ರಾಮನ ಬಂಟ ಹನುಮನ ಜನ್ಮಸ್ಥಳದಿಂದ ಅಯೋಧ್ಯೆವರಗೆ ಸೈಕಲ್ ಸವಾರಿ ಹೊರಟ ಯುವಕ
ಕೊರಳಲ್ಲಿ ಕೇಸರಿ ಶಾಲು, ಸೈಕಲ್ ಎದುರು ರಾಮ ಆಂಜನೆಯರ ಪೋಟೊ, ಎದುರಿಗೆ ಭಗದ್ವಜ, ಹಾಕಿಕೊಂಡು ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ತಾಳೇವಾಡ ಗ್ರಾಮದ ಸುರೇಶ, ಹನುಮ ಜನ್ಮಭೂಮಿ ಅಂಜನಾದ್ರಿಯಿಂದ ರಾಮಜನ್ಮ ಭೂಮಿ ಅಯೋದ್ಯೆಗೆ ಸೈಕಲ್ನಲ್ಲಿ ಯಾತ್ರೆ ಆರಂಭಿಸಿದ್ದಾನೆ.
ಕೊಪ್ಪಳ, ಜನವರಿ 10: ಶತಕೋಟಿ ಜನರ ಕನಸಿನ ಪ್ರಭು ಶ್ರೀ ರಾಮಮಂದಿರ (Ram Mandir) ಲೊಕಾರ್ಪಣೆಗೆ ದಿನ ಗಣನೆ ಶುರುವಾಗಿದೆ. ಪ್ರತಿ ಹಿಂದೂವು ರಾಮಮಂದಿರ ದರ್ಶನಕ್ಕೆ ಕಾತುರರಾಗಿದ್ದಾರೆ. ಆದರೆ ಇಲ್ಲೊಬ್ಬ ಯುವಕ ವಿಭಿನ್ನವಾಗಿ ಅಯೋಧ್ಯೆ (Ayodhye) ರಾಮಮಂದಿರ ದರ್ಶನಕ್ಕೆ ತೆರಳಿದ್ದಾನೆ. ಜನವರಿ 22 ರಂದು ಕನಸಿನ ರಾಮಮಂದಿರ ಲೋಕಾರ್ಪಣೆಯಾಗಲಿದೆ, ಈ ಒಂದು ಕ್ಷಣ ಕಣ್ತುಂಬಿಕೊಳ್ಳಲು ಶತಕೋಟಿ ಜನರು ಕಾತುರತೆಯಿಂದ ಕಾದಿದ್ದಾರೆ. ಇದೊಂದು ಐತಿಹಾಸಿಕ ಕ್ಷಣ, ಇಡಿ ದೇಶವೇ ಅಂದು ಹಬ್ಬ ಆಚರಣೆ ಮಾಡಲಿದೆ. ಅಯೋದ್ಯೆಯಲ್ಲಂತೂ ಪ್ರಭು ಶ್ರೀರಾಮನ ಪಟ್ಟಾಭಿಷೇಕ ಮತ್ತೊಮ್ಮೆ ನಡೆಯಲಿದೆ. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳು ಕರ್ನಾಟಕದ ಯುವಕನೊಬ್ಬ ವಿಬಿನ್ನವಾಗಿ ಯಾತ್ರೆ ಆರಂಭಿಸಿದ್ದಾನೆ.
ಹೌದು ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ತಾಳೇವಾಡ ಗ್ರಾಮದ ಸುರೇಶ, ಹನುಮ ಜನ್ಮಭೂಮಿ ಅಂಜನಾದ್ರಿಯಿಂದ ರಾಮಜನ್ಮ ಭೂಮಿ ಅಯೋದ್ಯೆಗೆ ಸೈಕಲ್ನಲ್ಲಿ ಯಾತ್ರೆ ಆರಂಭಿಸಿದ್ದಾನೆ. ಮಂಗಳವಾರ (ಜ.09) ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಅಂಜನೇಯನ ದರ್ಶನ ಪಡೆದು ಸೈಕಲ್ ಯಾತ್ರೆ ಆರಂಭಿಸಿದ್ದಾನೆ. ಏಕಾಂಗಿಯಾಗಿ ಸೈಕಲ್ ಮೂಲಕ ಅಯೋದ್ಯೆ ತಲುಪಿ ಪ್ರಭು ಶ್ರೀರಾಮನ ದರ್ಶನ ಪಡೆಯಲಿದ್ದಾನೆ. ಅಷ್ಟೆ ಅಲ್ಲದೆ ಅಯೋದ್ಯೆಗೆ ತೆರಳುವ ಮಾರ್ಗ ಮದ್ಯ ಬರುವ ಹಳ್ಳಿಗಳಲ್ಲಿ ಪ್ರಭು ಶ್ರೀರಾಮನ ಚಿತ್ರಗಳನ್ನ ಬಿಡಿಸುತ್ತ ಪ್ರಯಾಣ ನಡೆಸಲಿದ್ದಾನೆ.
ಇದನ್ನೂ ಓದಿ: ರಾತ್ರಿ ಸಮಯದಲ್ಲಿ ಅಯೋಧ್ಯೆ ರಾಮಮಂದಿರ ಹೇಗೆ ಕಾಣುತ್ತೆ ನೋಡಿ? ಇಲ್ಲಿದೆ ಫೋಟೋ
ಕೊರಳಲ್ಲಿ ಕೇಸರಿ ಶಾಲು, ಸೈಕಲ್ ಎದುರು ರಾಮ ಆಂಜನೆಯರ ಪೋಟೊ, ಎದುರಿಗೆ ಭಗದ್ವಜ, ಹಾಕಿಕೊಂಡು ಸೈಕಲ್ ತುಳಿತಾ ಅಯೋದ್ಯೆಗೆ ಈ ಯುವಕ ಪ್ರಯಾಣ ಬೆಳೆಸಿದ್ದಾನೆ. ಯುವಕನ ಸೈಕಲ್ ಯಾತ್ರೆ ಬಗ್ಗೆ ತಿಳಿದ ಗಂಗಾವತಿಯ ಹಿಂದೂಪರ ಸಂಘಟನೆಯ ಮುಖಂಡರು ಯುವಕನಿಗೆ ಸನ್ಮಾನ ಮಾಡಿ, ಯಾತ್ರೆಗೆ ಶುಭಹಾರೈಸಿದ್ದಾರೆ. ಇನ್ನು ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಹ ಸುರೇಶನ ಸೈಕಲ್ ಯಾತ್ರೆ ವಿಷಯ ತಿಳಿದು ಶುಭಹಾರೈಸಿ ಯಾವುದೆ ತೊಂದರೆಯಾಗದೆ ಪ್ರಭು ಶ್ರೀರಾಮನ ದರ್ಶನ ಸಿಗಲಿ, ಅಯೋದ್ಯೆಯ ರಾಮಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲಿ ಎಂದು ಶುಭ ಕೋರಿದ್ದಾರೆ. ಯುವಕನ ಸೈಕಲ್ ಯಾತ್ರೆಯ ಬಗ್ಗೆ ತಿಳಿಯುತ್ತಲೆ ನೂರಾರು ಜನ ಯುವಕರು ಸೇರಿ ಸುರೇಶನಿಗೆ ಶುಭಹಾರೈಸಿ ಬಿಳ್ಕೊಟ್ಟಿದ್ದಾರೆ.
ಸದ್ಯ ಅಂಜನಾದ್ರಿಯಿಂದ ಹೊರಟ ಯುವಕನ ಸೈಕಲ್ ಯಾತ್ರೆ, ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರದ ಮೂಲಕವಾಗಿ ಉತ್ತರ ಪ್ರದೇಶದ ಅಯೋದ್ಯೆಯೆಡೆಗೆ ಪ್ರಯಾಣ ಸಾಗಲಿದೆ. ಹನುಮನ ಸ್ಥಳದಿಂದ ರಾಮನ ಸ್ಥಳಕ್ಕೆ ಸೈಕಲ್ ಮೂಲಕ ಹೊರಟ ವ್ಯಕ್ತಿಗೆ ಪ್ರಭು ಶ್ರೀರಾಮ ಹಾಗೂ ಆಂಜನೆಯನ ಆಶಿರ್ವಾದ ಇರಲಿ, ಎಂಬುದೆ ಎಲ್ಲರ ಆಶಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:34 am, Wed, 10 January 24