಾಡಲಾಗಿದೆ.

ಇಷ್ಟು ಮಾತ್ರವಲ್ಲದೆ ರೈತರೇ ಬೆಂಗಳೂರಿನಂತಹ ನಗರಗಳಲ್ಲಿ ನೇರವಾಗಿ ಅಪಾರ್ಟ್​ಮೆಂಟ್‌ಗಳಲ್ಲಿ ಮಾರಾಟ ಮಾಡಲು ಕೂಡ ವ್ಯವಸ್ಥೆ ಮಾಡಲು ಚಿಂತನೆ ನಡೆಯುತ್ತಿದೆ. ಅಲ್ಲದೆ ಮಾವು ಬೆಳೆಗಾರರಿಗೆ, ಮಾರುಕಟ್ಟೆಗೆ ಕೊರೊನಾ ಭೀತಿಯಿದ್ದು, ಮಾವು ಬೆಳೆಗಾರರ ಭಾವನೆಯನ್ನು ಅರ್ಥ ಮಾಡಿಕೊಂಡು ವ್ಯವಸ್ಥೆ ಮಾಡೋ ಚಿಂತನೆ ಜಿಲ್ಲಾಡಳಿತದ ಮುಂದಿದೆ.

ಒಟ್ಟಾರೆ ಕೊರೊನಾ ತಂದಿಟ್ಟಿರುವ ಆತಂಕದಲ್ಲಿ ಶ್ರೀನಿವಾಸಪುರ ಮಾವು ಮಾರುಕಟ್ಟೆ ನಡೆಸುವ ಬದಲಾಗಿ ಮಾವು ಮಾರಾಟಕ್ಕೆ ಪರ್ಯಾಯ ವ್ಯವಸ್ಥೆಗಳ ಹುಡುಕಾಟದಲ್ಲಿ ಜಿಲ್ಲೆಯ ಅಧಿಕಾರಿಗಳಿದ್ದಾರೆ. ಆರೋಗ್ಯ ಚೆನ್ನಾಗಿದ್ದು, ಜೀವ ಉಳಿದುಕೊಂಡ್ರೆ ಮತ್ತಷ್ಟು ಬೆಳೆಯನ್ನ ಬೆಳೆದುಕೊಡಬಹುದು. ಹಾಗಾಗಿ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧ ಎನ್ನುತ್ತಾರೆ ಮಾವು ಬೆಳೆಗಾರರು.

Published On - 6:51 pm, Fri, 22 May 20

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ