ಅದು ಉತ್ತರ ಕರ್ನಾಟಕದಲ್ಲಿಯೇ ಸುಪ್ರಸಿದ್ದ ದೇವಸ್ಥಾನ. ಆ ದೇವಿಗೆ ಭಕ್ತಿಯಿಂದ ನಮಿಸಿದ್ರೆ ಇಷ್ಟಾರ್ಥಗಳು ಈಡೇರುತ್ತವೆ ಅನ್ನೋ ಪ್ರತಿತಿಯಿದೆ. ಇನ್ನು ಅನೇಕರು ತಮ್ಮ ಇಷ್ಟಾರ್ಥಗಳ ಸಂಕಲ್ಪಕ್ಕೆ ಸೀಗಿ ಹುಣ್ಣಿಮೆ ದಿನ ದೇವಿ ದೇವಸ್ಥಾನಕ್ಕೆ ಬರ್ತಾರೆ. ಹೀಗಾಗಿ ರಾಜ್ಯ, ನೆರೆಯ ರಾಜ್ಯಗಳಿಂದ ಇಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಇನ್ನೊಂದಡೆ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಬೇಗನೆ ದರ್ಶನ ಪಡೆಯಲು ಭಕ್ತರ ದಂಡೆ ದೇವಸ್ಥಾನಕ್ಕೆ ಬಂದಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಬರಿ ಜನ, ಜನ. ದೇವಸ್ಥಾನದೊಳಗೆ, ಹೊರಗೆ ಉದ್ದುದ್ದ ಸಾಲಿನಲ್ಲಿ ನಿಂತಿದ್ದ ಸಾವಿರಾರು ಜನ, ದೇವಿ ದರ್ಶನಕ್ಕೆ ಗಂಟೆಗಂಟೆಲೆ ಕಾದು ನಿಂತಿದ್ದರು. ಒಂದಡೆ ಜನಸಾಗರವೇ ಇದ್ದರೆ, ಮತ್ತೊಂದಡೆ ಹೂವುಗಳಿಂದ ದೇವಿಗೆ ಅಲಂಕಾರ ಮಾಡಲಾಗಿತ್ತು. ಇಂತಹದೊಂದು ದೃಶ್ಯಗಳು ಕಂಡಿದ್ದು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಸುಪ್ರಸಿದ್ದ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ.
ಹೌದು ಇಡೀ ಉತ್ತರ ಕರ್ನಾಟಕದಲ್ಲಿಯೇ ಸುಪ್ರಸಿದ್ದ ಎನಿಸಿರುವ ಹುಲಗಿ ಹುಲಿಗೆಮ್ಮ ದೇವಸ್ಥಾನದಲ್ಲಿ ಇಂದು ಭಕ್ತರ ದಂಡೆ ಇತ್ತು. ರಾಜ್ಯ ಮತ್ತು ನೆರೆಯ ರಾಜ್ಯಗಳಿಂದ ತಂಡೋಪತಂಡವಾಗಿ ಬಂದಿದ್ದ ಸಾವಿರಾರು ಜನರು, ಹುಲಿಗೆಮ್ಮ ದೇವಿಯ ದರ್ಶನ ಪಡೆದು ಪುನಿತರಾದರು. ಇನ್ನು ಇಂದು ಶೀಗೆ ಹುಣ್ಣಿಮೆ. ಭಕ್ತರು, ತಮ್ಮ ಇಷ್ಟಾರ್ಥಗಳ ಈಡಿರಿಕೆಗಾಗಿ ಈ ಹುಣ್ಣಿಮೆಯ ದಿನ ದೇವಸ್ಥಾನಕ್ಕೆ ಬರೋ ಭಕ್ತರು ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಹರಕೆ ಹೊತ್ತುಕೊಳ್ಳೋ ಭಕ್ತರು,ಮುಂದಿನ ಐದು ಹುಣ್ಣಿಮೆಗೆ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಶೀಗೆ ಹುಣ್ಣಿಮೆ ದಿನವೇ ಹರಕೆ ಹೊತ್ತುಕೊಳ್ಳುವದರಿಂದ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ವಿವಿದ ರೀತಿಯ ಹರಕೆಗಳನ್ನು ಹೊತ್ತುಕೊಂಡು, ದೇವಿಯ ದರ್ಶನ ಪಡೆದ್ರು. ಹೆಚ್ಚಿನ ಜನರು ಬಂದಿದ್ದರಿಂದ, ದೇವಸ್ಥಾನದಲ್ಲಿ ಉದ್ದುದ್ದ ಕ್ಯೂ, ಎಲ್ಲಿ ನೋಡಿದ್ರು ಕೂಡಾ ಜನರ ದಂಡು ಸಾಮಾನ್ಯವಾಗಿತ್ತು.
ಇನ್ನು ಚಂದ್ರಗ್ರಹಣ ಹಿನ್ನೆಲೆಯಲ್ಲಿ, ಸಂಜೆ ಏಳು ಗಂಟೆವರಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಏಳು ಗಂಟೆ ನಂತರ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಬಂದ್ ಮಾಡಲಾಗುತ್ತಿದೆ. ನಾಳೆ ಮುಂಜಾನೆ ಆರು ಗಂಟೆಗೆ ವಿಶೇಷ ಪೂಜೆ ಮಾಡಿ, ಬಾಗಿಲು ತೆರಯಲಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಕೂಡಾ ನಡೆಸಲಾಗುತ್ತದೆಯಂತೆ.
ನಾಳೆ ಮುಂಜಾನೆ ಆರು ಗಂಟೆಯಿಂದ ದೇವಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹೀಗಾಗಿ ಗ್ರಹಣಕ್ಕೂ ಮುನ್ನವೇ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದ್ರು. ಇನ್ನು ಗ್ರಹಣ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿತ್ತು. ಕೇವಲ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.
ಹುಲಗಿ ಹುಲಿಗೆಮ್ಮ ದೇವಿ, ತುಂಬಾ ಪವರ್ ಪುಲ್ ದೇವತೆ ಅಂತ ಸುಪ್ರಸಿದ್ದಿ ಪಡೆದಿದ್ದಾಳೆ. ಹೀಗಾಗಿ ಶೀಗೆ ಹುಣ್ಣಿಮೆಯ ದಿನ, ದೇವಿಯ ದರ್ಶನ ಮಾಡಿದ್ರೆ, ತಮ್ಮ ಕಷ್ಟಗಳು ನಿವಾರಣೆಯಾಗುತ್ತವೆ ಅನ್ನೋ ನಂಬಿಕೆ ಕೂಡಾ ಜನರಲ್ಲಿದೆ. ಹೀಗಾಗಿ ಹೆಚ್ಚಿನ ಭಕ್ತರು ಇಂದು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ