ಆಂಜನೇಯ ಜನ್ಮಸ್ಥಳ ವಿವಾದ; ಮಹಾರಾಷ್ಟ್ರದ ನಾಸಿಕ್​​ನಲ್ಲಿ ಧರ್ಮ‌ ಸಂಸದ್ ಸಭೆ ಆರಂಭ; ಹನುಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷರಿಗೆ ಪೊಲೀಸರ ನೋಟಿಸ್

ಆಂಜನೇಯ ಜನ್ಮಸ್ಥಳ ವಿವಾದ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್​​ನ ಅಂಜನೇರಿ ಗ್ರಾಮದಲ್ಲಿ ಧರ್ಮ‌ ಸಂಸದ್ ಸಭೆ ಆರಂಭವಾಗಿದೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೂ ಸಭೆ ನಡೆಯಲಿದೆ. ಸಭೆಯಲ್ಲಿ ಸನ್ಯಾಸಿಗಳು, ಧಾರ್ಮಿಕ ಮುಖಂಡರು ಭಾಗಿಯಾಗಿದ್ದಾರೆ.

ಆಂಜನೇಯ ಜನ್ಮಸ್ಥಳ ವಿವಾದ; ಮಹಾರಾಷ್ಟ್ರದ ನಾಸಿಕ್​​ನಲ್ಲಿ ಧರ್ಮ‌ ಸಂಸದ್ ಸಭೆ ಆರಂಭ; ಹನುಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷರಿಗೆ ಪೊಲೀಸರ ನೋಟಿಸ್
ಅಂಜನಾದ್ರಿ ಬೆಟ್ಟ
Follow us
TV9 Web
| Updated By: ವಿವೇಕ ಬಿರಾದಾರ

Updated on: May 31, 2022 | 10:41 AM

ಕೊಪ್ಪಳ:  ಆಂಜನೇಯ (Anjaneya) ಜನ್ಮಸ್ಥಳ ವಿವಾದ ಹಿನ್ನೆಲೆ ಮಹಾರಾಷ್ಟ್ರದ (Mharashtra) ನಾಸಿಕ್​​ನ (Nasik) ಅಂಜನೇರಿ ಗ್ರಾಮದಲ್ಲಿ ಧರ್ಮ‌ ಸಂಸದ್ ಸಭೆ ಆರಂಭವಾಗಿದೆ. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೂ ಸಭೆ ನಡೆಯಲಿದೆ. ಸಭೆಯಲ್ಲಿ ಸನ್ಯಾಸಿಗಳು, ಧಾರ್ಮಿಕ ಮುಖಂಡರು ಭಾಗಿಯಾಗಿದ್ದಾರೆ. ಆಂಜನೇಯ ಹುಟ್ಟಿರುವುದು ಕರ್ನಾಟಕದಲ್ಲಿಯೇ ಎಂದು ಧರ್ಮ‌ ಸಂಸದ್​ ಸಭೆಯಲ್ಲಿ ಘೋಷಣೆ ಮಾಡಿದ್ದೇವೆ ಎಂದು ಟಿವಿ9ಗೆ ಗೋವಿಂದಾನಂದ ಸರಸ್ವತಿ ಶ್ರೀಗಳು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ರಾಷ್ಟ್ರಕವಿ ಕುವೆಂಪು ಬಳಿಕ ಬಸವಣ್ಣ ಬಸವಣ್ಣನ ಪಠ್ಯ ಪರಿಷ್ಕರಣೆಯ ಚರ್ಚೆ ಆರಂಭ; ಸಾಮಾಜಿಕ ಜಾಲತಾಣದಲ್ಲಿ ವೈರಲ್

ಹನುಮ ಜನ್ಮಸ್ಥಳ ಯಾವದು? ಕರ್ನಾಟಕದ ಕೊಪ್ಪಳದ ಆಂಜನಾದ್ರಿ ಬೆಟ್ಟವಾ?  ಮಹಾರಾಷ್ಟ್ರ ದ ನಾಶಿಕ್ ದಲ್ಲಿ ಹುಟ್ಟಿರೋದಾ ? ಅಥವಾ ಆಂದ್ರಪ್ರದೇಶದ ತಿರುಪತಿ ಬೆಟ್ಟವಾ ಅನ್ನೋ ಬಗ್ಗೆ ಧರ್ಮ ಸಭೆಯಲ್ಲಿ ಚರ್ಚೆಯಾಗಲಿದೆ. ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಪ್ರಮುಖ ರಾಜ್ಯಗಳ 25 ಸಂತರು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಕರ್ನಾಟಕದಿಂದ ಗೋವಿಂದ್ ಆನಂದ ಶ್ರೀ ಭಾಗಿಯಾಗಿದ್ದಾರೆ. ಗೋವಿಂದ್ ಆನಂದ್, ಹನುಮ ಜನ್ಮ ಭೂಮಿ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ.

ಇದನ್ನು ಓದಿ: ಮಂದಿರ ವರ್ಸಸ್​ ಮಸೀದಿ ವಿವಾದ: ಶಾಸಕ ಅಭಯ್‌ ಪಾಟೀಲ್ ವಿರುದ್ಧ ಮಾಜಿ ಶಾಸಕ ಫಿರೋಜ್ ಸೇಠ್​ ವಾಗ್ದಾಳಿ

ಇವರಿಗೆ ಮಹಾರಾಷ್ಟ್ರ ಪೊಲೀಸ್ ನೋಟೀಸ್ ನೀಡಿದ್ದಾರೆ. ಸ್ವಾಮೀಜಿ ಅವರಿಗೆ ನಾಸಿಕನ ತ್ರೈಂಬಕೇಶ್ವರ ಠಾಣೆ ಪೊಲೀಸರು ನೋಟೀಸ್ ನೀಡಿದ್ದಾರೆ. ಅಂಜನೇರಿ ಗ್ರಾಮಸ್ಥರ ಅರ್ಜಿ ಆಧರಿಸಿ ನೋಟೀಸ್ ನೀಡಲಾಗಿದೆ. ಅಂಜನೇರಿ ಹನುಮಾನ್ ಜನ್ಮಸ್ಥಳದ ಬಗ್ಗೆ ನೀವು ಅಪಪ್ರಚಾರ ಮಾಡಿದ್ದಿರಿ. ಇದು ಅಂಜನೇರಿ ಗ್ರಾಮಸ್ಥರ ಭಾವನೆಗೆ ಧಕ್ಕೆ ತಂದಿದೆ. ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ ಎಂದು ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ. ನಿನ್ನೆ ಶ್ರೀಗಳನ್ನು ತ್ರೈಂಬಕೇಶ್ವರ ಪೊಲೀಸ್ ‌ಠಾಣೆಗೆ ಪೊಲೀಸರು ಕರೆಯಿಸಿಕೊಂಡಿದ್ದರು. ಗೋವಿಂದ ನಂದ ಸ್ವಾಮೀಜಿ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಖಚಿತ ತ್ರೈಂಬಕೇಶ್ವರ‌ ಪೊಲೀಸರು ಪಡಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್